AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video | ಎಂಜಲು ಹಚ್ಚಿ ರೊಟ್ಟಿ ಮಾಡುತ್ತಿದ್ದ ಭೂಪ ಅರೆಸ್ಟ್​: ಕೊರೊನಾ ಹರಡೋಕೆ ಈ ತಂತ್ರವಾ?

ತಂದೂರಿ ರೊಟ್ಟಿ ಮಾಡುತ್ತಿದ್ದ ವ್ಯಕ್ತಿ ರೊಟ್ಟಿಯನ್ನು ಒರೆದು, ಅದಕ್ಕೆ ಎಂಜಲು ಉಗುಳಿ ಬೇಯಿಸುತ್ತಿದ್ದ. ಇದನ್ನು ನೋಡಿದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Viral Video | ಎಂಜಲು ಹಚ್ಚಿ ರೊಟ್ಟಿ ಮಾಡುತ್ತಿದ್ದ ಭೂಪ ಅರೆಸ್ಟ್​: ಕೊರೊನಾ ಹರಡೋಕೆ ಈ ತಂತ್ರವಾ?
ವೈರಲ್​ ಆದ ವಿಡಿಯೋದ ದೃಶ್ಯ
ರಾಜೇಶ್ ದುಗ್ಗುಮನೆ
| Edited By: |

Updated on: Feb 22, 2021 | 4:00 PM

Share

ಕೊರೊನಾ ವೈರಸ್​ ಹರಡುವ ಸಂದರ್ಭದಲ್ಲಿ ತಬ್ಲಿಘಿಗಳು ನಡೆಸಿದ ಸಭೆ ತುಂಬಾನೇ ಚರ್ಚೆಗೆ ಕಾರಣವಾಗಿತ್ತು. ತಬ್ಲಿಘಿಗಳು ಕೊರೊನಾ ವೈರಸ್​ ಹರಡಬೇಕು ಎನ್ನುವ ಉದ್ದೇಶಕ್ಕೇ ಈ ರೀತಿ ಮಾಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅಷ್ಟೇ ಅಲ್ಲ, ಕೊರೊನಾ ಹರಡಬೇಕು ಎನ್ನುವ ಉದ್ದೇಶಕ್ಕೆ ನೋಟುಗಳಿಗೆ ಎಂಜಲು ಹಚ್ಚಿ ನೀಡಲಾಗುತ್ತಿದೆ ಎನ್ನುವ ಮಾತುಗಳೂ ಕೇಳಿ ಬಂದಿದ್ದವು. ಆ ಬಗ್ಗೆ ಅನೇಕ ಫ್ಯಾಕ್ಟ್ ​ಚೆಕ್​ಗಳು ಕೂಡ ನಡೆದವು. ಈಗ ಇಂತಹುದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆ ಸಮಾರಂಭದಲ್ಲಿ ಎಂಜಲು ಹಚ್ಚಿ ರೊಟ್ಟಿ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್​ ಆಗಿದ್ದಾನೆ. ಉತ್ತರ ಪ್ರದೇಶದ ಮೀರತ್​ನಲ್ಲಿ ಅದ್ದೂರಿ ಮದುವೆ ಏರ್ಪಡಿಸಲಾಗಿತ್ತು. ಮದುವೆಗೆ ಸಾವಿರಾರು ಮಂದಿ ಕೂಡ ಸೇರಿದ್ದರು. ಅದ್ದೂರಿ ಕಾರ್ಯಕ್ರಮ ಆಗಿದ್ದರಿಂದ ನಾನಾ ರೀತಿಯ ಅಡುಗೆ ಕೂಡ ಸಿದ್ಧಪಡಿಸಲಾಗಿತ್ತು. ಬಂದ ಅತಿಥಿಗಳಿಗೆ ಬಿಸಿ ಬಿಸಿ ತಂದೂರಿ ರೊಟ್ಟಿ ನೀಡಲು ಕೌಂಟರ್​​ ಒಂದನ್ನು ತೆಗೆಯಲಾಗಿತ್ತು. ಆದರೆ, ಹೇಸಿಗೆಯ ವಿಚಾರ ಎಂದರೆ, ರೊಟ್ಟಿ ಮಾಡುವ ವ್ಯಕ್ತಿ ಎಂಜಲು ಉಗುಳಿ ಬೇಯಿಸುತ್ತಿದ್ದ!

ತಂದೂರಿ ರೊಟ್ಟಿ ಮಾಡುತ್ತಿದ್ದ ವ್ಯಕ್ತಿ ರೊಟ್ಟಿಯನ್ನು ಒರೆದು, ಅದಕ್ಕೆ ಎಂಜಲು ಉಗುಳಿ ಬೇಯಿಸುತ್ತಿದ್ದ. ಇದನ್ನು ನೋಡಿದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರವನ್ನು ಗಂಡು-ಹೆಣ್ಣಿನ ಕಡೆಯವರಿಗೂ ತಿಳಿಸಿದ್ದಾರೆ. ಪೊಲೀಸರು ಸದ್ಯ ಈತನನ್ನು ಅರೆಸ್ಟ್​ ಮಾಡಿದ್ದಾರೆ.

ಬಂಧಿತನ ಹೆಸರು ನೌಷಾದ್​. ಕೊರೊನಾ ವೈರಸ್​ ಹರಡಲು ನೌಷಾದ್​ ಎಂಜಲು ಹಚ್ಚುತ್ತಿದ್ದ ಎಂದು ಆರೋಪಿಸಲಾಗಿದೆ. ಇದೇ ಆರೋಪದ ಅಡಿಯಲ್ಲಿ ನೌಷಾದ್​​ನನ್ನು ಬಂಧಿಸಲಾಗಿದೆ. ಆತನಿಗೆ ಕೊರೊನಾ ವೈರಸ್​ ಇದೇಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. ಕೊರೊನಾ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ತಂದೂರಿ ರೊಟ್ಟಿ ಸಾಮಾನ್ಯ ರೊಟ್ಟಿಗಿಂತ ಭಿನ್ನವಾಗಿರುತ್ತದೆ. ರೊಟ್ಟಿಯನ್ನು ಬೇಯಿಸೋದು ಕೂಡ ಭಿನ್ನವೇ. ರೊಟ್ಟಿಯನ್ನು ಬಂಡಿಯ ಮೇಲೆ ಬೇಯಿಸಿದರೆ, ತಂದೂರಿ ರೊಟ್ಟಿ ಸುಡಲು ಬೇರೆಯದೆ ರೀತಿಯ ಒಲೆ ಇರುತ್ತದೆ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್