ಸುರತ್ಕಲ್‌ನಲ್ಲಿ ನೈತಿಕ ಪೊಲೀಸ್‌ಗಿರಿ: ಸಿಎಂ ಬೊಮ್ಮಾಯಿ ಇಂಥದ್ದನ್ನ ಸಹಿಸಲ್ಲ ಅಂದಿದ್ದರು, ಈಗೇನಾಯ್ತು? ಖಾದರ್ ಖಾರವಾದ ಪ್ರಶ್ನೆ
ತಂದೆ ತಾಯಿ ಪ್ರೀತಿಯಿಂದ ಸಾಕಿದ ಮಕ್ಕಳನ್ನು ಯಾರೋ ಒಬ್ಬ ರೌಡಿ ರಸ್ತೆಯಲ್ಲಿ ಹೊಡೆಯೋದಂದ್ರೆ ಏನು ಆರ್ಥ? ಬೆಳಿಗ್ಗೆ ಅರೆಸ್ಟ್ ಆದವ್ರು ಸಂಜೆ ಬೇಲ್ ನಲ್ಲಿ ಬರ್ತಾರೆ ಅಂದ್ರೆ ಏನರ್ಥ? ಹೀಗಾದರೆ ನಾಳೆ ಮತ್ತೆ ಇಂಥದ್ದೇ ಘಟನೆ ನಡೆಯಬಹುದು. ನಾನು ಉಸ್ತುವಾರಿ ಸಚಿವನಾಗಿದ್ದಾಗ ಇಲಾಖೆಯಲ್ಲಿ ಶೂಟ್ ಮಾಡುವ ಭಯವಿತ್ತು. ತಪ್ಪು ಮಾಡೋ ರೌಡಿಗಳ ಕಾಲಿಗೆ ಶೂಟ್ ಮಾಡ್ತಿದ್ದರು.
ಮಂಗಳೂರು: ಮಂಗಳೂರಿನ ಸುರತ್ಕಲ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ ಹಿನ್ನೆಲೆಯಲ್ಲಿ ರೌಡಿಗಳ ಅಟ್ಟಹಾಸದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕಪ್ಪುಚುಕ್ಕೆ ಬಂದಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಭಯವಿಲ್ಲದೆ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಆಡಳಿತ ಪಕ್ಷದ ಒತ್ತಡದಿಂದ ಪೊಲೀಸರು ಅಸಹಾಯಕರಾಗಿದ್ದಾರೆ. ಪೊಲೀಸರು ಕಾನೂನು ಪಾಲಿಸುವುದರ ಬದಲಿಗೆರಾಜಕೀಯ ಬಾಸ್‌ಗಳಿಗೆ ತಲೆ ಬಾಗುತ್ತಿದ್ದಾರೆಂದು ಶಾಸಕ ಖಾದರ್ ಇದೇ ವೇಳೆ ಆರೋಪಿಸಿದರು.
ಸುರತ್ಕಲ್ ನಲ್ಲಿ ನಡೆದ ಘಟನೆಯಲ್ಲಿ ಪೊಲೀಸ್ ಇಲಾಖೆ ಎದುರೇ ಯುವಕ-ಯುವತಿಗೆ ಹೊಡೆದಿದ್ದಾರೆ. ಪೊಲೀಸ್ ಅಧಿಕಾರಿ ಅಂಗಲಾಚಿದರೂ ಅವರ ಎದುರೇ ಹೊಡೆದಿದ್ದಾರೆ. ಪೊಲೀಸ್ ಇಲಾಖೆ ಲಾಠಿ ಮರೆತರೆ ಜನರೇ ಲಾಠಿ ಹಿಡಿಯೋ ಪರಿಸ್ಥಿತಿ ಬರಬಹುದು. ಇಂಥಹ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಸೆಕ್ಷನ್ 307 ಹಾಕಬೇಕಿತ್ತು. ಪೊಲೀಸ್ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಯಾದರೂ ಆ ಕೇಸ್ ಯಾಕೆ ಹಾಕಿಲ್ಲ? ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಅಸಹಾಯಕತೆ ತೋರಿಸಿದೆ ಎಂದು ಅಸಮಾಧಾನ ಪಟ್ಟರು.
ತಂದೆ ತಾಯಿ ಪ್ರೀತಿಯಿಂದ ಸಾಕಿದ ಮಕ್ಕಳನ್ನು ಯಾರೋ ಒಬ್ಬ ರೌಡಿ ರಸ್ತೆಯಲ್ಲಿ ಹೊಡೆಯೋದಂದ್ರೆ ಏನು ಆರ್ಥ? ಬೆಳಿಗ್ಗೆ ಅರೆಸ್ಟ್ ಆದವ್ರು ಸಂಜೆ ಬೇಲ್ ನಲ್ಲಿ ಬರ್ತಾರೆ ಅಂದ್ರೆ ಏನರ್ಥ? ಹೀಗಾದರೆ ನಾಳೆ ಮತ್ತೆ ಇಂಥದ್ದೇ ಘಟನೆ ನಡೆಯಬಹುದು. ನಾನು ಉಸ್ತುವಾರಿ ಸಚಿವನಾಗಿದ್ದಾಗ ಇಲಾಖೆಯಲ್ಲಿ ಶೂಟ್ ಮಾಡುವ ಭಯವಿತ್ತು. ತಪ್ಪು ಮಾಡೋ ರೌಡಿಗಳ ಕಾಲಿಗೆ ಶೂಟ್ ಮಾಡ್ತಿದ್ದರು.
ಮಂಗಳೂರು ಕಮಿಷನರೇಟ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಕಾಂಗ್ರೆಸ್ ಬೆಂಬಲ ಕೊಡುತ್ತೆ. ಪೊಲೀಸ್ ಇಲಾಖೆ ಕರ್ತವ್ಯಕ್ಕೆ ಅಡ್ಡಿ, ಸೆಕ್ಷನ್ 307 ಯಾಕೆ ಹಾಕಿಲ್ಲ? ಮುಖ್ಯಮಂತ್ರಿಗಳು ಇಂಥದ್ದನ್ನ ನಾನು ಸಹಿಸಲ್ಲ ಅಂತ ಟ್ವೀಟ್ ಮಾಡಿದ್ದರು. ಈಗೇನಾಯ್ತು ಎಂದು ಶಾಸಕ ಖಾದರ್ ಪ್ರಶ್ನಿಸಿದ್ದಾರೆ.
ಸದ್ಯ ಈ ವಿಚಾರವನ್ನು ಮುಖ್ಯಮಂತ್ರಿ ಮತ್ತು ಗೃಹಸಚಿವರ ಗಮನಕ್ಕೆ ತರ್ತೇನೆ. ಇಂಥವರು ಯಾವುದೇ ಧರ್ಮದಲ್ಲಿ ಇದ್ದರೂ ಅವರದು ನಿಜವಾದ ದೇಶದ್ರೋಹ. ಸೋಮೇಶ್ವರದ ಮನೆಗಳಲ್ಲಿ ಮತಾಂತರದ ಭಿತ್ತಿಪತ್ರ ಇಟ್ಟು ಅಶಾಂತಿ ಸೃಷ್ಟಿಸಲಾಗಿದೆ. ಆದರೆ ಇದನ್ನ ಪತ್ತೆ ಹಚ್ಚಿ ಜನರಿಗೆ ತಿಳಿಸುವ ಕೆಲಸ ಆಗಬೇಕು. ಇದರಿಂದ ಒಂದು ವರ್ಗದ ಮೇಲೆ ಸಂಶಯ ಮೂಡುವಂತಾಗುತ್ತದೆ. ಹೀಗಾಗಿ ಸರ್ಕಾರ ಈ ಬಗ್ಗೆ ಜನರಿಗೆ ಸ್ಪಷ್ಟತೆ ಕೊಡಬೇಕು ಎಂದು ಶಾಸಕ ಖಾದರ್ ಆಗ್ರಹಿಸಿದರು. ಇದನ್ನೂ ಓದಿ: ಇನ್ಸ್ಪೆಕ್ಟರ್ ಎದುರೇ ನೈತಿಕ ಪೊಲೀಸ್ ಗಿರಿ; ಯುವಕ-ಯುವತಿ ಮೇಲೆ ದಾಳಿಗೆ ಮುಂದಾದ ಅನ್ಯಕೋಮಿನ ಯುವಕರ ತಂಡ ಇದನ್ನೂ ಓದಿ: ಹನಿಟ್ರ್ಯಾಪ್ ಮಾಡುತ್ತಿದ್ದ ಮಂಗಳೂರು ಹುಡುಗಿಯರನ್ನು ಬಲೆಗೆ ಬೀಳಿಸಿದ ಸುರತ್ಕಲ್ ಪೊಲೀಸರು
(moral policing congress mla ut khader questions police in action)
Published On - 11:56 am, Wed, 29 September 21