ಸಮುದ್ರ ದಡದಲ್ಲೇ ಸಿಕ್ವು ರಾಶಿ ರಾಶಿ ಮೀನು, ಬಂಗುಡೆ, ಭೂತಾಯಿ ಆರಿಸಿಕೊಳ್ಳಲು ಮುಗಿಬಿದ್ದ ಜನ

ಉಡುಪಿ: ಸಮುದ್ರಕ್ಕೆ ಇಳಿಯದೆ, ದಡದಲ್ಲಿ ಕುಳಿತು ಮೀನು ಹಾರಿಸೋ ಅವಕಾಶ ಸಿಕ್ಕರೆ ಹೇಗಿರುತ್ತೆ..? ಬೇಕಾದಷ್ಟು ಮೀನು ಚೀಲಕ್ಕೆ ತುಂಬಿಸಿಕೊಂಡು ಸಾಕಪ್ಪಾ ಸಾಕು ಅಂತಿದ್ರೆ ನೀವು ನಂಬ್ತೀರಾ..? ಆದ್ರೆ ಈ ದೃಶ್ಯ ನೋಡಿದ್ಮೇಲೆ ನೀವು ನಂಬಲೇಬೇಕು. ಅದೇನ್ ರಷ್.. ಅದೇನ್ ಜನ.. ಸಮುದ್ರಕ್ಕೆ ಇಳಿದಿಲ್ಲ.. ಬಲೆ ಹಾಕಿಲ್ಲ.. ಕಾಲ್ ಕಾಲಲ್ಲೇ ಮೀನುಗಳು ಓಡಾಡ್ತಿವೆ. ಜನ್ರು ನಾ ಮುಂದು ತಾ ಮುಂದು ಅಂತಾ ಪೈಪೋಟಿ ಮೇಲೆ ಮೀನುಗಳನ್ನ ಚೀಲಕ್ಕೆ ತುಂಬಿಸಿಕೊಳ್ತಿದ್ದಾರೆ. ಸಮುದ್ರದಿಂದ ಚಿಮ್ಮಿ ಮೀನು ತಾನಾಗೇ ಬಲೆಗೆ ಬಂದು ಬೀಳ್ತಿದ್ರೆ […]

ಸಮುದ್ರ ದಡದಲ್ಲೇ ಸಿಕ್ವು ರಾಶಿ ರಾಶಿ ಮೀನು, ಬಂಗುಡೆ, ಭೂತಾಯಿ ಆರಿಸಿಕೊಳ್ಳಲು ಮುಗಿಬಿದ್ದ ಜನ

Updated on: Aug 30, 2020 | 7:36 AM

ಉಡುಪಿ: ಸಮುದ್ರಕ್ಕೆ ಇಳಿಯದೆ, ದಡದಲ್ಲಿ ಕುಳಿತು ಮೀನು ಹಾರಿಸೋ ಅವಕಾಶ ಸಿಕ್ಕರೆ ಹೇಗಿರುತ್ತೆ..? ಬೇಕಾದಷ್ಟು ಮೀನು ಚೀಲಕ್ಕೆ ತುಂಬಿಸಿಕೊಂಡು ಸಾಕಪ್ಪಾ ಸಾಕು ಅಂತಿದ್ರೆ ನೀವು ನಂಬ್ತೀರಾ..? ಆದ್ರೆ ಈ ದೃಶ್ಯ ನೋಡಿದ್ಮೇಲೆ ನೀವು ನಂಬಲೇಬೇಕು.

ಅದೇನ್ ರಷ್.. ಅದೇನ್ ಜನ.. ಸಮುದ್ರಕ್ಕೆ ಇಳಿದಿಲ್ಲ.. ಬಲೆ ಹಾಕಿಲ್ಲ.. ಕಾಲ್ ಕಾಲಲ್ಲೇ ಮೀನುಗಳು ಓಡಾಡ್ತಿವೆ. ಜನ್ರು ನಾ ಮುಂದು ತಾ ಮುಂದು ಅಂತಾ ಪೈಪೋಟಿ ಮೇಲೆ ಮೀನುಗಳನ್ನ ಚೀಲಕ್ಕೆ ತುಂಬಿಸಿಕೊಳ್ತಿದ್ದಾರೆ. ಸಮುದ್ರದಿಂದ ಚಿಮ್ಮಿ ಮೀನು ತಾನಾಗೇ ಬಲೆಗೆ ಬಂದು ಬೀಳ್ತಿದ್ರೆ ಮತ್ಸ್ಯಪ್ರಿಯರಿಗಂತೂ ಹಬ್ಬವೇ ಹಬ್ಬ.

ಅಂದ್ಹಾಗೇ, ಉಡುಪಿ ಕಟಪಾಡಿ ಸಮೀಪದ ಮಟ್ಟು ಪ್ರದೇಶದಲ್ಲಿ ಸುಂದರವಾದ ಬೀಚ್ ಇದೆ. ಇಲ್ಲಿನ ನಾಡದೋಣಿ ಮೀನುಗಾರರು ಕೈರಂಪಣಿ ಬಲೆ ಬೀಸಿದ್ರು. ಈ ವೇಳೆ ಬಲೆ ಹರಿದು ಹೋಗುವ ರೀತಿಯಲ್ಲಿ ಮೀನುಗಳು ಸಿಕ್ಕಿದ್ವು. ಬುಟ್ಟಿ ತುಂಬಾ ಮೀನು ತುಂಬಿಸಿಕೊಂಡ ಮೀನುಗಾರರು, ಮಿಕ್ಕಿದ್ದನ್ನ ಫ್ರೀಯಾಗಿ ಜನರಿಗೆ ಹಂಚಿದ್ರು.

ಇನ್ನು ಹೆಚ್ಚು ಮಳೆಯಾದಾಗ ಕಡಲಲ್ಲಿ ತೂಫಾನ್ ಏಳುತ್ತೆ. ಆಗ ಅಲೆಗಳು ತಲೆಗೆಳಗಾಗಿ ರಾಶಿರಾಶಿ ಮೀನುಗಳು ತೀರಕ್ಕೆ ದಾಂಗುಡಿ ಇಡ್ತಾವೆ. ಕಸದ ರಾಶಿಯ ಜೊತೆಗೆ ದಡ ಸೇರುತ್ತವೆ. ವರ್ಷಕ್ಕೆ ಒಂದೆರಡು ಬಾರಿ ಈ ರೀತಿ ಬಂಪರ್ ಫಿಶಿಂಗ್ ಸಿಗುತ್ತೆ. ಬಾಯಲ್ಲಿ ನೀರೂರಿಸೋ ಬಂಗುಡೆ, ಭೂತಾಯಿ, ಕೊಂತಿ, ಎಟ್ಟಿ ಮುಂತಾದ ಮೀನುಗಳು ರಾಶಿರಾಶಿ ಸಿಗುತ್ತವೆ.

ಒಟ್ನಲ್ಲಿ ನಾಡದೋಣಿ ಮೀನುಗಾರರು ಮೊದಲೇ ಕಡುಬಡವರು. ಪ್ರಕೃತಿಯೇ ಅವ್ರಿಗೆ ವರವಾಗಿ ಈ ರೀತಿ ಒಲಿಯುತ್ತೆ. ಸ್ವಾರ್ಥವಿಲ್ಲದ ಮೀನುಗಾರರು ಊರಿನವರಿಗೆಲ್ಲ ಮೀನು ಹಂಚಿಕೊಂಡು ತಿಂದು ಖುಷಿಪಡ್ತಾರೆ.