ಸಿಗರೇಟ್ ಖರೀದಿ ನೆಪದಲ್ಲಿ ಬಂದ ಕಳ್ಳ ಮೊಬೈಲ್ ಎಗರಿಸಿ ಪರಾರಿ

ಚಿಕ್ಕಮಗಳೂರು: ಸಿಗರೇಟ್ ಖರೀದಿ ನೆಪದಲ್ಲಿ ಬಂದ ಕಳ್ಳ ಮೊಬೈಲ್ ಎಗರಿಸಿ ಪರಾರಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸಬ್ಬೇನಹಳ್ಳಿಯಲ್ಲಿರುವ ಅಂಗಡಿಯೊಂದಕ್ಕೆ ಬಂದು ಸಿಗರೇಟ್ ಖರೀದಿಸುವ ನೆಪ ಮಾಡಿದ್ದಾನೆ. ಅಂಗಡಿಯಲ್ಲಿದ್ದವರು ಸಿಗರೇಟ್ ಕೊಟ್ಟ ನಂತರ ಅದನ್ನು ಅಲ್ಲೆ ಹಚ್ಚಿ ಸೇದಿದ್ದಾನೆ. ಬಳಿಕ ಅಲ್ಲೇ ಡಬ್ಬದ ಮೇಲಿದ್ದ ಮೊಬೈಲ್​ನನ್ನ ತನ್ನದೇ ಫೂನ್ ಎಂಬಂತೆ ಪೂಸ್ ಕೊಟ್ಟಿದ್ದಾನೆ. ಸಂದರ್ಭ ಬಳಸಿ ಮೊಬೈಲ್ ಎಗರಿಸಿ ಪರಾರಿಯಾಗಿದ್ದಾನೆ. ಇವನ ಈ ಕೃತ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿನ್ನಡಿ ಗ್ರಾಮದ ಅಶೋಕ್ ಮೊಬೈಲ್ […]

ಸಿಗರೇಟ್ ಖರೀದಿ ನೆಪದಲ್ಲಿ ಬಂದ ಕಳ್ಳ ಮೊಬೈಲ್ ಎಗರಿಸಿ ಪರಾರಿ

Updated on: Jun 13, 2020 | 3:49 PM

ಚಿಕ್ಕಮಗಳೂರು: ಸಿಗರೇಟ್ ಖರೀದಿ ನೆಪದಲ್ಲಿ ಬಂದ ಕಳ್ಳ ಮೊಬೈಲ್ ಎಗರಿಸಿ ಪರಾರಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸಬ್ಬೇನಹಳ್ಳಿಯಲ್ಲಿರುವ ಅಂಗಡಿಯೊಂದಕ್ಕೆ ಬಂದು ಸಿಗರೇಟ್ ಖರೀದಿಸುವ ನೆಪ ಮಾಡಿದ್ದಾನೆ.

ಅಂಗಡಿಯಲ್ಲಿದ್ದವರು ಸಿಗರೇಟ್ ಕೊಟ್ಟ ನಂತರ ಅದನ್ನು ಅಲ್ಲೆ ಹಚ್ಚಿ ಸೇದಿದ್ದಾನೆ. ಬಳಿಕ ಅಲ್ಲೇ ಡಬ್ಬದ ಮೇಲಿದ್ದ ಮೊಬೈಲ್​ನನ್ನ ತನ್ನದೇ ಫೂನ್ ಎಂಬಂತೆ ಪೂಸ್ ಕೊಟ್ಟಿದ್ದಾನೆ. ಸಂದರ್ಭ ಬಳಸಿ ಮೊಬೈಲ್ ಎಗರಿಸಿ ಪರಾರಿಯಾಗಿದ್ದಾನೆ. ಇವನ ಈ ಕೃತ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿನ್ನಡಿ ಗ್ರಾಮದ ಅಶೋಕ್ ಮೊಬೈಲ್ ಕಳೆದುಕೊಂಡಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 8:08 am, Sat, 13 June 20