US ನಿಂದ ವಾಪಸ್​ ಆದ ಮಗನನ್ನ ಕಂಡು ಶಾಸಕ ರೇಣುಕಾಚಾರ್ಯ ಆನಂದಬಾಷ್ಪ

ದಾವಣಗೆರೆ: ಕೊರೊನಾ ಕಾಟದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ MP ರೇಣುಕಾಚಾರ್ಯರ ಪುತ್ರ ಚಂದನ್​ ಅಮೆರಿಕಾದಲ್ಲಿಯೇ ಉಳಿದುಕೊಳ್ಳುವ ಸ್ಥಿತಿ ಎದುರಾಗಿತ್ತು. ಆಗ ಅಮೆರಿಕಾದಲ್ಲಿ ಎಗ್ಗಿಲ್ಲದೆ ಹರುಡುತ್ತಿದ್ದ ಕೊರೊನಾದ ಭೀತಿಯ ನಡುವೆ ಮಗನಿಗಾಗಿ, ಇಲ್ಲಿ ಶಾಸಕ ಪರಿತಪಿಸಿದ್ದು ಅಷ್ಟಿಷ್ಟಲ್ಲ. ಇದೀಗ, ರೇಣುಕಾಚಾರ್ಯರ ಪುತ್ರ ಚಂದನ್ ಅಮೆರಿಕಾದಿಂದ ವಾಪಸ್​ ಆದ ಹಿನ್ನೆಲೆಯಲ್ಲಿ ಶಾಸಕರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಅಮೆರಿಕದಲ್ಲಿ MS ವ್ಯಾಸಂಗ ಮಾಡುತ್ತಿದ್ದ ಚಂದನ್​ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರ […]

US ನಿಂದ ವಾಪಸ್​ ಆದ ಮಗನನ್ನ ಕಂಡು ಶಾಸಕ ರೇಣುಕಾಚಾರ್ಯ ಆನಂದಬಾಷ್ಪ
Edited By:

Updated on: Aug 13, 2020 | 6:07 PM

ದಾವಣಗೆರೆ: ಕೊರೊನಾ ಕಾಟದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ MP ರೇಣುಕಾಚಾರ್ಯರ ಪುತ್ರ ಚಂದನ್​ ಅಮೆರಿಕಾದಲ್ಲಿಯೇ ಉಳಿದುಕೊಳ್ಳುವ ಸ್ಥಿತಿ ಎದುರಾಗಿತ್ತು. ಆಗ ಅಮೆರಿಕಾದಲ್ಲಿ ಎಗ್ಗಿಲ್ಲದೆ ಹರುಡುತ್ತಿದ್ದ ಕೊರೊನಾದ ಭೀತಿಯ ನಡುವೆ ಮಗನಿಗಾಗಿ, ಇಲ್ಲಿ ಶಾಸಕ ಪರಿತಪಿಸಿದ್ದು ಅಷ್ಟಿಷ್ಟಲ್ಲ.

ಇದೀಗ, ರೇಣುಕಾಚಾರ್ಯರ ಪುತ್ರ ಚಂದನ್ ಅಮೆರಿಕಾದಿಂದ ವಾಪಸ್​ ಆದ ಹಿನ್ನೆಲೆಯಲ್ಲಿ ಶಾಸಕರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಅಮೆರಿಕದಲ್ಲಿ MS ವ್ಯಾಸಂಗ ಮಾಡುತ್ತಿದ್ದ ಚಂದನ್​ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡ ಶಾಸಕ ಮಗನನ್ನ ಅಪ್ಪಿಮುದ್ದಾಡಿದರು.

ಪದೇ ಪದೇ ಮಗನನ್ನು ನೆನಪಿಸಿಕೊಳ್ಳುತ್ತಾ ನೋವು ಅನುಭವಿಸುತ್ತಿದ್ದ ರೇಣುಕಾಚಾರ್ಯಗೆ ಇದೀಗ ದೊಡ್ಡ ರಿಲೀಫ್​ ಸಿಕ್ಕಂತಾಗಿದೆ. ಚಂದನ್​ನನ್ನ ರೇಣುಕಾಚಾರ್ಯ ದಂಪತಿ ಹಾಗೂ ಚಂದನ್​ ಸಹೋದರಿ ವೆಲ್​ಕಂ ಮಾಡಿಕೊಂಡರು.

ಬಳಿಕ ಮಾತನಾಡಿದ ಶಾಸಕ ನಮ್ಮ ತಂದೆ ತಾಯಿ ಆಶೀರ್ವಾದ ಮತ್ತು ಕ್ಷೇತ್ರದ ಜನರ ಆಶೀರ್ವಾದದಿಂದ ಯಾವುದೇ ತೊಂದರೆ ಇಲ್ಲದೆ ಚಂದನ್ ವಾಪಸ್​ ಆಗಿದ್ದಾನೆ ಎಂದು ಹೇಳಿದ ವೇಳೆ ರೇಣುಕಾಚಾರ್ಯ ಕಣ್ಣಾಲೆಗಳಿಂದ ಆನಂದಬಾಷ್ಪ ತನ್ನಿಂತಾನೇ ಹರಿಯಿತು.