ಜಿಲ್ಲಾಡಳಿತದ ಗೊಂದಲದ ನಡೆ, ರಾಯರ ಭಕ್ತರಲ್ಲಿ ಕೊರೊನಾತಂಕ
ರಾಯಚೂರು: ಜಿಲ್ಲಾಡಳಿತದ ನಡೆ ರಾಯರ ಭಕ್ತರಲ್ಲಿ ಗೊಂದಲ ಮೂಡಿಸಿದೆ. ಯಾಕಂದ್ರೆ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳುವುದಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಯಚೂರಿನಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ನಡೆಸಲಿವೆ. ಆದ್ರೆ ಇಲ್ಲಿ ತೊಂದರೆ ಅಂದ್ರೆ ಕರ್ನೂಲ್ ಜಿಲ್ಲೆಯ ಅಧೋನಿಯಲ್ಲಿ 138 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೆ ಜಿಲ್ಲಾಡಳಿತ ಮಂತ್ರಾಲಯಕ್ಕೆ ಹೋಗಿಬಂದವರಿಗೆ 14 ದಿನ ಹೋಂ ಕ್ವಾರಂಟೈನ್ ನಿಗದಿ ಪಡಿಸಿದೆ. ಹೀಗಾಗಿ ಕ್ವಾರಂಟೈನ್ಗೆ ಹೆದರಿ ಮಂತ್ರಾಲಯಕ್ಕೆ ತೆರಳಲು ರಾಯರ ಭಕ್ತರು ಹಿಂದೇಟು ಹಾಕುತ್ತಿದ್ದಾರೆ. ಆಂಧ್ರ ಸರ್ಕಾರ ರಾಯರ […]
ರಾಯಚೂರು: ಜಿಲ್ಲಾಡಳಿತದ ನಡೆ ರಾಯರ ಭಕ್ತರಲ್ಲಿ ಗೊಂದಲ ಮೂಡಿಸಿದೆ. ಯಾಕಂದ್ರೆ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳುವುದಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಯಚೂರಿನಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ನಡೆಸಲಿವೆ.
ಆದ್ರೆ ಇಲ್ಲಿ ತೊಂದರೆ ಅಂದ್ರೆ ಕರ್ನೂಲ್ ಜಿಲ್ಲೆಯ ಅಧೋನಿಯಲ್ಲಿ 138 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೆ ಜಿಲ್ಲಾಡಳಿತ ಮಂತ್ರಾಲಯಕ್ಕೆ ಹೋಗಿಬಂದವರಿಗೆ 14 ದಿನ ಹೋಂ ಕ್ವಾರಂಟೈನ್ ನಿಗದಿ ಪಡಿಸಿದೆ. ಹೀಗಾಗಿ ಕ್ವಾರಂಟೈನ್ಗೆ ಹೆದರಿ ಮಂತ್ರಾಲಯಕ್ಕೆ ತೆರಳಲು ರಾಯರ ಭಕ್ತರು ಹಿಂದೇಟು ಹಾಕುತ್ತಿದ್ದಾರೆ.
ಆಂಧ್ರ ಸರ್ಕಾರ ರಾಯರ ಮಠ ಓಪನ್ ಮಾಡಲು ಇನ್ನು ಅನುಮತಿ ನೀಡಿಲ್ಲ. ಮಂತ್ರಾಲಯ ತಾಲೂಕು ಕೇಂದ್ರದ ವ್ಯಾಪ್ತಿಯಲ್ಲೇ 138 ಕೊರೊನಾ ಕೇಸ್ಗಳಿವೆ. ಇಷ್ಟೆಲ್ಲಾ ಗೊತ್ತಿದ್ರೂ ಕರ್ನಾಟಕ ಸರ್ಕಾರ ಸಾರಿಗೆ ಬಸ್ ಸಂಚಾರ ಆರಂಭಿಸಿದೆ. ಹೀಗಾಗಿ ರಾಯರ ಭಕ್ತರಲ್ಲಿ ಜಿಲ್ಲಾಡಳಿತದ ನಡೆ ಗೊಂದಲ ಮೂಡಿಸಿದೆ.