ITಯುಗದಲ್ಲಿ ತಂತ್ರಾಂಶದ ಸಮಸ್ಯೆಯಂತೆ! 6ತಿಂಗಳಿಂದ ಇವರ ಹೊಟ್ಟೆಮೇಲೆ ತಣ್ಣೀರು ಬಟ್ಟೆ
ಕೋಲಾರ: ಹೆತ್ತ ಮಕ್ಕಳಿಂದ ದೂರಾಗಿರುವ ವೃದ್ದರು, ಗಂಡನನ್ನು ಕಳೆದುಕೊಂಡ ವಿಧವೆಯರು, ಇಲ್ಲಾ, ಹುಟ್ಟುತ್ತಲೇ ವಿಕಲಾಂಗರಾದವರಿಗೆ ಸರ್ಕಾರ ಕೊಡುವ ಆ ಹಣವನ್ನೇ ನಂಬಿ ಒಂದೊತ್ತಿನ ಗಂಜಿ ಕುಡಿಯುತ್ತಿದ್ದವರು ಅವರು. ಆದ್ರೆ ಸರ್ಕಾರ ತಂತ್ರಾಂಶದ ಸಮಸ್ಯೆ ಹೇಳಿ ಕಳೆದ ಆರು ತಿಂಗಳಿಂದ ಅವರ ಹೊಟ್ಟೆಮೇಲೆ ತಣ್ಣೀರು ಬಟ್ಟೆ ಬಿದ್ದಿದೆ. ಸರ್ಕಾರದ ವೇತನ ಸಿಗದೆ ಜನರ ಪರದಾಟ..! ಕಾಗದ ಪತ್ರಗಳನ್ನು ಹಿಡಿದು ತಾಲ್ಲೂಕು ಕಚೇರಿ ಎದುರು ಕುಳಿತಿರುವ ಮಹಿಳೆಯರು, ವೃದ್ದರು, ಹಾಗೂ ವಿಕಲಾಂಗ ಚೇತನ ವ್ಯಕ್ತಿಗಳು, ಅಧಿಕಾರಿಗಳಿಗಾಗಿ ಪ್ರತಿದಿನ ತಾಲ್ಲೂಕು ಕಚೇರಿಗೆ […]
ಕೋಲಾರ: ಹೆತ್ತ ಮಕ್ಕಳಿಂದ ದೂರಾಗಿರುವ ವೃದ್ದರು, ಗಂಡನನ್ನು ಕಳೆದುಕೊಂಡ ವಿಧವೆಯರು, ಇಲ್ಲಾ, ಹುಟ್ಟುತ್ತಲೇ ವಿಕಲಾಂಗರಾದವರಿಗೆ ಸರ್ಕಾರ ಕೊಡುವ ಆ ಹಣವನ್ನೇ ನಂಬಿ ಒಂದೊತ್ತಿನ ಗಂಜಿ ಕುಡಿಯುತ್ತಿದ್ದವರು ಅವರು. ಆದ್ರೆ ಸರ್ಕಾರ ತಂತ್ರಾಂಶದ ಸಮಸ್ಯೆ ಹೇಳಿ ಕಳೆದ ಆರು ತಿಂಗಳಿಂದ ಅವರ ಹೊಟ್ಟೆಮೇಲೆ ತಣ್ಣೀರು ಬಟ್ಟೆ ಬಿದ್ದಿದೆ.
ಸರ್ಕಾರದ ವೇತನ ಸಿಗದೆ ಜನರ ಪರದಾಟ..! ಕಾಗದ ಪತ್ರಗಳನ್ನು ಹಿಡಿದು ತಾಲ್ಲೂಕು ಕಚೇರಿ ಎದುರು ಕುಳಿತಿರುವ ಮಹಿಳೆಯರು, ವೃದ್ದರು, ಹಾಗೂ ವಿಕಲಾಂಗ ಚೇತನ ವ್ಯಕ್ತಿಗಳು, ಅಧಿಕಾರಿಗಳಿಗಾಗಿ ಪ್ರತಿದಿನ ತಾಲ್ಲೂಕು ಕಚೇರಿಗೆ ತಿರುತುಗಿ ತಿರುಗಿ ಬೇಸತ್ತು ಅಲ್ಲೇ ಮೂಲೆಯಲ್ಲಿ ಕುಳಿತಿರುವ ಅಸಹಾಯಕರು, ಇಂಥಾ ದೃಶ್ಯಗಳು ಕೋಲಾರ ಜಿಲ್ಲೆಯ ತಾಲ್ಲೂಕು ಕಚೇರಿಗಳ ಬಳಿ ಸರ್ವೇ ಸಾಮಾನ್ಯವಾಗಿಬಿಟ್ಟಿವೆ.
ಹೌದು ನಕಲಿ ದಾಖಲೆ ನೀಡಿ ಸರ್ಕಾರದ ಸೌಲಭ್ಯ ಪಡೆಯುತ್ತಿರುವವರನ್ನು ಸರಿಪಡಿಸಲು ಹಾಗೂ ಕೆಲವರು ಮೃತರ ಹೆಸರಲ್ಲಿ ಹಣ ಪಡೆಯುತ್ತಿರುವ ಬಗ್ಗೆ ದೂರು ಕೇಳಿಬಂದಿತ್ತು. ಈ ಹಿನ್ನೆಲೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಈ ತಂತ್ರಾಶ ಬದಲಾವಣೆ ಕೆಲಸ ನಡೆಯುತ್ತಿದೆ.
ಏನದು ತಂತ್ರಾಂಶ ಬದಲಾವಣೆ..? ಸರ್ಕಾರ ಕಂದಾಯ ಇಲಾಖೆಯ ಖಜಾನೆ ತಂತ್ರಾಂಶ-1 ರಿಂದ ಖಜಾನೆ ತಂತ್ರಾಂಶ-2 ಕ್ಕೆ ಬದಲಾವಣೆ ಮಾಡುವ ಕೆಲಸ ಕಳೆದೊಂದು ವರ್ಷದಿಂದ ನಡೆಯುತ್ತಿದೆ. ಈ ಮಧ್ಯೆ ಕಳೆದ ಒಂದೊಂದು ವರ್ಷದಿಂದ ವೃದ್ದರು, ಅಂಗವಿಕಲರು, ವಿಧವೆಯರು ಸೇರಿ ಹಲವರಿಗೆ ಸರ್ಕಾರ ಈ ವೇತನ ಸಿಗುತ್ತಿಲ್ಲ.
ಈ ಮಧ್ಯೆ ಕೊರೊನಾ ಲಾಕ್ಡೌನ್ ನಲ್ಲಿ ಮಾಡಲು ಕೆಲಸವೂ ಇಲ್ಲದೆ ಕೂಲಿ ಕೆಲಸವೂ ಸಿಗದೆ ಅದೆಷ್ಟೋ ಜನರು ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸರ್ಕಾರದಿಂದ ಹಣ ಇಂದು ಬರುತ್ತೆ ನಾಳೆ ಬರುತ್ತೆ ಎಂದು ನಿತ್ಯ ತಾಲ್ಲೂಕು ಕಚೇರಿಗೆ ತಿರುಗಿ ತಿರುಗಿ ಮಹಿಳೆಯರು, ವೃದ್ದರು ಬೇಸತ್ತು ಹೋಗಿದ್ದಾರೆ. ಆದ್ರೆ ಇನ್ನೂ ಸಾವಿರಾರು ಜನರಿಗೆ ವೇತನ ಮಾತ್ರ ಬರುತ್ತಿಲ್ಲ, ಏನು ಮಾಡೋದು ತಿಳಿಯದೆ ಇತ್ತ ಅಧಿಕಾರಿಗಳ ಸ್ಪಂದನೆಯೂ ಇಲ್ಲದೆ ಜನರು ಕಂಗಾಲಾಗಿದ್ದಾರೆ.
ರಾಜ್ಯಾದ್ಯಂತ ಸಮಸ್ಯೆ ಹೆಚ್ಚಾಗಿದೆ..! ಇನ್ನು ಇಂಥಾದೊಂದು ಸಮಸ್ಯೆ ಕೇವಲ ಕೋಲಾರ ಜಿಲ್ಲೆಯದ್ಧಲ್ಲ, ಇಡೀ ರಾಜ್ಯಾದ್ಯಂತ ಇಂಥಾ ಸಮಸ್ಯೆ ಎದುರಾಗಿದೆ. ಇನ್ನು ಕೋಲಾರ ಜಿಲ್ಲೆಯಲ್ಲಿ ಖಜಾನೆ ತಂತ್ರಾಂಶ-1 ರಿಂದ ಖಜಾನೆ ತಂತ್ರಾಂಶ-2 ಕ್ಕೆ ಬದಲಾಯಿಸುವ ಕೆಲಸ ಒಂದು ವರ್ಷದಿಂದ ನಡೆಯುತ್ತಿದೆ. ಇನ್ನು ಜಿಲ್ಲೆಯಲ್ಲಿ ವಿವಿಧ ರೀತಿಯ ವೇತನಗಳನ್ನು ಪಡೆಯುವ 2,22,963 ಮಂದಿ ಫಲಾನುಭವಿಗಳಿದ್ದಾರೆ.
ಆ ಪೈಕಿ ಇನ್ನು ಸಾವಿರಾರು ಜನ ಫಲಾನುಭವಿಗಳಿಗೆ ವೇತನಗಳು ಸಿಗುತ್ತಿಲ್ಲ, ಅಧಿಕಾರಿಗಳ ಬಳಿ ಸುತ್ತಿ ಸುತ್ತಿ ಸಾಕಾಗಿ ಹೋಗಿದ್ದಾರೆ. ಇನ್ನು ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ. ಜಿಲ್ಲೆಯಲ್ಲಿ ಈ ಕೆಲಸ ಬಹುತೇಕ ಪೂರ್ಣವಾಗಿದೆ ಎನ್ನುತ್ತಿದ್ದಾರೆ. ಆದ್ರೆ ತಾಲ್ಲೂಕು ಕಚೇರಿಗೆ ಸುತ್ತುತ್ತಿರುವ ಅಂಗವಿಕಲರು, ವೃದ್ದರು, ಮಹಿಳೆಯರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಕೋಲಾರ ಜಿಲ್ಲೆ 2,22,963 ಫಲಾನುಭವಿಗಳ ಪೈಕಿ ಇನ್ನು 5301 ಜನ ತಂತ್ರಾಶ ಬದಲಾವಣೆ ಕೆಲಸ ಮಾತ್ರ ಬಾಕಿ ಇದೆ. ಸಮಸ್ಯೆ ಇರುವವರು ನಮ್ಮ ಗಮನಕ್ಕೆ ಬಂದರೆ ಕೂಡಲೇ ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾರೆ.
ಒಟ್ಟಾರೆ ಒಂದೊತ್ತಿನ ತುತ್ತು ಊಟಕ್ಕೂ ಸಿಗದೆ, ಸರ್ಕಾರ ಕೊಡುವ ಹಣದಲ್ಲೇ ಗಂಜಿ ಕುಡಿದು ಬದುಕುತ್ತಿದ್ದವರಿಗೆ ಸರ್ಕಾರದ ಈ ಕ್ರಮದಿಂದ ಉಪವಾಸವಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರು ಸರ್ಕಾರ ನೀಡುವ ಹಣಕ್ಕಾಗಿಯೇ ಕಾದು ಕುಳಿತಿರುವ ಈ ಹಸಿದ ಜೀವಗಳಿಗಾಗಿ ನೆರವು ನೀಡುವ ಕೆಲಸ ಮಾಡಬೇಕಿದೆ. -ರಾಜೇಂದ್ರ ಸಿಂಹ