AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಹೊಸ ರಾಜಕೀಯ ಸಂಚಲನ: ಎನ್​ಡಿಎ ಬಿಟ್ಟುಹೋಗಿದ್ದ ಉಪೇಂದ್ರ ಕುಶ್ವಾಹಾ ಜೊತೆ ನಿತೀಶ್​ ಚರ್ಚೆ

ನಿತೀಶ್​ ಕುಮಾರ್​ರ ವೈಯಕ್ತಿಕ ವಿಚಾರ ಇಟ್ಟುಕೊಂಡು ಟೀಕಿಸಿದ್ದ ತೇಜಸ್ವಿ ಯಾದವ್​ ವಿರುದ್ಧ ಉಪೇಂದ್ರ ಕುಶ್ವಾಹಾ ವಾಗ್ದಾಳಿ ನಡೆಸಿದ್ದರು. ತಮ್ಮ ಪರ ಮಾತನಾಡಿದ ಉಪೇಂದ್ರ ಕುಶ್ವಾಹಾ ಬಗ್ಗೆ ನಿತೀಶ್​ ಕುಮಾರ್ ಸಂತೋಷ ವ್ಯಕ್ತಪಡಿಸಿದ್ದರು.

ಬಿಹಾರದಲ್ಲಿ ಹೊಸ ರಾಜಕೀಯ ಸಂಚಲನ: ಎನ್​ಡಿಎ ಬಿಟ್ಟುಹೋಗಿದ್ದ ಉಪೇಂದ್ರ ಕುಶ್ವಾಹಾ ಜೊತೆ ನಿತೀಶ್​ ಚರ್ಚೆ
ನಿತೀಶ್​ ಕುಮಾರ್​ ಮತ್ತು ಉಪೇಂದ್ರ ಕುಶ್ವಾಹಾ
Lakshmi Hegde
|

Updated on:Dec 06, 2020 | 11:39 AM

Share

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ RLSP (ರಾಷ್ಟ್ರೀಯ ಲೋಕ ಸಮತಾ ಪಾರ್ಟಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಪಾಟ್ನಾದಲ್ಲಿ ಭೇಟಿಯಾಗಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಇವರಿಬ್ಬರೂ ಭೇಟಿಯಾಗಿದ್ದನ್ನು RLSP ವಕ್ತಾರ ಭೋಲಾ ಶರ್ಮಾ ದೃಢಪಡಿಸಿದ್ದಾರೆ.

ಮೊದಲು ಎನ್​ಡಿಎ ಒಕ್ಕೂಟದಲ್ಲೇ ಇದ್ದ ಆರ್​ಎಲ್​ಎಸ್​ಪಿ 2018ರಲ್ಲಿಯೇ ಮೈತ್ರಿಯಿಂದ ಹೊರಬಿದ್ದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ RLSPಗೆ ಎರಡಕ್ಕಿಂತ ಜಾಸ್ತಿ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿ ಪ್ರತಿಪಾದಿಸಿತ್ತು. ಆಗ ತೀವ್ರ ಅಸಮಾಧಾನಗೊಂಡಿದ್ದ ಉಪೇಂದ್ರ ಕುಶ್ವಾಹಾ,​ ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್ ವಿರುದ್ಧ ಕೂಡ ಬೇಸರ ವ್ಯಕ್ತಪಡಿಸಿದ್ದರು. ಜೆಡಿಯು ಎನ್​ಡಿಎ ಒಕ್ಕೂಟಕ್ಕೆ ಸೇರಿದ ಮೇಲೆ, ಆ ಪಕ್ಷಕ್ಕೇ ಜಾಸ್ತಿ ಮಹತ್ವ ನೀಡಲಾಗುತ್ತಿದೆ ಎಂದು ಆಪಾದಿಸಿದ್ದರು. ಆ ಸಮಯದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿದ್ದ ಕುಶ್ವಾಹಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಎನ್​ಡಿಎ ಒಕ್ಕೂಟದಿಂದ ಬೇರೆಯಾಗಿದ್ದರು.

ಇದೀಗ ಎನ್​ಡಿಎಯೊಟ್ಟಿಗೇ ಇದ್ದು, ಬಿಹಾರದಲ್ಲಿ ಈ ಬಾರಿಯೂ ಗೆದ್ದಿರುವ ಮುಖ್ಯಮಂತ್ರಿ ನಿತೀಶ್​ ಕುಮಾರ್​ರನ್ನು ಉಪೇಂದ್ರ ಕುಶ್ವಾಹಾ ಭೇಟಿಯಾಗಿದ್ದು, ರಾಜಕೀಯ ಸಮೀಕರಣಕ್ಕೆ ನಾಂದಿಯಾಗುತ್ತಿದೆಯಾ ಎಂಬುದೊಂದು ಚರ್ಚೆ ಎದ್ದಿದೆ. ಹೀಗಿರುವಾಗ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಕ್ತಾರ ಭೋಲಾ ಶರ್ಮಾ, ಈ ಹಿಂದೆ ನಿತೀಶ್​ ಕುಮಾರ್​ ಮತ್ತು ಉಪೇಂದ್ರ ಕುಶ್ವಾಹಾ ಎನ್​ಡಿಎ ಸರ್ಕಾರದಲ್ಲಿ ಒಟ್ಟಿಗೇ ಕೆಲಸ ಮಾಡಿದ್ದಾರೆ. ಇವರಿಬ್ಬರೂ ಬಿಹಾರ ಜನರ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದವರು. ಗುರುವಾರ ಇಬ್ಬರೂ ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜಕೀಯ ಸಮೀಕರಣಕ್ಕೆ ಕಾರಣ ಆಗಬಹುದು. ನಮಗಂತೂ ಎನ್​ಡಿಎಯೊಂದಿಗೆ ಯಾವುದೇ ಕಟ್ಟುಪಾಡು ಇಲ್ಲ ಎಂದು ತಿಳಿಸಿದ್ದಾರೆ. ಹಾಗಂತ, ಜೆಡಿಯು ಪಕ್ಷದೊಂದಿಗೆ RLSP ವಿಲೀನಗೊಳ್ಳಲಿದೆಯಾ ಎಂಬ ಪ್ರಶ್ನೆಗೆ, ಅದು ಸಾಧ್ಯವಿಲ್ಲ. ಹಾಗೇನೂ ಆಗುವುದಿಲ್ಲ ಎಂದು ಹೇಳಿದರು.

ಖುಷಿಯಾಗಿದ್ರು ಸಿಎಂ ಬಿಹಾರ ವಿಧಾನಸಭೆ ಅಧಿವೇಶನದ ಕೊನೇದಿನ ನವೆಂಬರ್​ 27ರಂದು ನಿತೀಶ್​ ಕುಮಾರ್​ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ನಡುವೆ ಪರಸ್ಪರ ಟೀಕಾಪ್ರಹಾರ ನಡೆದಿತ್ತು. ಅಂದು ಮುಖ್ಯಮಂತ್ರಿಯನ್ನು ವೈಯಕ್ತಿಕ ವಿಚಾರ ಇಟ್ಟುಕೊಂಡು ಟೀಕಿಸಿದ್ದ ತೇಜಸ್ವಿ ಯಾದವ್​ ವಿರುದ್ಧ ಉಪೇಂದ್ರ ಕುಶ್ವಾಹಾ ವಾಗ್ದಾಳಿ ನಡೆಸಿದ್ದರು. ಮುಖ್ಯಮಂತ್ರಿ ವಿರುದ್ಧ ಮಾತಾಡಿದ್ದು ಸರಿಯಲ್ಲ ಎಂದು ಹೇಳಿದ್ದರು. ತಮ್ಮ ಪರ ಮಾತನಾಡಿದ ಉಪೇಂದ್ರ ಕುಶ್ವಾಹಾ ಬಗ್ಗೆ ನಿತೀಶ್​ ಕುಮಾರ್ ಸಂತೋಷ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇವರಿಬ್ಬರ ಭೇಟಿಯೂ ಆಗಿದೆ.

‘ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಸಹವಾಸ ಮಾಡಿದ್ದು ತಪ್ಪಾಯ್ತು.. BJP ಯಲ್ಲಿ ಇದ್ದಿದ್ರೆ ಈಗ ನಾನೇ CM ಆಗಿರ್ತಿದ್ದೆ..’

ಅಮಿತ್ ‘ಪಟೇಲ್’ ಶಾ ಆದ GHMC ಚುನಾವಣೆ

Published On - 11:39 am, Sun, 6 December 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!