ಬೆಂಗಳೂರು: ನಗರದಲ್ಲಿ ದೀಪಾವಳಿಯ ಬೆಳಕು ಪಸರಿಸಿದೆ. ಜನ ಖುಷಿಯಿಂದ ಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಬೆಂಗಳೂರಲ್ಲಿ ಪಟಾಕಿ ಸಿಡಿಸುವ ವೇಳೆ 10 ಮಕ್ಕಳಿಗೆ ಗಾಯಗಳಾಗಿದ್ದು ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ ಸೇರಿದಂತೆ ನಗರದ ಇತರೆ ಆಸ್ಪತ್ರೆಗಳಲ್ಲಿ ಗಾಯಾಳು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
10 ಮಕ್ಕಳ ಪೈಕಿ 4 ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಓರ್ವ ಬಾಲಕ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು 4 ಮಂದಿ ಗಾಯಾಳುಗಳಿಗೆ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ 3 ಮಂದಿಗೆ ನೇತ್ರಧಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಗ್ರೀನ್ ಪಟಾಕಿ ತುಂಬಾ ಸೇಫ್ ಅಂದುಕೊಂಡಿದ್ದೀರಾ? ಟಿವಿ9 ಬಯಲು ಮಾಡುತ್ತಿದೆ ಹಸಿರು ಪಟಾಕಿಯ ಭಯಾನಕ ಸತ್ಯ!