AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೇಸರಿ 2’ ಅಡ್ವಾನ್ಸ್ ಬುಕಿಂಗ್, ಗೆಲುವಿನ ರುಚಿ ನೋಡಲಿದ್ದಾರಾ ಅಕ್ಷಯ್?

Akshay Kumar Kesari 2: ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ಒಂದರ ಹಿಂದೊಂದು ಸೋಲುಗಳನ್ನು ಕಾಣುತ್ತಿದ್ದಾರೆ. ಜನವರಿಯಲ್ಲಿ ಬಿಡುಗಡೆ ಆದ ಅವರ ನಟನೆಯ ‘ಸ್ಕೈ ಫೋರ್ಸ್’ ಹೀನಾಯ ಸೋಲು ಕಂಡಿತು. ಇದೀಗ ಅವರ ಮತ್ತೊಂದು ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ರಿಪೋರ್ಟ್ ಇಲ್ಲಿದೆ ನೋಡಿ...

‘ಕೇಸರಿ 2’ ಅಡ್ವಾನ್ಸ್ ಬುಕಿಂಗ್, ಗೆಲುವಿನ ರುಚಿ ನೋಡಲಿದ್ದಾರಾ ಅಕ್ಷಯ್?
Kesari 2
Follow us
ಮಂಜುನಾಥ ಸಿ.
|

Updated on: Apr 17, 2025 | 6:13 PM

ಬಾಲಿವುಡ್​ನ (Bollywood) ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ದುರಾದೃಷ್ಟ ಬೆನ್ನು ಬಿದ್ದಂತಿದೆ. ಸೂಪರ್ ಸ್ಟಾರ್ ಆಗಿದ್ದರೂ ಸಹ ಒಂದರ ಹಿಂದೊಂದು ಸಿನಿಮಾಗಳು ಸೋಲುತ್ತಲೇ ಇವೆ. ಎರಡು ತಿಂಗಳಿಗೊಂದು ಅಕ್ಷಯ್ ಕುಮಾರ್ ಸಿನಿಮಾ ಬಿಡುಗಡೆ ಆಗುತ್ತದೆ, ಬಿಡುಗಡೆ ಆದ ಮೂರು ನಾಲ್ಕು ದಿನಕ್ಕೆ ಚಿತ್ರಮಂದಿರದಿಂದ ಪರಾರಿ ಆಗುತ್ತದೆ. ಕಳೆದ ಕೆಲ ವರ್ಷಗಳಿಂದಲೂ ಇದೇ ರಿಪೀಟ್ ಆಗುತ್ತಿದೆ. ಕೆಲ ತಿಂಗಳ ಹಿಂದೆಯಷ್ಟೆ ಅವರ ನಟನೆಯ ‘ಸ್ಕೈ ಫೋರ್ಸ್’ ಸಿನಿಮಾ ಬಿಡುಗಡೆ ಆಗಿತ್ತು, ಸಿನಿಮಾ ಅಟ್ಟರ್ ಪ್ಲಾಫ್ ಆಯ್ತು. ಇದೀಗ ‘ಕೇಸರಿ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ಈ ಸಿನಿಮಾ ಅಕ್ಕಿಯನ್ನು ಮತ್ತೆ ಗೆಲುವಿನ ಹಾದಿಗೆ ಕರೆತರುವ ಸುಳಿವು ನೀಡಿದೆ.

‘ಕೇಸರಿ 2’ ಸಿನಿಮಾ ನಾಳೆ ಅಂದರೆ ಏಪ್ರಿಲ್ 18ರಂದು ಅಧಿಕೃತವಾಗಿ ಬಿಡುಗಡೆ ಕಾಣಲಿದೆ. ಕೆಲವೆಡೆ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿದ್ದು, ಸಿನಿಮಾ ಅನ್ನು ಜನ ಇಷ್ಟಪಟ್ಟಿದ್ದಾರೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲ ದಿನಗಳಾಗಿದ್ದು, ಕಳೆದ ಕೆಲ ದಿನಗಳಿಂದಲೂ ಮಂದವಾಗಿ ನಡೆದಿದ್ದ ಅಡ್ವಾನ್ಸ್ ಬುಕಿಂಗ್ ಕಳೆದ 24 ಗಂಟೆಯಲ್ಲಿ ಚುರುಕಾಗಿದ್ದು, 844% ಏರಿಕೆ ಕಂಡಿದೆ. ಆ ಮೂಲಕ ಮೊದಲ ದಿನದ ಕಲೆಕ್ಷನ್ ತುಸು ಚೆನ್ನಾಗಿಯೇ ಆಗುವ ಮುನ್ಸೂಚನೆ ನೀಡಿದೆ.

‘ಕೇಸರಿ 2’ ಸಿನಿಮಾದ ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ಬಹಳ ಕೆಟ್ಟದಾಗಿ ಇತ್ತು. ಮೊದಲ ದಿನ ಸುಮಾರು 3000 ಟಿಕೆಟ್​ಗಳಷ್ಟೆ ಮುಂಗಡವಾಗಿ ಬುಕ್ ಆಗಿದ್ದವು. ಮೊದಲ ದಿನದ ಟಿಕೆಟ್ ಬುಕಿಂಗ್ ಕಂಡು ಅಕ್ಷಯ್​ರ ಈ ಸಿನಿಮಾ ಸಹ ಫ್ಲಾಪ್ ಪಟ್ಟಿ ಸೇರಲಿದೆ ಎಂದಿದ್ದರು. ಆದರೆ ಸಿನಿಮಾದ ಬಗ್ಗೆ ಪ್ರಚಾರ ಹೆಚ್ಚು ಮಾಡಿದ ಪರಿಣಾಮ ಹಾಗೂ ಸ್ವತಃ ಪ್ರಧಾನಿ ಮೋದಿ ಅವರು ಸಿನಿಮಾದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ ಕಾರಣ ಸಿನಿಮಾದ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾಗಿದ್ದು, ಟಿಕೆಟ್ ಬುಕಿಂಗ್ ಸಹ ಹೆಚ್ಚಾಗಿದೆ.

ಇದನ್ನೂ ಓದಿ:ಅಕ್ಷಯ್ ಕುಮಾರ್​ಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು: ‘ಕೇಸರಿ 2’ ರಿಲೀಸ್​ಗೂ ಮೊದಲೇ ಫ್ಯಾನ್ಸ್ ಒತ್ತಾಯ

ಬಿಡುಗಡೆಗೆ ಒಂದು ದಿನ ಬಾಕಿ ಇರುವಂತೆ ‘ಕೇಸರಿ 2’ ಸಿನಿಮಾ ದೇಶದ ಪ್ರಮುಖ ಮಲ್ಟಿಪ್ಲೆಕ್ಸ್​ಗಳಲ್ಲಿ 30 ಸಾವಿರಕ್ಕೂ ಹೆಚ್ಚು ಟಿಕೆಟ್ ಅನ್ನು ಮುಂಗಡವಾಗಿ ಮಾರಾಟ ಮಾಡಿದೆ. ಇದು ಬಹಳ ದೊಡ್ಡ ಸಂಖ್ಯೆ ಅಲ್ಲದಿದ್ದರೂ ನಿರಾಶಾದಾಯಕ ಅಂತೂ ಅಲ್ಲ. ಈ ಮೂಲಕ ‘ಕೇಸರಿ 2’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಕನಿಷ್ಟ 2 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆ ಹುಟ್ಟಿಸಿದೆ. ಕಳೆದ ವಾರ ಬಿಡುಗಡೆ ಆದ ಸನ್ನಿ ಡಿಯೋಲ್​ರ ‘ಜಾಟ್’ ಸಿನಿಮಾ ಮೊದಲ ದಿನ ಆರು ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಆದರೆ ‘ಕೇಸರಿ 2’ ಸಿನಿಮಾ ಅಷ್ಟು ದೊಡ್ಡ ಕಲೆಕ್ಷನ್ ಮಾಡುವುದು ಅಸಾಧ್ಯ ಎನಿಸಿದೆ.

ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಚಿತ್ತೂರು ಶಂಕರ ನಾರಾಯಣ ಅವರ ಜೀವನ ಆಧರಿಸಿದ ಕತೆ ಹೊಂದಿದೆ ‘ಕೇಸರಿ 2’ ಸಿನಿಮಾ. ಈ ಸಿನಿಮಾನಲ್ಲಿ ಅಕ್ಷಯ್ ಕುಮಾರ್, ಚಿತ್ತೂರು ಶಂಕರ ನಾರಾಯಣ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಆರ್ ಮಾಧವನ್ ಮೆಕಿನ್ಲೆ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅನನ್ಯಾ ಪಾಂಡೆ, ರೆಜಿನಾ ಕೆಸಾಂಡ್ರಾ ಸಹ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಕರಣ್ ಸಿಂಗ್ ತ್ಯಾಗಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ