ರಾಜಕೀಯ ವೈಷಮ್ಯದ ಕಿಚ್ಚು: ಮುನೇಗೌಡರ ಸೌದೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಬೆಂಗಳೂರು ಗ್ರಾಮಾಂತರ: ಹಳೇ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಮನೆ ಮುಂದೆ ಹಾಕಿದ್ದ ಕಟ್ಟಿಗೆ ಮತ್ತು ಸೌದೆಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳಿಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುನೇಗೌಡ ಎಂಬುವವರಿಗೆ ಸೇರಿದ್ದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸೌದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮನೆ ಕಟ್ಟೋದಕ್ಕೆ ಅಂತಾ ಮನೆ ಮುಂದೆ ಸಂಗ್ರಹಿಸಿದ್ದ ಮರದ ತುಂಡುಗಳನ್ನು ಗ್ರಾಮದ ನಿವಾಸಿ ಲಕ್ಷ್ಮಣ್ ಎಂಬುವವರು ಸುಟ್ಟು ಹಾಕಿದ್ದಾರೆ ಎಂದು ಮುನೇಗೌಡ ಆರೋಪಿಸಿದ್ದಾರೆ. ಲಕ್ಷ್ಮಣ್ ಕಟ್ಟಿಗೆಗೆ ಪೆಟ್ರೋಲ್ ಸುರಿದು […]

ಬೆಂಗಳೂರು ಗ್ರಾಮಾಂತರ: ಹಳೇ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಮನೆ ಮುಂದೆ ಹಾಕಿದ್ದ ಕಟ್ಟಿಗೆ ಮತ್ತು ಸೌದೆಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳಿಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುನೇಗೌಡ ಎಂಬುವವರಿಗೆ ಸೇರಿದ್ದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸೌದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮನೆ ಕಟ್ಟೋದಕ್ಕೆ ಅಂತಾ ಮನೆ ಮುಂದೆ ಸಂಗ್ರಹಿಸಿದ್ದ ಮರದ ತುಂಡುಗಳನ್ನು ಗ್ರಾಮದ ನಿವಾಸಿ ಲಕ್ಷ್ಮಣ್ ಎಂಬುವವರು ಸುಟ್ಟು ಹಾಕಿದ್ದಾರೆ ಎಂದು ಮುನೇಗೌಡ ಆರೋಪಿಸಿದ್ದಾರೆ. ಲಕ್ಷ್ಮಣ್ ಕಟ್ಟಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ ಎಂದು ಮುನೇಗೌಡ ಹೇಳಿದ್ದಾರೆ.
ಸ್ಥಳಿಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.

Published On - 4:46 pm, Thu, 20 August 20



