ಮಂಗಳೂರು: ನಾಪತ್ತೆಯಾಗಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನಾವೂರು ಕೆರೆಯಲ್ಲಿ ರಕ್ಷಿತ್(28) ಮೃತದೇಹ ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ಆಗಸ್ಟ್ 24ರಂದು ಕೆಲಸಕ್ಕೆ ತೆರಳಿದ್ದಾಗ ಗ್ರಾಮದ ನಾಗಾಜೆ ನಿವಾಸಿ ರಕ್ಷಿತ್ ನಾಪತ್ತೆಯಾಗಿದ್ದರು. ಇವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕೃಷಿ ಯಂತ್ರ ಧಾರಾ ಯೋಜನೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಳದೆ ಒಂಬತ್ತು ದಿನಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ಕೆಲಸಕ್ಕೆ ಸೇರಿದ್ದರು.
ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಚಿಂತಿತರಾದ ಕುಟುಂಬಸ್ಥರು ಯುವಕನಿಗಾಗಿ ಹುಡುಕಾಟ ನಡೆಸಿದ್ರು. ಆದರೆ ಕೆರೆ ಬಳಿ ವಿಷದ ಬಾಟಲ್ ಮತ್ತು ಮೃತದ ಚಪ್ಪಲಿ ಪತ್ತೆಯಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.