ವಾಷಿಂಗ್ಟನ್: ಫ್ಲೋರಿಡಾದಿಂದ ಅಮೆರಿಕದ ಲಾಸ್ ಏಂಜಲೀಸ್ಗೆ ತೆರಳುತ್ತಿದ್ದ ವ್ಯಕ್ತಿ ವೈದ್ಯಕೀಯ ತುರ್ತುಪರಿಸ್ಥಿತಿಗೆ ಒಳಗಾಗಿ ಮೃತಪಟ್ಟಿದ್ದರು. ಅವರು ಮೃತಪಡಲು ಕೊರೊನಾ ಕಾರಣ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
ಡಿ.18ರಂದು 69 ವರ್ಷದ ಇಸಾಯಿಸ್ ಹೆರ್ನಾಂಡೆಜ್ ಒರ್ಲ್ಯಾಂಡೊನಿಂದ ಏಂಜಲೀಸ್ಗೆ ಹೊರಟಿದ್ದರು. ಈ ವೇಳೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ವಿಮಾನವನ್ನು ನ್ಯೂ ಓರ್ಲಿಯನ್ಸ್ನತ್ತ ತಿರುಗಿಸಲಾಗಿತ್ತು. ವಿಮಾನ ಲ್ಯಾಂಡ್ ಆದ ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈಗ ಅವರ ಸಾವಿನ ವರದಿಯಲ್ಲಿ ಅವರಿಗೆ ಕೊರೊನಾ ಇದ್ದ ವಿಚಾರ ದೃಢವಾಗಿದೆ.
ವಿಮಾನ ಏರುವುದಕ್ಕೂ ಮೊದಲು ಇಸಾಯಿಸ್ಗೆ ಕೊರೊನಾದ ಯಾವುದೇ ಲಕ್ಷಣ ಇರಲಿಲ್ಲ. ಅಲ್ಲದೆ, ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ನೆಗೆಟಿವ್ ಎಂದಿತ್ತು. ಹೀಗಾಗಿ, ಅವರಿಗೆ ವಿಮಾನದಲ್ಲಿ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು.
22 ಜನರಿಗೆ ಕೊರೊನಾ
ಕಳೆದ ಕೆಲ ದಿನಗಳಿಂದ ಇಂಗ್ಲೆಂಡ್ನಿಂದ ಭಾರತಕ್ಕೆ ಬಂದ 22 ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಭಾರತ-ಇಂಗ್ಲೆಂಡ್ ನಡುವೆ ವಿಮಾನ ಹಾರಾಟ ಡಿ.31ರವರೆಗೆ ರದ್ದು ಮಾಡಲಾಗಿದೆ.
ಕೊರೊನಾ ಎರಡನೇ ಅಲೆ ಭೀತಿ ಬೆನ್ನಲ್ಲೇ ರಾಜ್ಯದಲ್ಲಿ ಇಳಿಮುಖವಾಯ್ತು ಕೊವಿಡ್ ಪ್ರಕರಣ