ಸಂಪ್ರದಾಯ ಬದಿಗಿಟ್ಟು.. ಹಾಸನಾಂಬ ದೇಗುಲ ಮುಚ್ಚಲು ನಿರ್ಧಾರ: ಜಿಲ್ಲಾಡಳಿತದ ನಡೆಗೆ ಭಕ್ತರ ಆಕ್ರೋಶ

ಸಂಪ್ರದಾಯ ಬದಿಗಿಟ್ಟು.. ಹಾಸನಾಂಬ ದೇಗುಲ ಮುಚ್ಚಲು ನಿರ್ಧಾರ: ಜಿಲ್ಲಾಡಳಿತದ ನಡೆಗೆ ಭಕ್ತರ ಆಕ್ರೋಶ

ಹಾಸನ: ವರ್ಷಕ್ಕೆ ಒಮ್ಮೆ ದರ್ಶನ ನೀಡೋ ಹಾಸನಾಂಬ ದೇವಿಯ ದರ್ಶನಕ್ಕೆ ಲಕ್ಷಾಂತರ ಮಂದಿ ಭಕ್ತರು ಬಂದು ಹೋಗ್ತಾರೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ದರ್ಶನಕ್ಕೆ ಕೆಲವು ನಿರ್ಬಂಧನೆಗಳನ್ನು ವಿಧಿಸಲಾಗಿದೆ. ಆದರೂ ಸಹ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಈ ನಡುವೆ ನಾಳೆ ಹಾಸನಾಂಬ ದೇಗುಲದ ಬಾಗಿಲು ಮುಚ್ಚಲು ಹಾಸನ ಜಿಲ್ಲಾಡಳಿತದ ನಿರ್ಧಾರ ಮಾಡಿದ್ದು ಇದಕ್ಕೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶಾಸ್ತ್ರ, ಸಂಪ್ರದಾಯಕ್ಕೆ ವಿರುದ್ಧವಾಗಿ ಹಾಸನಾಂಬೆ ಬಾಗಿಲು ಮುಚ್ಚಲು ಜಿಲ್ಲಾಡಳಿತ ಸಜ್ಜಾಗಿದೆ. ಹಾಸನಾಂಬೆ ದರ್ಶನ […]

Ayesha Banu

|

Nov 15, 2020 | 12:21 PM

ಹಾಸನ: ವರ್ಷಕ್ಕೆ ಒಮ್ಮೆ ದರ್ಶನ ನೀಡೋ ಹಾಸನಾಂಬ ದೇವಿಯ ದರ್ಶನಕ್ಕೆ ಲಕ್ಷಾಂತರ ಮಂದಿ ಭಕ್ತರು ಬಂದು ಹೋಗ್ತಾರೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ದರ್ಶನಕ್ಕೆ ಕೆಲವು ನಿರ್ಬಂಧನೆಗಳನ್ನು ವಿಧಿಸಲಾಗಿದೆ. ಆದರೂ ಸಹ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಈ ನಡುವೆ ನಾಳೆ ಹಾಸನಾಂಬ ದೇಗುಲದ ಬಾಗಿಲು ಮುಚ್ಚಲು ಹಾಸನ ಜಿಲ್ಲಾಡಳಿತದ ನಿರ್ಧಾರ ಮಾಡಿದ್ದು ಇದಕ್ಕೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಶಾಸ್ತ್ರ, ಸಂಪ್ರದಾಯಕ್ಕೆ ವಿರುದ್ಧವಾಗಿ ಹಾಸನಾಂಬೆ ಬಾಗಿಲು ಮುಚ್ಚಲು ಜಿಲ್ಲಾಡಳಿತ ಸಜ್ಜಾಗಿದೆ. ಹಾಸನಾಂಬೆ ದರ್ಶನ ಕೊನೆಗೊಳಿಸೋ ವಿಚಾರದಲ್ಲಿ ಪುರೋಹಿತರ ನಡುವೆಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಬಲಿಪಾಡ್ಯಮಿಯ ಮರುದಿನ ದೇಗುಲದ ಬಾಗಿಲು ಮುಚ್ಚುತ್ತಿದ್ದ ಸಂಪ್ರದಾಯಕ್ಕೆ ಬ್ರೇಕ್ ಹಾಕಿ. ಈ ಬಾರಿ ಒಂದು ದಿನ ಮುಂಚಿತವಾಗಿ ಬಾಗಿಲು ಮುಚ್ಚಲು ತೀರ್ಮಾನ ಮಾಡಲಾಗಿದೆ. ಪಂಚಾಂಗದ ಉಲ್ಲೇಖ ಕಡೆಗಣಿಸಿ ಸಂಪ್ರದಾಯಕ್ಕೆ ವಿರುದ್ಧವಾಗಿ ಬಾಗಿಲು ಮುಚ್ಚಲಾಗುತ್ತಿದೆ ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.

ಶತಮಾನಗಳ ಸಂಪ್ರದಾಯ ಮುರಿಯುತ್ತಿರೋ ಬಗ್ಗೆ ಹಲವು ಪುರೋಹಿತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೂ ಒಂಟಿಕೊಪ್ಪಲ್ ಪಂಚಾಂಗದಲ್ಲಿನ ಉಲ್ಲೇಖ‌ ಕಡೆಗಣಿಸಲಾಗಿದೆ ಎಂದು ಭಕ್ತರು ಆಕ್ರೋಶಗೊಂಡಿದ್ದಾರೆ. ಒಂದು ದಿನ ಮುಂಚಿತವಾಗಿ ಬಾಗಿಲು ಮುಚ್ಚುತ್ತಿರುವುದರಿಂದ ಮುಂದೆ ಗಂಡಾಂತರ ಕಾದಿದೆ ಎಂದು ಆತಂಕಕ್ಕೊಳಗಾಗಿದ್ದಾರೆ. ನವೆಂಬರ್ 16 ರ ಸೋಮವಾರ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಆದ್ರೆ ಸಂಪ್ರದಾಯಬದ್ಧವಾಗಿ ಬಲಿಪಾಡ್ಯಮಿಯ ಮಾರನೇ ದಿನ ಅಂದ್ರೆ ಮಂಗಳವಾರ ಬಾಗಿಲು ಮುಚ್ಚಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada