ತುಂಗಭದ್ರಾ ನದಿ ಮಧ್ಯೆ ಸಿಲುಕಿದ 40ಕ್ಕೂ ಹೆಚ್ಚು ಕೋತಿಗಳು

|

Updated on: Aug 17, 2020 | 5:43 PM

ಬಳ್ಳಾರಿ:ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ನದಿಯ ಮದ್ಧದಲ್ಲಿರುವ ಬಂಡೆಯ ಮೇಲೆ ನಲವತ್ತಕ್ಕೂ ಹೆಚ್ಚು ಕೋತಿಗಳು ಸಿಲುಕಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಗೀರ್​ದಾರ್ ಬಂಡಿ ಬಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಿಂದಾಗಿ, ತುಂಗಭದ್ರಾ ನದಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಸುತ್ತಲೂ ನೀರು ಇರುವ ಕಾರಣದಿಂದಾಗಿ 40ಕ್ಕೂ ಹೆಚ್ಚು ಕೋತಿಗಳು ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಕುಳಿತು […]

ತುಂಗಭದ್ರಾ ನದಿ ಮಧ್ಯೆ ಸಿಲುಕಿದ 40ಕ್ಕೂ ಹೆಚ್ಚು ಕೋತಿಗಳು
Follow us on

ಬಳ್ಳಾರಿ:ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ನದಿಯ ಮದ್ಧದಲ್ಲಿರುವ ಬಂಡೆಯ ಮೇಲೆ ನಲವತ್ತಕ್ಕೂ ಹೆಚ್ಚು ಕೋತಿಗಳು ಸಿಲುಕಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಗೀರ್​ದಾರ್ ಬಂಡಿ ಬಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಿಂದಾಗಿ, ತುಂಗಭದ್ರಾ ನದಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ.

ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಸುತ್ತಲೂ ನೀರು ಇರುವ ಕಾರಣದಿಂದಾಗಿ 40ಕ್ಕೂ ಹೆಚ್ಚು ಕೋತಿಗಳು ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಕುಳಿತು ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಪರದಾಡುತ್ತಿವೆ.

Published On - 5:29 pm, Mon, 17 August 20