‘ನನ್ನ ಹೇಳಿಕೆಗೆ ಈಗಲೂ ಬದ್ಧ.. ರಾಜ್ಯದಲ್ಲಿ ಕೆಲ PDOಗಳು ಭ್ರಷ್ಟಾಚಾರ ಮಾಡಿದ್ದಾರೆ’

ಕೊಡಗು: PDO ಗಳ ವಿರುದ್ಧ ತಾವು ನೀಡಿದ್ದ ಹೇಳಿಕೆ ವಿಚಾರ‌ವಾಗಿ ಇಂದು ಮಡಿಕೇರಿಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ. ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸತ್ಯ ಹರಿಶ್ಚಂದ್ರರಂಥವರಿದ್ದರೆ ನಾನು ವಿಷಾದ ವ್ಯಕ್ತಪಡಿಸ್ತೇನೆ. ಆದರೆ, ಭ್ರಷ್ಟರು, ಕಳ್ಳರಿದ್ದರೆ ಖಂಡಿತ ಕ್ಷಮೆ ಕೇಳಲ್ಲ ಎಂದು ವಿ.ಸೋಮಣ್ಣ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕೆಲ PDOಗಳು ಭ್ರಷ್ಟಾಚಾರ ಮಾಡಿದ್ದಾರೆ. ಅಂಥವರ ವಿರುದ್ಧ ಕ್ರಮ ಕೂಡ ಆಗಿದೆ ಎಂದು ಸಚಿವರು ಹೇಳಿದ್ದಾರೆ. ಈ ಬಗ್ಗೆ ಮಾಜಿ ಸಚಿವ ರೇವಣ್ಣ ಕೂಡ ಸ್ಪಷ್ಟವಾಗಿ […]

‘ನನ್ನ ಹೇಳಿಕೆಗೆ ಈಗಲೂ ಬದ್ಧ.. ರಾಜ್ಯದಲ್ಲಿ ಕೆಲ PDOಗಳು ಭ್ರಷ್ಟಾಚಾರ ಮಾಡಿದ್ದಾರೆ’
ವಸತಿ ಸಚಿವ ವಿ.ಸೋಮಣ್ಣ

Updated on: Sep 14, 2020 | 3:47 PM

ಕೊಡಗು: PDO ಗಳ ವಿರುದ್ಧ ತಾವು ನೀಡಿದ್ದ ಹೇಳಿಕೆ ವಿಚಾರ‌ವಾಗಿ ಇಂದು ಮಡಿಕೇರಿಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸತ್ಯ ಹರಿಶ್ಚಂದ್ರರಂಥವರಿದ್ದರೆ ನಾನು ವಿಷಾದ ವ್ಯಕ್ತಪಡಿಸ್ತೇನೆ. ಆದರೆ, ಭ್ರಷ್ಟರು, ಕಳ್ಳರಿದ್ದರೆ ಖಂಡಿತ ಕ್ಷಮೆ ಕೇಳಲ್ಲ ಎಂದು ವಿ.ಸೋಮಣ್ಣ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೆಲ PDOಗಳು ಭ್ರಷ್ಟಾಚಾರ ಮಾಡಿದ್ದಾರೆ. ಅಂಥವರ ವಿರುದ್ಧ ಕ್ರಮ ಕೂಡ ಆಗಿದೆ ಎಂದು ಸಚಿವರು ಹೇಳಿದ್ದಾರೆ. ಈ ಬಗ್ಗೆ ಮಾಜಿ ಸಚಿವ ರೇವಣ್ಣ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ತಪ್ಪು ಮಾಡಿದ ಕೆಲವರು ರಾಕ್ಷಸರು ಅಂತಾ ಹೇಳಿದ್ದೇನೆ. ಆ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿಕೆ ಕೊಟ್ಟಿದ್ದಾರೆ.