AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Just miss.. ವಿಮಾನ ಅವಘಡದಿಂದ ಅಮೆರಿಕ ಅಧ್ಯಕ್ಷ ಟ್ರಂಪ್​ ಸೇಫ್​!

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ದಿನದಿನಕ್ಕೂ ಏರುತ್ತಲೇ ಇದೆ. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮರು ಆಯ್ಕೆಯ ಕನಸು ಹೊತ್ತಿದ್ದರೆ ಇತ್ತ ಡೆಮೋಕ್ರಾಟ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್​ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ ತೋರಿಸಿದ್ದಾರೆ. ಈ ನಡುವೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವಘಡ ಒಂದರಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಭಾನುವಾರ ಅಧ್ಯಕ್ಷ ಟ್ರಂಪ್​ರ ಅಧಿಕೃತ ವಿಮಾನ ಏರ್​ ಫೋರ್ಸ್​ ಒನ್​ಗೆ ಸಣ್ಣದೊಂದು ಡ್ರೋನ್​ ಡಿಕ್ಕಿಯಾಗುವಷ್ಟು ನಿಕಟವಾಗಿ ಹಾದು ಹೋಯಿತು ಎಂದು ಉನ್ನತ ಮೂಲಗಳು ಮಾಹಿತಿ […]

Just miss.. ವಿಮಾನ ಅವಘಡದಿಂದ ಅಮೆರಿಕ ಅಧ್ಯಕ್ಷ ಟ್ರಂಪ್​ ಸೇಫ್​!
KUSHAL V
| Edited By: |

Updated on: Aug 18, 2020 | 12:34 PM

Share

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ದಿನದಿನಕ್ಕೂ ಏರುತ್ತಲೇ ಇದೆ. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮರು ಆಯ್ಕೆಯ ಕನಸು ಹೊತ್ತಿದ್ದರೆ ಇತ್ತ ಡೆಮೋಕ್ರಾಟ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್​ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ ತೋರಿಸಿದ್ದಾರೆ. ಈ ನಡುವೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವಘಡ ಒಂದರಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಭಾನುವಾರ ಅಧ್ಯಕ್ಷ ಟ್ರಂಪ್​ರ ಅಧಿಕೃತ ವಿಮಾನ ಏರ್​ ಫೋರ್ಸ್​ ಒನ್​ಗೆ ಸಣ್ಣದೊಂದು ಡ್ರೋನ್​ ಡಿಕ್ಕಿಯಾಗುವಷ್ಟು ನಿಕಟವಾಗಿ ಹಾದು ಹೋಯಿತು ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಿಬ್ಬಂದಿಯ ಪ್ರಕಾರ ವಾಷಿಂಗ್ಟನ್​ ಏರ್​ಪೋರ್ಟ್​ನಲ್ಲಿ ಅಧ್ಯಕ್ಷರ ವಿಮಾನ ಲ್ಯಾಂಡ್​ ಆಗುವ ವೇಳೆ ಈ ಘಟನೆ ಸಂಭವಿಸಿದೆ.

ಪ್ಲಸ್​ ಆಕಾರದ ಈ ಹಳದಿ ಮತ್ತು ಕಪ್ಪು ಬಣ್ಣದ ಡ್ರೋನ್​ ವಿಮಾನದ ಬಲಭಾಗಕ್ಕೆ ತಾಗುವಷ್ಟು ಹತ್ತಿರವಾಗಿ ಹಾದು ಹೋಯಿತು ಎಂದು ತಿಳಿದುಬಂದಿದೆ. ಸದ್ಯ, ಘಟನೆ ಕುರಿತು ಅಮೆರಿಕಾ ಅಧ್ಯಕ್ಷರ ಭದ್ರತಾ ಪಡೆ ಸೀಕ್ರೆಟ್​ ಸರ್ವೀಸ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವೈಮಾನಿಕ ತಜ್ಞರ ಪ್ರಕಾರ ಅಷ್ಟು ಪುಟ್ಟ ಗಾತ್ರದ ಡ್ರೋನ್​ ವಿಮಾನಕ್ಕೆ ತಾಗಿದ್ದರೆ ಯಾವುದೇ ಅಪಾಯವಿರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಒಂದು ವೇಳೆ ಏರ್​ ಫೋರ್ಸ್​ ಒನ್​ನ ಕಾಕ್​ಪಿಟ್​ಗೆ ಅಥವಾ ಇಂಜಿನ್​ಗೆ ತಾಗಿದ್ದರೆ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುಂಡಿನ ದಾಳಿ, ಅಧ್ಯಕ್ಷ ಟ್ರಂಪ್​ರನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದ ಭದ್ರತಾಧಿಕಾರಿಗಳು

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್