ಕೇವಲ ಬೌಂಡರಿ, ಸಿಕ್ಸರ್ಗಳಿಂದಲೇ 126 ರನ್ ಚಚ್ಚಿದ ರೋಹಿತ್; ವಿಡಿಯೋ ನೋಡಿ
Rohit Sharma Century: 7 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಗೆ ಮರಳಿದ ರೋಹಿತ್ ಶರ್ಮಾ, ಮುಂಬೈ ಪರ ಸಿಕ್ಕಿಂ ವಿರುದ್ಧ ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸಿ, ಒಟ್ಟು 155 ರನ್ ಬಾರಿಸಿದರು. 9 ಸಿಕ್ಸರ್, 18 ಬೌಂಡರಿಗಳಿದ್ದ ಈ ಹೊಡಿಬಡಿ ಇನ್ನಿಂಗ್ಸ್‌ನ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗುತ್ತಿದೆ. ರೋಹಿತ್ ಅವರ ಈ ಕಮ್‌ಬ್ಯಾಕ್ ಪ್ರದರ್ಶನ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ.
7 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ತಮ್ಮ ಹೊಡಿಬಡಿ ಆಟದ ಮೂಲಕ ಮೊದಲ ದಿನವೇ ಭರ್ಜರಿ ಶತಕ ಸಿಡಿಸಿದರು. ಈ ಟೂರ್ನಿಯಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್, ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸಿದರು. ತಮ್ಮ ಈ ಇನ್ನಿಂಗ್ಸ್ನಲ್ಲಿ 94 ಎಸೆತಗಳನ್ನು ಎದುರಿಸಿದ ರೋಹಿತ್ 9 ಸಿಕ್ಸರ್ ಮತ್ತು 18 ಬೌಂಡರಿಗಳ ಸಹಾಯದಿಂದ ಬರೋಬ್ಬರಿ 155 ರನ್ ಸಿಡಿಸಿದರು. ಅಂದರೆ ರೋಹಿತ್ ಬರಿ ಬೌಂಡರಿ ಹಾಗೂ ಸಿಕ್ಸರ್ಗಳಿಂದಲೇ 126 ರನ್ ಕಲೆಹಾಕಿದರು. ಇದೀಗ ಅದರ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ.
Latest Videos

