ಪೊಲೀಸರ ಸೋಗಿನಲ್ಲಿ ಬಂದ ಖದೀಮರು ದೋಚಿದ ಚಿನ್ನವೆಷ್ಟು? ನೌಕರನ ಸಮಯ ಪ್ರಜ್ಞೆ ಕಳ್ಳರಿಗೆ ಮುಳುವಾಗಿದ್ದೇಗೆ?

ಪೊಲೀಸರ ಸೋಗಿನಲ್ಲಿ ಬಂದ ಖದೀಮರು ದೋಚಿದ ಚಿನ್ನವೆಷ್ಟು? ನೌಕರನ ಸಮಯ ಪ್ರಜ್ಞೆ ಕಳ್ಳರಿಗೆ ಮುಳುವಾಗಿದ್ದೇಗೆ?

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು 800ಗ್ರಾಂ ಚಿನ್ನ, ದಾಖಲೆ ಕಳವು ಮಾಡಿರುವ ಆರೋಪದ ಮೇಲೆ ಹಲಸೂರು ಗೇಟ್‌ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್‌ನ ನಗರ್ತಪೇಟೆಯಲ್ಲಿ ನಡೆದಿದೆ. ಚಿನ್ನಭಾರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರ್ಸ್​ಗೆ ನುಗ್ಗಿದ ಆರು ಜನ ಪೊಲೀಸ ವೇಷಧರಿಸಿದ್ದ ಕಳ್ಳರು ದೀಪಾವಳಿ ಹಬ್ಬಕ್ಕೆ ನಕಲಿ‌ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿರುವುದರಿಂದ ನಿಮ್ಮ ಅಂಗಡಿಯನ್ನು ರೇಡ್ ಮಾಡುತ್ತಿದ್ದೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ. ಮಾಲೀಕನಿಗೆ ಕರೆ ಮಾಡಿದ್ದ ಕಳ್ಳರು ಹೇಳಿದ್ದೇನು? […]

pruthvi Shankar

| Edited By: Ayesha Banu

Nov 15, 2020 | 10:56 AM

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು 800ಗ್ರಾಂ ಚಿನ್ನ, ದಾಖಲೆ ಕಳವು ಮಾಡಿರುವ ಆರೋಪದ ಮೇಲೆ ಹಲಸೂರು ಗೇಟ್‌ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್‌ನ ನಗರ್ತಪೇಟೆಯಲ್ಲಿ ನಡೆದಿದೆ.

ಚಿನ್ನಭಾರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರ್ಸ್​ಗೆ ನುಗ್ಗಿದ ಆರು ಜನ ಪೊಲೀಸ ವೇಷಧರಿಸಿದ್ದ ಕಳ್ಳರು ದೀಪಾವಳಿ ಹಬ್ಬಕ್ಕೆ ನಕಲಿ‌ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿರುವುದರಿಂದ ನಿಮ್ಮ ಅಂಗಡಿಯನ್ನು ರೇಡ್ ಮಾಡುತ್ತಿದ್ದೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ.

ಮಾಲೀಕನಿಗೆ ಕರೆ ಮಾಡಿದ್ದ ಕಳ್ಳರು ಹೇಳಿದ್ದೇನು? ಕಿರಾತಕರು ರೇಡ್​ ನೆಪದಲ್ಲಿ 800 ಗ್ರಾಂ ನಷ್ಟು ಚಿನ್ನಭಾರಣ ಹಾಗೂ ದಾಖಲೆಗಳನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ ಕೋಲ್ಕತ್ತಾದಲ್ಲಿದ್ದ ಮಾಲೀಕನಿಗೆ ಕರೆ ಮಾಡಿದ ಕಳ್ಳರು ನಿಮ್ಮ ಅಂಗಡಿ‌ ಮೇಲೆ ರೇಡ್ ಮಾಡಿದ್ದೇನೆ ಹೀಗಾಗಿ ನೀವು ಪೊಲೀಸ್ ಠಾಣೆಗೆ ಬನ್ನಿ ಎಂದು ಬೆದರಿಸಿದ್ದಾರೆ.

ಕೋಲ್ಕತ್ತಾದಿಂದ ಬಂದ ಗೀತಾ ಜುವೈಲರ್ಸ್ ಮಾಲೀಕ ಕಾರ್ತಿಕ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಬಂದು ಈ ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಖಾಕಿ ಸೋಗಿನಲ್ಲಿ ಬಂದಿದ್ದ ಕಳ್ಳರ ಆಟ ಬೆಳಕಿಗೆ ಬಂದಿದೆ. ಜುವೈಲರ್ಸ್ ಮಾಲೀಕ ಕಾರ್ತಿಕ್​ನಿಂದ ದೂರು ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ದೂರಿನ್ವಯ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದರು.

ಜೀಪ್ ನಂಬರ್ ಆಧಾರದ ಮೇಲೆ ನಾಲ್ವರ ಬಂಧನ.. ತ್ವರಿತ ಕಾರ್ಯಾಚರಣೆ ಮಾಡಿಸಿದ ಪೊಲೀಸರು, ಕಳ್ಳರು ಬಂದಿದ್ದ ಜೀಪ್ ನಂಬರ್ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅದೃಷ್ಟವೆಂಬಂತೆ ಕಳ್ಳರು ದರೋಡೆಗೆ ತಂದಿದ್ದ ಜೀಪ್ ನಂಬರ್ ಅನ್ನು ನೌಕರ ನೆನಪಿನಲ್ಲಿಟ್ಟುಕೊಂಡಿದ್ದ. ಹೀಗಾಗಿ ಇದರ ಆಧಾರದ ಮೇಲೆ ನಾಲ್ವರನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ನಾಗಮಂಗಲ ಮೂಲದ ನಾಲ್ವರನ್ನ ಬಂಧಿಸಿರುವ ಹಲಸೂರು ಗೇಟ್ ಪೊಲೀಸರು ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada