ನಾನು ಅಮಾಯಕ, ಮುಗ್ಧ.. ರಾಜಕೀಯದಲ್ಲಿ ಈಗ ಅಂಬೆಗಾಲು ಇಡುತ್ತಿದ್ದೇನೆ -S.T.ಸೋಮಶೇಖರ್

ತನ್ನನ್ನು ತಾನು ಅಮಾಯಕ, ಮುಗ್ಧ ಎಂದು ಕರೆದುಕೊಂಡಿರುವ ಸಹಕಾರ ಸಚಿವ, ನಾನಿನ್ನೂ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರೂ ಮುಖ್ಯಮಂತ್ರಿ ಸ್ಥಾನ ಅನುಭವಿಸಿದವರು. ಅವರಿಗೆ ಎಲ್ಲಾ ರೀತಿಯ ಅಧಿಕಾರವೂ ಸಿಕ್ಕಿದೆ. ಅವರಿಗೆ ಈಗ ಯಾವುದೂ ಬೇಕಾಗಿಲ್ಲ ಎಂದು ಸಹ ಹೇಳಿದ್ದಾರೆ.

ನಾನು ಅಮಾಯಕ, ಮುಗ್ಧ.. ರಾಜಕೀಯದಲ್ಲಿ ಈಗ ಅಂಬೆಗಾಲು ಇಡುತ್ತಿದ್ದೇನೆ -S.T.ಸೋಮಶೇಖರ್
ಎಸ್​ ಟಿ ಸೋಮಶೇಖರ್​
Updated By: KUSHAL V

Updated on: Dec 06, 2020 | 11:54 AM

ಮೈಸೂರು: ನಾನು ಕಾಂಗ್ರೆಸ್​ನಲ್ಲಿದ್ದಾಗ ಆ ಪಕ್ಷದ ಶಿಸ್ತಿನ ಸಿಪಾಯಿ ಅಗಿದ್ದೆ. ನಾನು ಕಾಂಗ್ರೆಸ್ ಸೇರಿದ ನಂತರ ಸಿದ್ದರಾಮಯ್ಯ ಅಲ್ಲಿಗೆ ಬಂದಿದ್ದು. ನಾನು ಕಾಂಗ್ರೆಸ್​ ಟೀಂ ಆಗಿದ್ದೆ ಹೊರತು ಸಿದ್ದರಾಮಯ್ಯ ಟೀಂ ಆಗಿರಲಿಲ್ಲ ಎಂದು ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

‘ನಾನು ಅಮಾಯಕ, ಮುಗ್ಧ, ರಾಜಕೀಯದಲ್ಲಿ ಈಗ ಅಂಬೆಗಾಲು ಇಡುತ್ತಿದ್ದೇನೆ’
ತನ್ನನ್ನು ತಾನು ಅಮಾಯಕ, ಮುಗ್ಧ ಎಂದು ಕರೆದುಕೊಂಡಿರುವ ಸಹಕಾರ ಸಚಿವ, ನಾನಿನ್ನೂ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರೂ ಮುಖ್ಯಮಂತ್ರಿ ಸ್ಥಾನ ಅನುಭವಿಸಿದವರು. ಅವರಿಗೆ ಎಲ್ಲಾ ರೀತಿಯ ಅಧಿಕಾರವೂ ಸಿಕ್ಕಿದೆ. ಅವರಿಗೆ ಈಗ ಯಾವುದೂ ಬೇಕಾಗಿಲ್ಲ ಎಂದು ಸಹ ಹೇಳಿದ್ದಾರೆ.

‘ಇಬ್ಬರೂ ಸತ್ಯ ಹೇಳುತ್ತಿಲ್ಲ’
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಏನೇನಾಗಿದೆ ಎಂಬ ಸತ್ಯ ಅವರಿಗೆ ಮಾತ್ರ ಗೊತ್ತು. ಆದರೆ, ಇಬ್ಬರೂ ಸತ್ಯ ಹೇಳುತ್ತಿಲ್ಲ. ಈಗ ಅವೆಲ್ಲವೂ ಮುಗಿದ ಅಧ್ಯಾಯ ಆಗಿದ್ದು ಅವರರಿಬ್ಬರ ವಿಚಾರ ನಾನೇಕೆ ಮಾತನಾಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.