DJ ಹಳ್ಳಿ ಗಲಾಟೆ: ಅಲ್ ಹಿಂದ್ ಸಂಘಟನೆ ಸಂಪರ್ಕವಿದ್ದ ಆರೋಪಿ CCB ವಶಕ್ಕೆ
ಬೆಂಗಳೂರು: ಡಿಜೆ ಹಳ್ಳಿ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಡಿಜೆ ಹಳ್ಳಿ ವಾಸಿ ಸಿರಾಜುದ್ದೀನ್ ಬಂಧಿತ ಆರೋಪಿ. ಸಿರಾಜುದ್ದೀನ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಆತನನ್ನ ನಿನ್ನೆ ತಡರಾತ್ರಿ ತನ್ನ ಡಿಜೆ ಹಳ್ಳಿಯ ನಿವಾಸದಿಂದ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಎಟಿಸಿ ಮತ್ತು ಸಿಸಿಬಿ ಪೊಲೀಸರ ವಿವಿಧ ತಂಡಗಳು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ 2016ರಲ್ಲಿ ಶಿವಾಜಿನಗರ ಬಳಿ ನಡೆದ […]
ಬೆಂಗಳೂರು: ಡಿಜೆ ಹಳ್ಳಿ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಡಿಜೆ ಹಳ್ಳಿ ವಾಸಿ ಸಿರಾಜುದ್ದೀನ್ ಬಂಧಿತ ಆರೋಪಿ.
ಸಿರಾಜುದ್ದೀನ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಆತನನ್ನ ನಿನ್ನೆ ತಡರಾತ್ರಿ ತನ್ನ ಡಿಜೆ ಹಳ್ಳಿಯ ನಿವಾಸದಿಂದ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಎಟಿಸಿ ಮತ್ತು ಸಿಸಿಬಿ ಪೊಲೀಸರ ವಿವಿಧ ತಂಡಗಳು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ 2016ರಲ್ಲಿ ಶಿವಾಜಿನಗರ ಬಳಿ ನಡೆದ ಹಿಂದೂ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಜೊತೆಗೆ, ಈತ ಅಲ್ ಹಿಂದ್ ಸಂಘಟನೆಯ ಸದಸ್ಯರ ಜೊತೆ ನಿಕಟ ಸಂಪರ್ಕ ಸಹ ಹೊಂದಿದ್ದ ಎಂದು ಹೇಳಲಾಗಿದೆ. ಸದ್ಯ ಈತನನ್ನ ಸಿಸಿಬಿ ವಶಕ್ಕೆ ಪಡೆದು ಎಲ್ಲಾ ಆಯಾಮದಲ್ಲಿ ತನಿಖೆಯನ್ನ ನಡೆಸುತ್ತಿದ್ದಾರೆ.