‘ಸೋತವರಿಗೆ ಸಚಿವ ಸ್ಥಾನ ನೀಡೋದಾದ್ರೆ.. ಜನ ನಮ್ಮನ್ನು ಯಾಕೆ ಆಯ್ಕೆ ಮಾಡಬೇಕು?’
ದಾವಣಗೆರೆ: ಜನರಿಂದ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಬೇಕು. ಇದು ನನ್ನ ಅಭಿಪ್ರಾಯ, ಈ ನನ್ನ ನಿಲುವಿಗೆ ನಾನು ಬದ್ಧ ಎಂದು ಜಿಲ್ಲೆಯಲ್ಲಿ ಶಾಸಕ M.P.ರೇಣುಕಾಚಾರ್ಯ ಹೇಳಿದ್ದಾರೆ. ಇವರು ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ ಜನರು ನಮ್ಮನ್ನು ಏಕೆ ಆಯ್ಕೆ ಮಾಡಬೇಕೆಂದು ರೇಣುಕಾಚಾರ್ಯ ನೇರ ಪ್ರಶ್ನೆ ಹಾಕಿದ್ದಾರೆ. ನಮ್ಮ ಜಿಲ್ಲೆಗೆ ಸಚಿವ ಸ್ಥಾನವನ್ನು ನೀಡಬೇಕು. ಪ್ರಾದೇಶಿಕ ಸಮತೋಲನ ಆಧಾರದಲ್ಲಿ ಸ್ಥಾನ ನೀಡಬೇಕು. ಜಿಲ್ಲೆಯ ಶಾಸಕರು ಸಭೆ ಮಾಡಿ ಸಿಎಂಗೆ ಒತ್ತಾಯಿಸಿದ್ದೇವೆ. ಆದರೆ, ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ […]

ದಾವಣಗೆರೆ: ಜನರಿಂದ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಬೇಕು. ಇದು ನನ್ನ ಅಭಿಪ್ರಾಯ, ಈ ನನ್ನ ನಿಲುವಿಗೆ ನಾನು ಬದ್ಧ ಎಂದು ಜಿಲ್ಲೆಯಲ್ಲಿ ಶಾಸಕ M.P.ರೇಣುಕಾಚಾರ್ಯ ಹೇಳಿದ್ದಾರೆ.
ಇವರು ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ ಜನರು ನಮ್ಮನ್ನು ಏಕೆ ಆಯ್ಕೆ ಮಾಡಬೇಕೆಂದು ರೇಣುಕಾಚಾರ್ಯ ನೇರ ಪ್ರಶ್ನೆ ಹಾಕಿದ್ದಾರೆ. ನಮ್ಮ ಜಿಲ್ಲೆಗೆ ಸಚಿವ ಸ್ಥಾನವನ್ನು ನೀಡಬೇಕು. ಪ್ರಾದೇಶಿಕ ಸಮತೋಲನ ಆಧಾರದಲ್ಲಿ ಸ್ಥಾನ ನೀಡಬೇಕು. ಜಿಲ್ಲೆಯ ಶಾಸಕರು ಸಭೆ ಮಾಡಿ ಸಿಎಂಗೆ ಒತ್ತಾಯಿಸಿದ್ದೇವೆ. ಆದರೆ, ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು. ಹಾದಿ ರಂಪ ಬೀದಿ ರಂಪ ಮಾಡೋದು ನಮಗೆ ಇಷ್ಟ ಇಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.