ಹಳೇ ವೈಷಮ್ಯ: ಟೊಮ್ಯಾಟೊ ಬೆಳೆಗೆ ಕಳೆನಾಶಕ ಸಿಂಪಡಿಸಿದ ಕಿಡಿಗೇಡಿಗಳು

| Updated By: ಸಾಧು ಶ್ರೀನಾಥ್​

Updated on: Sep 15, 2020 | 4:58 PM

ಕೋಲಾರ: ದಿನದಿಂದ ದಿನಕ್ಕೆ ಏರುತ್ತಿರುವ ಟೊಮ್ಯಾಟೋ ಬೆಲೆ ಬೆಂಗಳೂರಿಗರಿಗೆ ತಲೆನೋವಾಗಿ ಬಿಟ್ಟಿದೆ. ಟೊಮ್ಯಾಟೋ ಬೆಲೆ ಕೆ.ಜಿಗೆ 50 ರೂಪಾಯಿ ತಲುಪಿದ್ದು ಇದೇ ರೀತಿ ಬೆಲೆ ಏರಿದರೆ ಮುಂದೇನು ಅನ್ನೋ ಚಿಂತೆಯಲ್ಲಿ ಇದ್ದಾರೆ. ಇತ್ತ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಟೊಮ್ಯಾಟೊ ತೋಟಕ್ಕೆ ಕಳೆ ನಾಶಕ ಸಿಂಪಡಣೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೊ ಬೆಳೆ ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮದಲ್ಲಿ ನಡೆದಿದೆ. ಅರ್ಜುನಪ್ಪ ಎಂಬ […]

ಹಳೇ ವೈಷಮ್ಯ: ಟೊಮ್ಯಾಟೊ ಬೆಳೆಗೆ ಕಳೆನಾಶಕ ಸಿಂಪಡಿಸಿದ ಕಿಡಿಗೇಡಿಗಳು
Follow us on

ಕೋಲಾರ: ದಿನದಿಂದ ದಿನಕ್ಕೆ ಏರುತ್ತಿರುವ ಟೊಮ್ಯಾಟೋ ಬೆಲೆ ಬೆಂಗಳೂರಿಗರಿಗೆ ತಲೆನೋವಾಗಿ ಬಿಟ್ಟಿದೆ. ಟೊಮ್ಯಾಟೋ ಬೆಲೆ ಕೆ.ಜಿಗೆ 50 ರೂಪಾಯಿ ತಲುಪಿದ್ದು ಇದೇ ರೀತಿ ಬೆಲೆ ಏರಿದರೆ ಮುಂದೇನು ಅನ್ನೋ ಚಿಂತೆಯಲ್ಲಿ ಇದ್ದಾರೆ.

ಇತ್ತ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಟೊಮ್ಯಾಟೊ ತೋಟಕ್ಕೆ ಕಳೆ ನಾಶಕ ಸಿಂಪಡಣೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೊ ಬೆಳೆ ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮದಲ್ಲಿ ನಡೆದಿದೆ.

ಅರ್ಜುನಪ್ಪ ಎಂಬ ರೈತರಿಗೆ ಸೇರಿದ್ದ ಸುಮಾರು 2 ಎಕರೆ ಜಮೀನಿನಲ್ಲಿ 10 ಸಾವಿರ ಟೊಮ್ಯಾಟೊ ಸಸಿ ನೆಟ್ಟಿದ್ದರು. ಆದರೆ, ದುಷ್ಕರ್ಮಿಗಳು ಟೊಮ್ಯಾಟೊ ಬೆಳೆಗೆ ಕಳೆನಾಶಕ ಸಿಂಪಡಿಸಿ ಹಾಳು ಮಾಡಿದ್ದಾರೆ. ಇನ್ನು ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೆಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.