ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಕೊಲೆ
ಉಡುಪಿ: ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಾಪು ತಾಲೂಕಿನ ಹಿರಿಯಡ್ಕ ಪಟ್ಟಣದಲ್ಲಿ ನಡೆದಿದೆ. ಕಿಶನ್ ಶೆಟ್ಟಿ(35) ಕೊಲೆಯಾದ ವ್ಯಕ್ತಿ. ನಗರದ ಹೃದಯ ಭಾಗದಲ್ಲಿ ಕಿಶನ್ ಶೆಟ್ಟಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಎರಡು ಕಾರುಗಳಿಂದ ಹಿಂಬಾಲಿಸುತ್ತಿದ್ದ ದೃಷ್ಕರ್ಮಿಗಳು ಕಾರಿನಲ್ಲಿ ಬಂದ ಕಿಶನ್ ಶೆಟ್ಟಿ ಯನ್ನು ಅಡ್ಡಗಟ್ಟಿ ಕಾರಿನಿಂದ ಹೊರಗೆಳೆದು ನಡುರಸ್ತೆಯಲ್ಲೇ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾರೆ. ಅಪರಾಧ ಹಿನ್ನೆಲೆ ಹೊಂದಿದ್ದ ಕಿಶನ್ ಶೆಟ್ಟಿ ಮಣಿಪಾಲ ಆಸ್ಪತ್ರೆಯಲ್ಲಿ ಶವದ ಮರಣೋತ್ತರ […]

ಉಡುಪಿ: ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಾಪು ತಾಲೂಕಿನ ಹಿರಿಯಡ್ಕ ಪಟ್ಟಣದಲ್ಲಿ ನಡೆದಿದೆ. ಕಿಶನ್ ಶೆಟ್ಟಿ(35) ಕೊಲೆಯಾದ ವ್ಯಕ್ತಿ.
ನಗರದ ಹೃದಯ ಭಾಗದಲ್ಲಿ ಕಿಶನ್ ಶೆಟ್ಟಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಎರಡು ಕಾರುಗಳಿಂದ ಹಿಂಬಾಲಿಸುತ್ತಿದ್ದ ದೃಷ್ಕರ್ಮಿಗಳು ಕಾರಿನಲ್ಲಿ ಬಂದ ಕಿಶನ್ ಶೆಟ್ಟಿ ಯನ್ನು ಅಡ್ಡಗಟ್ಟಿ ಕಾರಿನಿಂದ ಹೊರಗೆಳೆದು ನಡುರಸ್ತೆಯಲ್ಲೇ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾರೆ.
ಅಪರಾಧ ಹಿನ್ನೆಲೆ ಹೊಂದಿದ್ದ ಕಿಶನ್ ಶೆಟ್ಟಿ ಮಣಿಪಾಲ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





