Trending : ಒಡಿಶಾದ ವಿವಾಹಿತ ಪುರುಷನೊಂದಿಗೆ ತೃತೀಯಲಿಂಗಿ ಮಹಿಳೆಯ ವಿವಾಹ

LGBTQ Marriage : ತನ್ನ ಗಂಡ ತೃತೀಯಲಿಂಗಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವಿಷಯ ತಿಳಿದ ಆಕೆ, ಅವರಿಬ್ಬರಿಗೂ ಮದುವೆ ಮಾಡಿಸಿ ಹಾರೈಸಿದ್ದಾರೆ.

Trending : ಒಡಿಶಾದ ವಿವಾಹಿತ ಪುರುಷನೊಂದಿಗೆ ತೃತೀಯಲಿಂಗಿ ಮಹಿಳೆಯ ವಿವಾಹ
ಸಂಗೀತಾ-ಫಕೀರ್​ ವಿವಾಹಕ್ಕೆ ಸಾಕ್ಷಿಯಾದ ಮಂಗಳಮುಖಿ ಕಿನ್ನರ ಆಯೇಷಾ ಬೆಹೆರಾ ಎಂಬ ಮಂಗಳಮುಖಿ
Updated By: ಶ್ರೀದೇವಿ ಕಳಸದ

Updated on: Sep 15, 2022 | 3:01 PM

Trending : ತೃತೀಯಲಿಂಗಿಗಳೂ ಮನುಷ್ಯರೇ, ಸಮಾಜದಲ್ಲಿ ಬದುಕಲು ಅವರಿಗೂ ಸಮಾನ ಅವಕಾಶಗಳಿವೆ ಎನ್ನುವ ಅರಿವು ಇತ್ತೀಚಿನ ದಿನಗಳಲ್ಲಿ ಹೆಚ್ಚೇ ಆಗುತ್ತಿರುವುದು ಹರ್ಷದಾಯಕ. ಸಮಾಜ ಎಂದರೆ ಅದು ನಮ್ಮನ್ನು ಹೊರತುಪಡಿಸಿ ಸೃಷ್ಟಿಯಾದುದಲ್ಲ, ನಮ್ಮಿಂದಲೇ ಅದು ರಚನೆಗೊಂಡಿರುವುದು. ಹೀಗಿರುವಾಗ ಭಿನ್ನ ಜಾತಿ, ಭಿನ್ನ ಮತ, ಭಿನ್ನ ಅಲೋಚನೆ, ಭಿನ್ನ ಲಿಂಗಿಗಳ ಆಶೋತ್ತರಗಳನ್ನು ಗೌರವಿಸಿ ಒಳಗೊಳ್ಳುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ. ಇಂಥ ತಿಳಿವಳಿಕೆ ಇದ್ದುದರಿಂದಲೇ ಒಡಿಶಾದ ಮಹಿಳೆಯೊಬ್ಬರು ತನ್ನ ಪತಿಯ ವಿವಾಹವನ್ನು ತೃತೀಯಲಿಂಗಿಯ ಮಹಿಳೆಯೊಂದಿಗೆ ಸ್ವತಃ ನೆರವೇರಿಸಿ ಹಾರೈಸಿದ್ದಾರೆ.

ನರ್ಲಾ ಪೊಲೀಸ್​ ವ್ಯಾಪ್ತಿಯಲ್ಲಿರುವ ಕಲಾಹಾಂಡಿಯ ದೇಪುರ್ ಗ್ರಾಮದ ತೃತೀಯ ಲಿಂಗಿ ಮಹಿಳೆಯಾದ ಸಂಗೀತಾ ಮತ್ತು ಧುರ್ಕುಟಿ ಗ್ರಾಮದ ಫಕೀರ್ ನಿಯಾಲ್​ ಇವರಿಬ್ಬರೂ ಮದುವೆಯಾದವರು. ಫಕೀರ್ ಮೊದಲ ಮದುವೆ ಐದು ವರ್ಷಗಳ ಹಿಂದೆ ನಡೆದಿದ್ದು, ಎರಡು ವರ್ಷದ ಮಗವನ್ನು ಹೊಂದಿದ್ದಾರೆ. ಆದರೆ ಒಂದು ವರ್ಷದ ಹಿಂದೆ ಫಕೀರ್​, ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಗೀತಾ ಅವರನ್ನು ಪ್ರೀತಿಸಿದರು. ​ಈ ವಿಷಯವನ್ನು ತಮ್ಮ ಪತ್ನಿಗೆ ತಿಳಿಸಿದರು. ಆಗ ಆಕೆ, ವಿರೋಧ ಅಥವಾ ಅಸಮಾಧಾನ ತೋರುವ ಬದಲು, ಸಮಾಧಾನದಿಂದ ತನ್ನ ಗಂಡನೊಂದಿಗೆ ಈ ವಿಷಯವನ್ನು ಚರ್ಚಿಸಿದರು. ಈ ಪ್ರೀತಿಯು ಸಂಬಂಧಕ್ಕೆ ತಿರುಗಿರುವ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡ ಆಕೆ ಅವರಿಬ್ಬರೂ ಮದುವೆಯಾಗಲು ಒಪ್ಪಿಗೆ ನೀಡಿದರು.

ನಂತರ ಫಕೀರ್ ಹೆಂಡತಿಯೇ, ಖುದ್ದು ಈ ಮದುವೆಗೆ ವ್ಯವಸ್ಥೆ ಮಾಡಿದರು. ಈ ಮದುವೆಯು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಶಾಸ್ತ್ರಗಳನ್ವಯ ನಡೆಯಿತು. ‘ಫಕೀರ್​ ಕುಟುಂಬದವರು, ಅದರಲ್ಲೂ ಅವರ ಹೆಂಡತಿ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದು ನನಗೆ ಬಹಳ ಸಂತೋಷವಾಗಿದೆ’ ಎಂಬ ಸಮಾಧಾನದಲ್ಲಿ ಸಂಗೀತಾ, ಫಕೀರ್​ ಅವರೊಂದಿಗೆ ಹೊಸಬದುಕು ನಡೆಸುವ ಉತ್ಸಾಹದಲ್ಲಿದ್ದಾರೆ.

ಇದನ್ನೂ ಓದಿ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:53 pm, Thu, 15 September 22