ರಾಯಚೂರಿನಿಂದ ವಾಪಸಾಗಿದ್ದ ತಂದೆ-ಮಗನಿಗೆ ಕೊರೊನಾ, ಆತಂಕದಲ್ಲಿ ಶಿವನಳ್ಳಿ ಜನ
ಬೆಂಗಳೂರು: ನಗರದ ಶಿವನಳ್ಳಿಯ 9ನೇ ಮುಖ್ಯರಸ್ತೆಯ ನಿವಾಸಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕು ತಗುಲಿರುವ ತಂದೆ-ಮಗ ಇಬ್ಬರು ರಾಯಚೂರಿನಿಂದ ಬೆಂಗಳೂರಿಗೆ ವಾಪಸಾಗಿದ್ದರು. ಕೆಲ ದಿನಗಳ ಹಿಂದೆ ಇಬ್ಬರೂ ರಾಯಚೂರಿಗೆ ಹೋಗಿಬಂದಿದ್ರು. ವಾಪಸಾದ ಬಳಿಕ ಹಲವೆಡೆ ಓಡಾಡಿದ್ದರು. ಇವರಿಗೆ ಕೊರೊನಾ ಸೋಂಕು ಇರುವುದು ನಿನ್ನೆ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ನಿನ್ನೆ ರಾತ್ರಿ ವಿಕ್ಟೋರಿಯಾಗೆ ರವಾನಿಸಲಾಗಿದೆ. ಹೀಗಾಗಿ ಏರಿಯಾ ನಿವಾಸಿಗಳಲ್ಲಿ ಕೊರೊನಾ ಸೋಂಕಿನ ಭಯ ಶುರುವಾಗಿದೆ. ಅಧಿಕಾರಿಗಳು ಸೋಂಕಿತರ ಮನೆ ಸೀಲ್‌ಡೌನ್ ಮಾಡಿದ್ದಾರೆ.
ಬೆಂಗಳೂರು: ನಗರದ ಶಿವನಳ್ಳಿಯ 9ನೇ ಮುಖ್ಯರಸ್ತೆಯ ನಿವಾಸಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕು ತಗುಲಿರುವ ತಂದೆ-ಮಗ ಇಬ್ಬರು ರಾಯಚೂರಿನಿಂದ ಬೆಂಗಳೂರಿಗೆ ವಾಪಸಾಗಿದ್ದರು.
ಕೆಲ ದಿನಗಳ ಹಿಂದೆ ಇಬ್ಬರೂ ರಾಯಚೂರಿಗೆ ಹೋಗಿಬಂದಿದ್ರು. ವಾಪಸಾದ ಬಳಿಕ ಹಲವೆಡೆ ಓಡಾಡಿದ್ದರು. ಇವರಿಗೆ ಕೊರೊನಾ ಸೋಂಕು ಇರುವುದು ನಿನ್ನೆ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ನಿನ್ನೆ ರಾತ್ರಿ ವಿಕ್ಟೋರಿಯಾಗೆ ರವಾನಿಸಲಾಗಿದೆ. ಹೀಗಾಗಿ ಏರಿಯಾ ನಿವಾಸಿಗಳಲ್ಲಿ ಕೊರೊನಾ ಸೋಂಕಿನ ಭಯ ಶುರುವಾಗಿದೆ. ಅಧಿಕಾರಿಗಳು ಸೋಂಕಿತರ ಮನೆ ಸೀಲ್‌ಡೌನ್ ಮಾಡಿದ್ದಾರೆ.