ದಿಢೀರ್ ಹಳೇ ಪ್ರಿಯಕರನ ಹೆಸರಲ್ಲಿ ಬಂದಿತ್ತು ಕಾಲ್.. ಇದನ್ನು ನಂಬಿದ ಗೃಹಿಣಿಯ ಕತೆ ಏನಾಯ್ತು ಗೊತ್ತಾ?
ಬೆಂಗಳೂರು: ಹಣದ ಆಸೆಗೆ ತನ್ನ ಆಪ್ತ ಸ್ನೇಹಿತೆಗೆ ದೋಖಾ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿ ಅನು ಅಲಿಯಾಸ್ ಅಪರ್ಣನನ್ನು ವೈಟ್ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರು ಅಂದ್ರೆ ನಮ್ಮ ನೆರಳಿನ ಹಾಗೆ ಇರಬೇಕು ಅಂತ ಇಷ್ಟಪಡೋ ಮಂದಿಯೇ ಹೆಚ್ಚು. ಅದರಲ್ಲೂ ತಮ್ಮ ಕಷ್ಟ-ಸುಖಗಳನ್ನು ಅವರ ಬಳಿ ಹಂಚಿಕೊಳ್ಳುತ್ತಾರೆ. ಕುಟುಂಬದವರಿಗಿಂತ ಹೆಚ್ಚಿನ ವಿಶ್ವಾಸ ಇಡ್ತಾರೆ. ಆದರೆ ಅದೇ ಸ್ನೇಹಿತರು ಕಂಟಕವಾದ್ರೆ.. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅನು ತನ್ನ ಆಪ್ತ […]

ಬೆಂಗಳೂರು: ಹಣದ ಆಸೆಗೆ ತನ್ನ ಆಪ್ತ ಸ್ನೇಹಿತೆಗೆ ದೋಖಾ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿ ಅನು ಅಲಿಯಾಸ್ ಅಪರ್ಣನನ್ನು ವೈಟ್ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸ್ನೇಹಿತರು ಅಂದ್ರೆ ನಮ್ಮ ನೆರಳಿನ ಹಾಗೆ ಇರಬೇಕು ಅಂತ ಇಷ್ಟಪಡೋ ಮಂದಿಯೇ ಹೆಚ್ಚು. ಅದರಲ್ಲೂ ತಮ್ಮ ಕಷ್ಟ-ಸುಖಗಳನ್ನು ಅವರ ಬಳಿ ಹಂಚಿಕೊಳ್ಳುತ್ತಾರೆ. ಕುಟುಂಬದವರಿಗಿಂತ ಹೆಚ್ಚಿನ ವಿಶ್ವಾಸ ಇಡ್ತಾರೆ. ಆದರೆ ಅದೇ ಸ್ನೇಹಿತರು ಕಂಟಕವಾದ್ರೆ.. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅನು ತನ್ನ ಆಪ್ತ ಗೆಳತಿಯ ಹಳೇ ಪ್ರೇಮದ ವಿಚಾರವನ್ನು ತಿಳಿದ ಬಳಿಕ ಗೆಳತಿಗೆ ಬ್ಲಾಕ್ ಮೇಲ್ ಮಾಡಿ ಹಣ ಮಾಡಲು ಸ್ಕೆಚ್ ಹಾಕಿದ್ದಾಳೆ. ಹಳೇ ಪ್ರಿಯಕರನ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ಪಡೆದು ಮೋಸ ಮಾಡುತ್ತಿದ್ದಳಂತೆ.
ತನ್ನ ಗೆಳತಿಯ ಲವ್ ಸ್ಟೋರಿ ತಿಳಿದುಕೊಂಡಿದ್ದ ಅನು ಅದನ್ನೇ ಬಂಡವಾಳ ಮಾಡಿಕೊಂಡು ಹಣಕ್ಕೋಸ್ಕರ ಪ್ರಿಯಕರನ ಹೆಸರಲ್ಲಿ ಸಂದೇಶ ಕಳುಹಿಸಿದ್ದಳಂತೆ. ಫೇಕ್ ಮೆಸೇಜ್ನ್ನು ನೋಡಿ ಸಂತ್ರಸ್ತೆ ಗಾಬರಿಗೊಂಡಿದ್ರು. ನಂತರ ನಿನ್ನ ಹಳೇ ಬಾಯ್ಫ್ರೆಂಡ್ನ ಈಗಿನ ಪ್ರಿಯತಮೆ ನಾನು ಎಂದು ಪರಿಚಯ ಮಾಡಿಕೊಂಡು ನಿನ್ನ ಹಾಗೂ ಹಳೇ ಪ್ರಿಯತಮನ ಫೋಟೋಗಳು ನನ್ನ ಬಳಿ ಇವೆ. ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ ಎಂದು ಹಣಕ್ಕೆ ಬೇಡಿಕೆ ಇಟ್ಟು ಒಂದು ಲಕ್ಷ ಹಣವನ್ನ ಅಪರ್ಣ ಅಕೌಂಟಿಗೆ ಕಳಿಸುವಂತೆ ಡಿಮ್ಯಾಂಡ್ ಮಾಡಿದ್ದಳಂತೆ.
ಹಣ ನೀಡದಿದ್ದರೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೇನೆ. ಫೋಟೋ, ವಿಡಿಯೋಗಳನ್ನು ಮನೆಯವರಿಗೆ ಕಳಿಸ್ತೇನೆಂದು ಬೆದರಿಕೆ ಹಾಕಿ ನಿರಂತರ ಬ್ಲ್ಯಾಕ್ಮೇಲ್ ಮಾಡಿ ಸುಮಾರು ₹1.25 ಕೋಟಿ ವಸೂಲಿ ಮಾಡಿದ್ದಳಂತೆ. ಹೀಗಾಗಿ ವೈಟ್ಫೀಲ್ಡ್ ಠಾಣೆ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಅಪರ್ಣನನ್ನು ಅರೆಸ್ಟ್ ಮಾಡಿದ್ದಾರೆ.
Published On - 9:39 am, Sun, 15 November 20