
ಮೈಸೂರು: ದೀಪಾವಳಿ ಹಬ್ಬದ ದಿನವೇ ಪತ್ನಿ ಹತ್ಯೆಗೈದು ಶವವನ್ನು ಸುಟ್ಟುಹಾಕಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ದೊಡ್ಡಮುಲಗೋಡು ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ(22) ಹತ್ಯೆಯಾದ ಮಹಿಳೆ.
ದೊಡ್ಡಮುಲಗೂಡು ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಆರೋಪಿ ರಮೇಶ್(30), ದೀಪಾವಳಿ ಹಬ್ಬದ ದಿನವೇ ಹೆಂಡತಿಗೆ ಬೆಂಕಿಯಿಟ್ಟು ಸುಟ್ಟಿದ್ದಾನೆ. ಮೊದಲು ಪತ್ನಿಯನ್ನು ಕೊಲೆ ಮಾಡಿ ನಂತರ ಸೀಮೆಎಣ್ಣೆ ಸುರಿದು ಮೃತದೇಹವನ್ನು ಸುಟ್ಟುಹಾಕಿದ್ದಾನೆ. ಬಳಿಕ ಆರೋಪಿ ಎಸ್ಕೇಪ್ ಆಗಿದ್ದು ತಲೆ ಮರಿಸಿಕೊಂಡಿದ್ದಾನೆ. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಹಾಗೂ ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 10 ಜನ ಸಾವು