ಗಲಾಟೆ ಮಾಡ್ಬೇಡ.. ಗಲಾಟೆ ಶುರುವಾದ್ರೆ ಹಿಂದೆ ಸರೀಬೇಡ: ಶಾಸಕನ ದರ್ಪಕ್ಕೆ ಮಗನ ಶಹಬ್ಬಾಸ್​​ಗಿರಿ!

ಬಳ್ಳಾರಿ: ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ವೇಳೆ ಪುರಸಭೆ ಮುಂದೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಜಗಳ ನಿಲ್ಲಿಸಬೇಕಿದ್ದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಭುಜ ತಟ್ಟಿ ಬಿಜೆಪಿ ಮುಖಂಡರಿಗೆ ಸವಾಲ್ ಹಾಕಿದ್ದರು. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದ್ದು ತಂದೆಯ ದರ್ಪಕ್ಕೆ ಪುತ್ರ ಶಹಬ್ಬಾಸ್ ಗಿರಿ ತೋರಿಸಿದ್ದಾನೆ. ಭೀಮಾನಾಯ್ಕ್ ಸವಾಲ್ ಹಾಕಿದ್ದ ವಿಡಿಯೋವನ್ನು ಪುತ್ರ ಅಶೋಕ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಗಲಾಟೆ ಮಾಡ್ಬೇಡ.. ಗಲಾಟೆ […]

ಗಲಾಟೆ ಮಾಡ್ಬೇಡ.. ಗಲಾಟೆ ಶುರುವಾದ್ರೆ ಹಿಂದೆ ಸರೀಬೇಡ: ಶಾಸಕನ ದರ್ಪಕ್ಕೆ ಮಗನ ಶಹಬ್ಬಾಸ್​​ಗಿರಿ!

Updated on: Nov 08, 2020 | 3:17 PM

ಬಳ್ಳಾರಿ: ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ವೇಳೆ ಪುರಸಭೆ ಮುಂದೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಜಗಳ ನಿಲ್ಲಿಸಬೇಕಿದ್ದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಭುಜ ತಟ್ಟಿ ಬಿಜೆಪಿ ಮುಖಂಡರಿಗೆ ಸವಾಲ್ ಹಾಕಿದ್ದರು. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದ್ದು ತಂದೆಯ ದರ್ಪಕ್ಕೆ ಪುತ್ರ ಶಹಬ್ಬಾಸ್ ಗಿರಿ ತೋರಿಸಿದ್ದಾನೆ.

ಭೀಮಾನಾಯ್ಕ್ ಸವಾಲ್ ಹಾಕಿದ್ದ ವಿಡಿಯೋವನ್ನು ಪುತ್ರ ಅಶೋಕ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಗಲಾಟೆ ಮಾಡ್ಬೇಡ.. ಗಲಾಟೆ ಶುರುವಾದ್ರೆ ಹಿಂದೆ ಸರೀಬೇಡ. ನನಗೆ ನಿನ್ನ ಮೇಲೆ ಹೆಮ್ಮೆ ಇದೆ ಅಪ್ಪ ಎಂದು ಬರೆದುಕೊಂಡು ಭೀಮಾನಾಯ್ಕ್ ಭುಜತಟ್ಟುವ ವಿಡಿಯೋ ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡಿ ತಂದೆಯ ವರ್ತನೆ ಆದರ್ಶವಾಗಿಸಿಕೊಂಡಿದ್ದಾನೆ. ಶಾಸಕನ ವರ್ತನೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ತಂದೆಯ ದರ್ಪಕ್ಕೆ ಪುತ್ರ ಹೆಮ್ಮೆ ಪಡುತ್ತಿದ್ದಾನೆ.

ಇದನ್ನೂ ಓದಿ: ಪುರಸಭೆ ಚುನಾವಣೆ ವೇಳೆ ಗಲಾಟೆ: ಭುಜ ತಟ್ಟಿ ಬಿಜೆಪಿಗೆ ಸವಾಲ್ ಹಾಕಿದ ಭೀಮಾನಾಯ್ಕ್