ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿ ಇನ್ನೂ ವಾಪಸ್ ಬಂದಿಲ್ಲ
ತುಮಕೂರು: ಪರೀಕ್ಷೆ ಬರೆಯಲು ಹೋದ ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾರೆ. ಬಿ.ಜಿ.ಲಾವಣ್ಯ ಕಾಣೆಯಾದ ವಿದ್ಯಾರ್ಥಿನಿ. ಮಧುಗಿರಿ ತಾಲೂಕಿನ ಬಡಕನಹಳ್ಳಿಯಿಂದ ಜೂ.18 ರಂದು ಬೆಳಗ್ಗೆ 8.30ಕ್ಕೆ ಪರೀಕ್ಷೆ ಬರೆಯುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಅಂದು ಆಟೋರಿಕ್ಷಾದಲ್ಲಿ ತೆರಳಿದ ಪಿಯುಸಿ ವಿದ್ಯಾರ್ಥಿನಿ ಬಗ್ಗೆ ಇಲ್ಲಿಯವರೆಗೂ ಸುಳಿವಿಲ್ಲ. ವಾಪಸ್ ಮಗಳು ಬಾರದೆ ಪೋಷಕರು ಕಂಗಾಲಾಗಿದ್ದಾರೆ. ಮಗಳು ನಾಪತ್ತೆಯಾಗಿರುವ ಬಗ್ಗೆ ತಂದೆ ಗುತ್ತೆಪ್ಪ ಎಂಬುವರು ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತುಮಕೂರು: ಪರೀಕ್ಷೆ ಬರೆಯಲು ಹೋದ ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾರೆ. ಬಿ.ಜಿ.ಲಾವಣ್ಯ ಕಾಣೆಯಾದ ವಿದ್ಯಾರ್ಥಿನಿ.
ಮಧುಗಿರಿ ತಾಲೂಕಿನ ಬಡಕನಹಳ್ಳಿಯಿಂದ ಜೂ.18 ರಂದು ಬೆಳಗ್ಗೆ 8.30ಕ್ಕೆ ಪರೀಕ್ಷೆ ಬರೆಯುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಅಂದು ಆಟೋರಿಕ್ಷಾದಲ್ಲಿ ತೆರಳಿದ ಪಿಯುಸಿ ವಿದ್ಯಾರ್ಥಿನಿ ಬಗ್ಗೆ ಇಲ್ಲಿಯವರೆಗೂ ಸುಳಿವಿಲ್ಲ.
ವಾಪಸ್ ಮಗಳು ಬಾರದೆ ಪೋಷಕರು ಕಂಗಾಲಾಗಿದ್ದಾರೆ. ಮಗಳು ನಾಪತ್ತೆಯಾಗಿರುವ ಬಗ್ಗೆ ತಂದೆ ಗುತ್ತೆಪ್ಪ ಎಂಬುವರು ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Published On - 5:14 pm, Sat, 27 June 20