ಮಚ್ಚು ಹಿಡಿದು ಸುಲಿಗೆ ಮಾಡುತ್ತಿದ್ದ ಪುಂಡನ ಬಂಧನ
ಬೆಂಗಳೂರು: ಕೈಯಲ್ಲಿ ಮಚ್ಚು ಹಿಡಿದು ನಗರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಸುಲಿಗೆಕೋರ ಅರ್ಬಾಜ್ ಖಾನ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಹೆಚ್‌ಆರ್‌ಬಿಆರ್ ಲೇಔಟ್‌ನಲ್ಲಿ ನಡೆದಿದೆ. ಬಾಣಸವಾಡಿ ಇನ್ಸ್‌ಪೆಕ್ಟರ್ ಜಯರಾಜ್, ಸುಲಿಗೆಕೋರನ ಮೇಲೆ ಫೈರಿಂಗ್ ಮಾಡಿದ್ದಾರೆ. ಮಾರಕಾಸ್ತ್ರ ತೋರಿಸಿ ಹಣ ಸುಲಿಗೆ ಮಾಡಿದ್ದ ಆರೋಪಿ ಅರ್ಬಾಜ್ ಖಾನ್ನನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು. ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದ. ಶರಣಾಗುವಂತೆ […]

ಬೆಂಗಳೂರು: ಕೈಯಲ್ಲಿ ಮಚ್ಚು ಹಿಡಿದು ನಗರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಸುಲಿಗೆಕೋರ ಅರ್ಬಾಜ್ ಖಾನ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಹೆಚ್‌ಆರ್‌ಬಿಆರ್ ಲೇಔಟ್‌ನಲ್ಲಿ ನಡೆದಿದೆ.
ಬಾಣಸವಾಡಿ ಇನ್ಸ್‌ಪೆಕ್ಟರ್ ಜಯರಾಜ್, ಸುಲಿಗೆಕೋರನ ಮೇಲೆ ಫೈರಿಂಗ್ ಮಾಡಿದ್ದಾರೆ. ಮಾರಕಾಸ್ತ್ರ ತೋರಿಸಿ ಹಣ ಸುಲಿಗೆ ಮಾಡಿದ್ದ ಆರೋಪಿ ಅರ್ಬಾಜ್ ಖಾನ್ನನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು. ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದ. ಶರಣಾಗುವಂತೆ ತಿಳಿಸಿದರೂ ಕೇಳದೆ ಪರಾರಿಗೆ ಯತ್ನಿಸಿದ್ದಾನೆ. ಹೀಗಾಗಿ ಕಾಲಿಗೆ ಗುಂಡು ಹಾರಿಸಿ ಅರ್ಬಾಜ್ನನ್ನು ಪೊಲೀಸರು ಬಂಧಿಸಿದ್ರು.
ಇದನ್ನೂ ಓದಿ: ಹಣ ವಸೂಲಿ ಮಾಡಲು ಈ ಆಸಾಮಿ ಮಚ್ಚು ಬೀಸಿದ್ದ.. ದೃಶ್ಯ ಸಿಸಿ ಟಿವಿಯಲ್ಲಿ ಸೆರೆ




