Top News: ಲೆಬನಾನ್ ಸ್ಫೋಟ, ಜನರ ಬದುಕು ಬರ್ಬಾದ್
ಲೆಬನಾನ್ ಸ್ಫೋಟದಿಂದಾಗಿ ಇಡೀ ಜನಜೀವನವೇ ಅಸ್ತವ್ಯಸ್ಥವಾಗಿದೆ. ಸ್ಫೊಟದ ತೀವ್ರತೆಯಿಂದಾಗಿ ಹಲವರು ಜೀವ ಕಳೆದುಕೊಂಡಿದ್ರೆ, ಉಳಿದವರ ಬದುಕು ಬರ್ಬಾದ್ ಆಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವ ನಡೆಸುತ್ತಿದ್ದವರು ಮನೆಯನ್ನ ಕಳೆದುಕೊಂಡು ವಾಸಿಸಲು ಜಾಗವಿಲ್ಲದೇ ಬೀದಿ ಬದಿ ಬದುಕುವಂತಾಗಿದೆ. ಹೊಸ ಬದುಕು ಕಟ್ಟಿಕೊಳ್ಳಲು ಮತ್ತಿನ್ನೆಷ್ಟು ದಿನ ಕಾಯಬೇಕೋ ಅಂತಾ ಕಂಗಾಲ್ ಆಗಿದ್ದಾರೆ. ಕೊರೊನಾ ‘ಕಬಂಧ ಬಾಹು’ ಕೊರೊನಾ ವೈರಸ್ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಇದ್ದು, ದೇಶದಲ್ಲಿ 2,18,24,807 ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. 7,73,032 ಜನರು ಜೀವ ಕಳೆದುಕೊಂಡಿದ್ದಾರೆ. […]
ಲೆಬನಾನ್ ಸ್ಫೋಟದಿಂದಾಗಿ ಇಡೀ ಜನಜೀವನವೇ ಅಸ್ತವ್ಯಸ್ಥವಾಗಿದೆ. ಸ್ಫೊಟದ ತೀವ್ರತೆಯಿಂದಾಗಿ ಹಲವರು ಜೀವ ಕಳೆದುಕೊಂಡಿದ್ರೆ, ಉಳಿದವರ ಬದುಕು ಬರ್ಬಾದ್ ಆಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವ ನಡೆಸುತ್ತಿದ್ದವರು ಮನೆಯನ್ನ ಕಳೆದುಕೊಂಡು ವಾಸಿಸಲು ಜಾಗವಿಲ್ಲದೇ ಬೀದಿ ಬದಿ ಬದುಕುವಂತಾಗಿದೆ. ಹೊಸ ಬದುಕು ಕಟ್ಟಿಕೊಳ್ಳಲು ಮತ್ತಿನ್ನೆಷ್ಟು ದಿನ ಕಾಯಬೇಕೋ ಅಂತಾ ಕಂಗಾಲ್ ಆಗಿದ್ದಾರೆ.
ಕೊರೊನಾ ‘ಕಬಂಧ ಬಾಹು’ ಕೊರೊನಾ ವೈರಸ್ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಇದ್ದು, ದೇಶದಲ್ಲಿ 2,18,24,807 ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. 7,73,032 ಜನರು ಜೀವ ಕಳೆದುಕೊಂಡಿದ್ದಾರೆ. ಪ್ರಸ್ತುತ 64,93,447 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12,558,328 ಜನರು ವೈರಸ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ.
ಅಮೆರಿಕದಲ್ಲಿ ‘ಸಾವಿನ ಕೇಕೆ’ ಅಮೆರಿಕದಲ್ಲಿ ಹೆಮ್ಮಾರಿ ವೈರಸ್ ರಣಕೇಕೆ ಹಾಕ್ತಿದ್ದು, ಸೋಂಕಿತರ ಸಂಖ್ಯೆ 55,66,632ಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ 1,73,128 ಜನರು ಜೀವ ಕಳೆದುಕೊಂಡಿದ್ದಾರೆ. ವೈರಸ್ನಿಂದಾಗಿ 24,70,780 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, 29,22,724 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಸಾವಿನ ಸಂಖ್ಯೆ 2 ಕೋಟಿಯತ್ತ ದಾಪುಗಾಲಿಡ್ತಿರೋದು ಆತಂಕ ತಂದಿದೆ.
ಪ್ರವಾಸಿಗರಿಂದಲೇ ಟೆನ್ಷನ್ ಜರ್ಮನಿ ದೇಶಕ್ಕೆ ವಿದೇಶದಿಂದ ಬರುವವರೇ ದೊಡ್ಡ ತಲೆನೋವಾಗಿದ್ದಾರೆ. ಲಾಕ್ಡೌನ್ ಸಡಿಲಿಕೆ ಬಳಿಕ ದೇಶದಲ್ಲಿ ಪ್ರವಾಸೋದ್ಯಮವನ್ನೂ ಪುನಾರಂಭ ಮಾಡಲಾಗಿದೆ. ಇದ್ರ ಬೆನ್ನಲ್ಲೇ, ಪ್ರವಾಸಿಗರು ಹೆಚ್ಚಾಗಿ ಬರ್ತಿದ್ದು, ಬರುವವರಲ್ಲಿ ಅತಿ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್ ಇರೋದು ಪತ್ತೆಯಾಗ್ತಿದೆ. ಆದ್ರೆ, ಈ ಬಗ್ಗೆ ಅಧಿಕಾರಿಗಳು ಸತ್ಯ ಬಚ್ಚಿಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ.
ಎಲೆಕ್ಷನ್ ಮುಂದೂಡಿಕೆ ನ್ಯೂಜಿಲೆಂಡ್ನಲ್ಲಿ ಕೊರೊನಾ ವೈರಸ್ ಅಬ್ಬರ ಹೆಚ್ಚಾಗುತ್ತಿರೋದ್ರಿಂದ ಚುನಾವಣೆ ಮುಂದೂಡಲು ಸರ್ಕಾರ ಚಿಂತನೆ ನಡೆಸಿದೆ. ವಿಪಕ್ಷ ಕೂಡ ಕೊರೊನಾ ಕಾಲದಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ ಅಂತಾ ಹೇಳಿರೋದ್ರಿಂದ, ಸೆಪ್ಟೆಂಬರ್ 19 ರಂದು ನಡೆಯಬೇಕಿದ್ದ ಎಲೆಕ್ಷನ್, ಅಕ್ಟೋಬರ್ 17ಕ್ಕೆ ಮುಂದೂಡಿಕೆಯಾಗಿದೆ. ಅಕ್ಲಾಂಡ್ನಲ್ಲಿ ಸೋಂಕು ಹೆಚ್ಚಿರೋದ್ರಿಂದ ನ್ಯೂಜಿಲೆಂಡ್ ಲಾ ಪ್ರಕಾರ ತಿಂಗಳ ಮಟ್ಟಿಗೆ ಮಂದೂಡಿಕೆಯಾಗಿದೆ.
ಆಸ್ಟ್ರೇಲಿಯಾಗೆ ಡೆಡ್ಲಿ ಕಾಟ ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ನ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕಿನಿಂದಾಗಿ 23,370 ಜನರಿಗೆ ವೈರಸ್ ಅಟ್ಯಾಕ್ ಆಗಿದ್ರೆ, 728 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಘಾತಕಾರಿ ವಿಚಾರ ಅಂದ್ರೆ ಕೇವಲ 24 ಗಂಟೆಗಳ ಅವಧಿಯಲ್ಲಿ 25 ಜನರು ಸಾವನ್ನಪ್ಪಿದ್ದು, ಕಾಂಗರೂ ನಾಡು ಕಂಗಾಲ್ ಆಗುವಂತಾಗಿದೆ. ವಿಕ್ಟೋರಿಯಾದಲ್ಲೇ 25 ಜನರು ಸಾವನ್ನಪ್ಪಿರೋದು ಟೆನ್ಷನ್ ತಂದೊಡ್ಡಿದೆ.
ಲೆಬನಾನ್ ವೈರಸ್ ಸ್ಫೋಟ ಸ್ಫೊಟದಿಂದ ಕಂಗೆಟ್ಟಿರುವ ಲೆಬನಾನ್ ದೇಶದಲ್ಲಿ ಕೊರೊನಾ ವೈರಸ್ ಕೂಡ ವಿಸ್ಫೋಟಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 139 ಜನರಿಗೆ ವೈರಸ್ ಅಟ್ಯಾಕ್ ಆಗಿದ್ದು, 6 ಜನ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,881ಕ್ಕೆ ಏರಿಕೆಯಾಗಿದ್ರೆ, 103 ಜನರು ಜೀವ ಕಳೆದುಕೊಂಡಿದ್ದಾರೆ.
ನೈಟ್ ಲೈಫ್ಗೆ ಕುತ್ತು ಸ್ಪೇನ್ನಲ್ಲಿ ಕೊರೊನಾ ಸೋಂಕಿನಿಂದಾಗಿ 3,58,843 ಜನರಿಗೆ ವೈರಸ್ ಹೊಕ್ಕಿದ್ದು, 28 ಸಾವಿರ ಜನರ ಜೀವಕ್ಕೇ ಕುತ್ತು ತಂದಿದೆ. ಇದ್ರಿಂದ ಎಚ್ಚೆತ್ತ ಸರ್ಕಾರ ಸ್ಪೇನ್ನಲ್ಲಿ ನೈಟ್ ಕ್ಲಬ್ ಸೇರಿದಂತೆ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಬೆಳಗ್ಗಿನ ಜಾವ 7 ಗಂಟೆವರೆಗೂ ನಿರ್ಬಂಧ ವಿಧಿಸಿದೆ. ಹೀಗಾಗಿ, ನೈಟ್ಕ್ಲಬ್ಗಳನ್ನೇ ನೆಚ್ಚಿಕೊಂಡಿದ್ದ ಮಾಲೀಕರು ಮತ್ತು ಕೆಲಸಗಾರರಿಗೂ ಸಂಕಷ್ಟ ಎದುರಾಗಿದೆ.
ಥಾಯ್ಲೆಂಡ್ನಲ್ಲಿ ವಿರೋಧಿ ‘ಕಿಚ್ಚು’ ಥಾಯ್ಲೆಂಡ್ನ ಪ್ರಧಾನಿ ಪ್ರಯುತ್ ಚಾನ್ ಮಿಲಿಟರಿ ದಂಗೆಯಿಂದಾಗಿ ಅಧಿಕಾರಕ್ಕೆ ಏರಿದ್ದಾರೆ. ಅವರು ಪಟ್ಟಕ್ಕೆ ಬಂದಾಗಿನಿಂದ ದೇಶದಲ್ಲಿ ಸಂವಿಧಾನದಲ್ಲಿ ಬದಲಾವಣೆ, ಹಾಗೂ ಕಿರುಕುಳವೂ ಹೆಚ್ಚಾಗಿದೆ. ಹೀಗಾಗಿ, ಸುಮಾರು 10 ಸಾವಿರಕ್ಕು ಹೆಚ್ಚಿನ ವಿದ್ಯಾರ್ಥಿಗಳು ಬೀದಿಗಿಳದು ಪ್ರತಿಭಟನೆ ನಡೆಸಿದ್ರು. ಪ್ರಧಾನಿ ರಾಜೀನಾಮೆ ನೀಡಿ ಪ್ರಜಾಪ್ರಭುತ್ವವನ್ನ ಉಳಿಸಬೇಕು ಅಂತಾ ಒತ್ತಾಯಿಸಿದ್ರು.