ಜಾಲತಾಣಗಳಲ್ಲಿ ಒಂಟಿ ಯುವತಿಯರ ಬೇಟೆ: ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಸೆರೆ
ಬೆಂಗಳೂರು:ಫೇಸ್ಬುಕ್ ಹಾಗೂ ಡೇಟಿಂಗ್ ಆ್ಯಪ್ಗಳ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ, ಹಣ ಪಡೆದುಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿ ಸುಹಾಸ್ ಹರಿಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಫೇಸ್ಬುಕ್ ಮತ್ತು ಡೇಟಿಂಗ್ ಆ್ಯಪ್ಗಳ ಮುಖಾಂತರ, ಕೆಲಸಕ್ಕೆ ಹೋಗುತ್ತಿದ್ದ ಒಂಟಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ತದನಂತರ ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಲಕ್ಷಲಕ್ಷ ಹಣ ಪಡೆದು ವಂಚಿಸುತ್ತಿದ್ದ. ಇದೇ ರೀತಿಯಾಗಿ ಬೊಮ್ಮನಹಳ್ಳಿಯ ಯುವತಿಯಿಂದ 12 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿ, […]

ಬೆಂಗಳೂರು:ಫೇಸ್ಬುಕ್ ಹಾಗೂ ಡೇಟಿಂಗ್ ಆ್ಯಪ್ಗಳ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ, ಹಣ ಪಡೆದುಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿ ಸುಹಾಸ್ ಹರಿಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಫೇಸ್ಬುಕ್ ಮತ್ತು ಡೇಟಿಂಗ್ ಆ್ಯಪ್ಗಳ ಮುಖಾಂತರ, ಕೆಲಸಕ್ಕೆ ಹೋಗುತ್ತಿದ್ದ ಒಂಟಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ತದನಂತರ ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಲಕ್ಷಲಕ್ಷ ಹಣ ಪಡೆದು ವಂಚಿಸುತ್ತಿದ್ದ.
ಇದೇ ರೀತಿಯಾಗಿ ಬೊಮ್ಮನಹಳ್ಳಿಯ ಯುವತಿಯಿಂದ 12 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿ, ಬಳಿಕ ಫೇಸ್ಬುಕ್ನಲ್ಲಿ ಬೇರೊಂದು ಯುವತಿಯೊಂದಿಗೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಸಂತ್ರಸ್ತೆ, ಯುವತಿಯನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ. ವಿಚಾರಣೆಯ ವೇಳೆ ಸುಹಾಸ್ ಇನ್ನಿಬ್ಬರು ಯುವತಿಯರಿಗೆ ವಂಚಿಸಿ 1.40 ಲಕ್ಷ ಹಣವನ್ನು ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಎಚ್ಚೆತ್ತುಕೊಂಡ ಸಂತ್ರಸ್ತ ಯುವತಿ, ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿ ಸುಹಾಸ್ ಹರಿಪ್ರಸಾದ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾಗ, ಈ ಮೊದಲೆ ಸುಹಾಸ್ಗೆ ಮದುವೆಯಾಗಿದ್ದು, ಸಂಸಾರ ನಡೆಸುತ್ತಿರುವುದು ತಿಳಿದು ಬಂದಿದೆ.
Published On - 4:53 pm, Mon, 17 August 20