6 ಲಕ್ಷ ರೂಪಾಯಿ ಬೆಲೆಯ ಬ್ಯಾಗ್ ಧರಿಸಿದ ನಟಿ ಅನನ್ಯಾ ಪಾಂಡೆ
ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಅವರು ಧರಿಸಿರುವ ಈ ಚಿಕ್ಕ ಬ್ಯಾಗ್ ಬೆಲೆ 6 ಲಕ್ಷ ರೂಪಾಯಿ! ಇದು ಕೇವಲ ಹಣದ ವಿಷಯ ಅಲ್ಲ. ನಟಿಯ ಪಾಲಿಗೆ ಹೆಮ್ಮೆಯ ವಿಷಯ. ಯಾಕೆಂದರೆ, ಜಾಗತಿಕ ಮಟ್ಟದಲ್ಲಿ ಹೆಸರುವಾಸಿ ಆಗಿರುವ ‘ಶನೆಲ್’ ಕಂಪನಿಗೆ ಅನನ್ಯಾ ಪಾಂಡೆ ಅವರು ಪ್ರಚಾರ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ.

ನಟಿ ಅನನ್ಯಾ ಪಾಂಡೆ (Ananya Panday) ಅವರು ಸಖತ್ ಮಿಂಚುತ್ತಿದ್ದಾರೆ. ಅವರು ನಟಿಸಿರುವ ‘ಕೇಸರಿ: ಚಾಪ್ಟರ್ 2’ (Kesari Chapter 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 18ರಂದು ರಿಲೀಸ್ ಆಗಲಿರುವ ಈ ಸಿನಿಮಾ ಮೇಲೆ ಜನರಿಗೆ ನಿರೀಕ್ಷೆ ಇದೆ. ಈ ನಡುವೆ ಇನ್ನೊಂದು ವಿಚಾರಕ್ಕೆ ಅನನ್ಯಾ ಪಾಂಡೆ ಅವರು ಸುದ್ದಿ ಆಗಿದ್ದಾರೆ. ಬರೋಬ್ಬರಿ 6 ಲಕ್ಷ ರೂಪಾಯಿ ಮೌಲ್ಯದ ಬ್ಯಾಗ್ ಧರಿಸಿ ಅವರು ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿ ಎಲ್ಲರಿಗೂ ಅಚ್ಚರಿ ಏಗಿದೆ. ಅಂದಹಾಗೆ, ಇದು ಬರೀ ಹಣದ ವಿಷಯ ಅಲ್ಲ. ನಟಿಯ ಪಾಲಿಗೆ ಹೆಮ್ಮೆಯ ವಿಷಯ ಕೂಡ ಹೌದು.
ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅನನ್ಯಾ ಪಾಂಡೆ ಅವರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತಿವೆ. ನೆಪೋಟಿಸಂ ಟೀಕೆ ನಡುವೆಯೂ ಅವರು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಜಾಗತಿಕ ಮಟ್ಟದಲ್ಲಿ ಕೂಡ ಮನ್ನಣೆ ಸಿಗುತ್ತಿದೆ. ಫ್ರ್ಯಾನ್ಸ್ ಮೂಲದ ‘ಶನೆಲ್’ ಕಂಪನಿಗೆ ಅನನ್ಯಾ ಪಾಂಡೆ ಅವರು ಭಾರತದಿಂದ ರಾಯಭಾರಿ ಆಗಿದ್ದಾರೆ.
ಹೌದು, ಅನನ್ಯಾ ಪಾಂಡೆ ಅವರು ಧರಿಸಿರುವುದು ‘ಶನೆಲ್’ ಕಂಪನಿಯ ಲಕ್ಷುರಿ ಬ್ಯಾಗ್. ಇದರ ಬೆಲೆ 6 ಲಕ್ಷ ರೂಪಾಯಿ. ಪ್ರಚಾರ ರಾಯಭಾರಿ ಆಗಿರುವ ಕಾರಣ ಅನನ್ಯಾ ಪಾಂಡೆ ಅವರು ಈ ಬ್ಯಾಗ್ ಧರಿಸಿ ಓಡಾಡಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. ಇಂಥ ದೊಡ್ಡ ಕಂಪನಿಗೆ ಪ್ರಚಾರ ರಾಯಭಾರಿ ಆಗಿದ್ದಕ್ಕೆ ಅನನ್ಯಾ ಪಾಂಡೆ ಅವರು ಹೆಮ್ಮೆಯಿಂದ ಸಂಭ್ರಮಿಸುತ್ತಿದ್ದಾರೆ.
View this post on Instagram
ಇನ್ನೊಂದು ವಿಶೇಷ ಏನೆಂದರೆ, ‘ಶನೆಲ್’ ಕಂಪನಿಗೆ ಭಾರತದಿಂದ ಆಯ್ಕೆಯಾದ ಮೊದಲ ಪ್ರಚಾರ ರಾಯಭಾರಿ ಎಂಬ ಖ್ಯಾತಿ ಕೂಡ ಅನನ್ಯಾ ಪಾಂಡೆ ಅವರಿಗೆ ಸಲ್ಲುತ್ತದೆ. ಇದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇಂಥ ಅವಕಾಶ ಪಡೆದಿದ್ದಕ್ಕಾಗಿ ಅನನ್ಯಾ ಪಾಂಡೆ ಅವರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ಬಿಕಿನಿ ಧರಿಸಿ ಬೇಸಗೆಯಲ್ಲಿ ಇನ್ನಷ್ಟು ಬಿಸಿ ಏರಿಸುತ್ತಿರುವ ನಟಿ ಅನನ್ಯಾ ಪಾಂಡೆ
ಅನನ್ಯಾ ಪಾಂಡೆ ಅವರಿಗೆ ಈಗ 26 ವರ್ಷ ವಯಸ್ಸು. ಬಾಲಿವುಡ್ನಲ್ಲಿ ಅವರು ಹೆಸರು ಮಾಡಿದ್ದಾರೆ. ‘ಸ್ಟುಡೆಂಟ್ ಆಫ್ ದಿ ಇಯರ್ 2’, ‘ಪತಿ ಪತ್ನಿ ಔರ್ ವೋ’, ‘ಗೆಹರಾಯಿಯಾ’, ‘ಕೇಸರಿ: ಚಾಪ್ಟರ್ 2’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:30 pm, Wed, 16 April 25