ಇಲ್ಲಿ ನಡೆಯುತ್ತಲೇ ಇದೆ ಅಮಾನವೀಯ ಘಟನೆ, ತೀವ್ರ ರಕ್ತ ಸ್ರಾವವಾದ್ರು ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ

ರಾಯಚೂರು: ಕೊವಿಡ್ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಡಿದರೂ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯವಹಿಸಿರೋ ಅಮಾನವೀಯ ಘಟನೆ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ರಾಯಚೂರಿನಲ್ಲಿ ಇಂತಹ ಘಟನೆ ಇದೇ ಮೊದಲೇನಲ್ಲ. ಈ ರೀತಿಯ ನಡಿತಾನೆ ಇರುತ್ತೆ ಆದ್ರೆ ಸರ್ಕಾರವಾಗಲಿ, ಆಡಳಿ ಮಂಡಳಿಯಾಗಲಿ ಯಾವುದೇ ಕ್ರಮ ಕೈಗೊಳ್ಳಲ್ಲ. ರಾಯಚೂರಿನ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದ ತೀವ್ರ ರಕ್ತ ಸ್ರಾವವಾಗಿ ಗರ್ಭಿಣಿ ನರಳಾಡಿದ್ದಾರೆ. ಆದರೆ ಯಾವ ವೈದ್ಯರು ಚಿಕಿತ್ಸೆಗೆ ಮುಂದಾಗಿಲ್ಲ. ಹೀಗಾಗಿ ರೊಚ್ಚಿಗೆದ್ದ ಕೊರೊನಾ ಸೋಂಕಿತರೆಲ್ಲ ಒಂದು ಕಡೆ ಸೇರಿ ಮಧ್ಯಾಹ್ನದ ಉಪಹಾರ […]

ಇಲ್ಲಿ ನಡೆಯುತ್ತಲೇ ಇದೆ ಅಮಾನವೀಯ ಘಟನೆ, ತೀವ್ರ ರಕ್ತ ಸ್ರಾವವಾದ್ರು ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ
Follow us
ಆಯೇಷಾ ಬಾನು
|

Updated on:Jun 13, 2020 | 3:50 PM

ರಾಯಚೂರು: ಕೊವಿಡ್ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಡಿದರೂ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯವಹಿಸಿರೋ ಅಮಾನವೀಯ ಘಟನೆ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ರಾಯಚೂರಿನಲ್ಲಿ ಇಂತಹ ಘಟನೆ ಇದೇ ಮೊದಲೇನಲ್ಲ. ಈ ರೀತಿಯ ನಡಿತಾನೆ ಇರುತ್ತೆ ಆದ್ರೆ ಸರ್ಕಾರವಾಗಲಿ, ಆಡಳಿ ಮಂಡಳಿಯಾಗಲಿ ಯಾವುದೇ ಕ್ರಮ ಕೈಗೊಳ್ಳಲ್ಲ.

ರಾಯಚೂರಿನ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದ ತೀವ್ರ ರಕ್ತ ಸ್ರಾವವಾಗಿ ಗರ್ಭಿಣಿ ನರಳಾಡಿದ್ದಾರೆ. ಆದರೆ ಯಾವ ವೈದ್ಯರು ಚಿಕಿತ್ಸೆಗೆ ಮುಂದಾಗಿಲ್ಲ. ಹೀಗಾಗಿ ರೊಚ್ಚಿಗೆದ್ದ ಕೊರೊನಾ ಸೋಂಕಿತರೆಲ್ಲ ಒಂದು ಕಡೆ ಸೇರಿ ಮಧ್ಯಾಹ್ನದ ಉಪಹಾರ ಬಹಿಷ್ಟಕರಿಸಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ನಿಗಧಿತ ಕೋವಿಡ ಆಸ್ಪತ್ರೆಯಲ್ಲಿದ್ದ ದೇವದುರ್ಗ ಮೂಲದ ಗರ್ಭಿಣಿ, ಜೂನ್ 8ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ತೀವ್ರ ರಕ್ತಸ್ರಾವದಿಂದ ಬಳಲಿದ್ದಳು. ಸಕಾಲಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಮಗು ಹೊಟ್ಟೆಯಲ್ಲೆ ಮೃತಪಟ್ಟಿದೆ. ಸೋಂಕಿತರು ಪ್ರತಿಭಟನೆ ನಡೆಸಿದ ಮೇಲೆ ಗರ್ಭಿಣಿಯನ್ನ ರಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಆಸ್ಪತ್ರೆಯಲ್ಲಿ ಸೋಂಕಿತರು ಸಿಬ್ಬಂದಿಗಳ ಜೊತೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ.

Published On - 9:30 am, Sat, 13 June 20