ಅಲ್ಲು ಅರ್ಜುನ್ ಚಿತ್ರಕ್ಕೆ ಬಾಲಿವುಡ್ನಿಂದ ಬರ್ತಿದ್ದಾರೆ ಮೂವರು ಬೆಡಗಿಯರು
ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನ ಮಾಡುತ್ತಿದ್ದು, ಪ್ರಿಯಾಂಕಾ ಚೋಪ್ರಾ, ಜಾನ್ವಿ ಕಪೂರ್, ಮತ್ತು ದಿಶಾ ಪಟಾಣಿ ಅವರು ನಾಯಕಿಯರಾಗಿ ಅಭಿನಯಿಸುವ ಸಾಧ್ಯತೆ ಇದೆ. ಅಲ್ಲು ಅರ್ಜುನ್ ತ್ರಿವಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2026ರಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಅಲ್ಲು ಅರ್ಜುನ್ ಅವರು ‘ಪುಷ್ಪ 2’ (Pushpa 2) ಯಶಸ್ಸಿನ ಬಳಿಕ ತಮ್ಮ ಮುಂದಿನ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ವಿಶೇಷ. ಅಟ್ಲಿ ಅವರು ‘ಜವಾನ್’ ಬಳಿಕ ಮಾಡುತ್ತಿರುವ ಸಿನಿಮಾ ಇದು. ಅಲ್ಲು ಅರ್ಜುನ್ ‘ಪುಷ್ಪ 2’ ಬಳಿಕ ಒಪ್ಪಿಕೊಂಡ ಸಿನಿಮಾ ಇದು. ಈಗ ಈ ಚಿತ್ರಕ್ಕೆ ಇಬ್ಬರು ಬಾಲಿವುಡ್ ಹೀರೋಯಿನ್ಗಳು ಬರುತ್ತಿದ್ದಾರೆ ಎಂಬ ಬಗ್ಗೆ ವರದಿ ಆಗಿದೆ.
ಯಾರೇ ಹೀರೋ ಸಿನಿಮಾ ಘೋಷಣೆ ಮಾಡಿದರೂ ಅದರಲ್ಲಿ ನಾಯಕಿ ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡುತ್ತದೆ. ಅಲ್ಲು ಅರ್ಜುನ್ ಚಿತ್ರಕ್ಕೂ ಯಾರು ನಾಯಕಿ ಆಗುತ್ತಾರೆ ಎಂಬ ಬಗ್ಗೆ ಪ್ರಶ್ನೆ ಮೂಡಿದೆ. ಅವರು ತಮ್ಮ ಕೊನೆಯ ಸಿನಿಮಾದಲ್ಲಿ ರಶ್ಮಿಕಾ ಜೊತೆ ನಟಿಸಿದ್ದರು. ಹೀಗಾಗಿ, ಈ ಬಾರಿ ಮತ್ತೆ ಅವರಿಗೆ ನಿರ್ಮಾಪಕರು ಮಣೆ ಹಾಕುತ್ತಿಲ್ಲ.
ಕೆಲವು ವರದಿಗಳ ಪ್ರಕಾರ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಂದರೆ, ಈ ಚಿತ್ರದಲ್ಲಿ ಅವರದ್ದು ತ್ರಿಬಲ್ ರೋಲ್ ಎಂದಾಯಿತು. ಈ ರೀತಿ ಅವರು ಮಾಡುತ್ತಿರುವುದು ಇದೇ ಮೊದಲು. ಈಗ ಈ ಚಿತ್ರಕ್ಕೆ ಮೂವರು ನಾಯಕಿಯರು ಎಂದು ಹೇಳಲಾಗುತ್ತಿದೆ.
ಪ್ರಿಯಾಂಕಾ ಚೋಪ್ರಾ ಅವರು ಈ ಚಿತ್ರಕ್ಕೆ ನಾಯಕಿ ಎಂದು ಈ ಮೊದಲು ಘೋಷಣೆ ಆಗಿತ್ತು. ಅದೇ ರೀತಿ ಈಗ ಜಾನ್ವಿ ಕಪೂರ್, ದಿಶಾ ಪಟಾಣಿ ಕೂಡ ಚಿತ್ರದ ಭಾಗವಾಗಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಟ್ಲಿ ಅವರು ಹಲವು ಸ್ಟಾರ್ ಹೀರೋಯಿನ್ಗಳ ಜೊತೆ ಕೆಲಸ ಮಾಡಿದ್ದಾರೆ. ಅವರ ಜೊತೆ ನಟಿಸಬೇಕು ಎಂದರೆ ಹೀರೋಯಿನ್ಗಳು ಹಿಂದೇಟು ಹಾಕುವುದಿಲ್ಲ. ಅವರು ಯೋಚಿಸದೇ ಒಪ್ಪಿಕೊಳ್ಳುತ್ತಾರೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ರೇಂಜ್ ಬದಲು, ಮುಂದಿನ ಸಿನಿಮಾ ಸಂಭಾವನೆ ಎಷ್ಟು ಗೊತ್ತೆ?
ಅಲ್ಲು ಅರ್ಜುನ್ ಬರ್ತ್ಡೇ ಪ್ರಯುಕ್ತ ಈ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಈ ಚಿತ್ರ 2026ರ ವೇಳೆಗೆ ತೆರೆಗೆ ಬರೋ ಸಾಧ್ಯತೆ ಇದೆ. ಶೀಘ್ರವೇ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.