‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ರೇಂಜ್ ಬದಲು, ಮುಂದಿನ ಸಿನಿಮಾ ಸಂಭಾವನೆ ಎಷ್ಟು ಗೊತ್ತೆ?
Allu Arjun: ನಟ ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾದ ಬಳಿಕ ಇಡೀ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ಅವರು ಪಡೆಯುವಷ್ಟು ಸಂಭಾವನೆಯನ್ನು ಪ್ರಭಾಸ್ ಸಹ ಪಡೆಯುತ್ತಿಲ್ಲ. ಇದೀಗ ಅವರು ಅಟ್ಲಿ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಈ ಸಿನಿಮಾಕ್ಕೂ ಸಹ ಭಾರಿ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಎಷ್ಟು ಗೊತ್ತೆ?

‘ಪುಷ್ಪ 2’ ಸಿನಿಮಾದ ಮೂಲಕ ಅಲ್ಲು ಅರ್ಜುನ್, ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾಕ್ಕಾಗಿ ಅವರು ಹಲವು ವರ್ಷಗಳನ್ನು ಮೀಸಲಿಟ್ಟಿದ್ದರು. ಹೀಗಾಗಿ ಈ ಸಿನಿಮಾಕ್ಕೆ ಭಾರಿ ದೊಡ್ಡ ಸಂಭಾವನೆಯನ್ನೇ ಅಲ್ಲು ಅರ್ಜುನ್ ಪಡೆದಿದ್ದರು. ಕೆಲ ಮೂಲಗಳ ಪ್ರಕಾರ ಸಿನಿಮಾದ ಒಟ್ಟು ಕಲೆಕ್ಷನ್ನಲ್ಲಿ 35-40% ಭಾಗವನ್ನು ಅಲ್ಲು ಅರ್ಜುನ್ ತಮ್ಮ ಸಂಭಾವನೆಯಾಗಿ ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ಅಲ್ಲು ಅರ್ಜುನ್ ತಮ್ಮ ಹೊಸ ಸಿನಿಮಾಕ್ಕೂ ಸಹ ಭಾರಿ ದೊಡ್ಡ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.
‘ಪುಷ್ಪ 2’ ಸಿನಿಮಾ ಅಲ್ಲು ಅರ್ಜುನ್ ಪಾಲಿಗೆ ವಿಶೇಷ ಸಿನಿಮಾ ಆಗಿತ್ತು. ಈ ಸಿನಿಮಾಕ್ಕಾಗಿ ಬಹಳ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದರು ಹೆಚ್ಚಿನ ಶ್ರಮ ಹಾಕಿದ್ದರು ಹಾಗಾಗಿ ಆ ಸಿನಿಮಾಕ್ಕೆ ಹೆಚ್ಚಿನ ಸಂಭಾವನೆ ಪಡೆದಿದ್ದರು. ಆದರೆ ತಮ್ಮ ಮುಂದಿನ ಸಿನಿಮಾಕ್ಕೂ ಅದೇ ಮಾದರಿಯಲ್ಲಿ ಭಾರಿ ದೊಡ್ಡ ಸಂಭಾವನೆಯನ್ನು ಮುಂದುವರೆಸಿದ್ದಾರೆ. ಅಲ್ಲು ಅರ್ಜುನ್ ಇದೀಗ ತ್ರಿವಿಕ್ರಮ್ ಶ್ರೀನಿವಾಸ್ ಆ ನಂತರ ಅಟ್ಲಿ ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ. ಇದೀಗ ಅಲ್ಲು ಅರ್ಜುನ್, ಅಟ್ಲೀ ಜೊತೆಗೆ ನಟಿಸಲಿರುವ ಸಿನಿಮಾಕ್ಕೆ ಪಡೆಯಲಿರುವ ಸಂಭಾವನೆ ಸಖತ್ ಸದ್ದಾಗುತ್ತಿದೆ.
ಅಟ್ಲಿ ಜೊತೆಗಿನ ಸಿನಿಮಾಕ್ಕೆ ಅಲ್ಲು ಅರ್ಜುನ್ ಬರೋಬ್ಬರಿ 175 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯಲಿದ್ದಾರೆ. ಈ ಸಿನಿಮಾವನ್ನು ಸನ್ ಪಿಕ್ಚರ್ಸ್ನವರು ನಿರ್ಮಾಣ ಮಾಡುತ್ತಿದ್ದು, ದಕ್ಷಿಣ ಭಾರತದ ಇನ್ಯಾವ ನಟರೂ ಸಹ ಇಷ್ಟು ದೊಡ್ಡ ಸಂಭಾವನೆಯನ್ನು ಪಡೆದಿಲ್ಲ ಎನ್ನಲಾಗುತ್ತಿದೆ. ಪ್ರಭಾಸ್ ಗಿಂತಲೂ ಹೆಚ್ಚಿನ ಸಂಭಾವನೆಯನ್ನು ನಟ ಅಲ್ಲು ಅರ್ಜುನ್ ಈ ಸಿನಿಮಾಕ್ಕಾಗಿ ಪಡೆಯುತ್ತಿದ್ದಾರೆ. ಆದರೆ ತ್ರಿವಿಕ್ರಮ್ ಜೊತೆಗೆ ಮಾಡುತ್ತಿರುವ ಸಿನಿಮಾಕ್ಕೆ ಇಷ್ಟು ದೊಡ್ಡ ಸಂಭಾವನೆಯನ್ನು ಅವರು ಪಡೆಯುತ್ತಿಲ್ಲ, ಅದಕ್ಕೆ ಅವರು ಸುಮಾರು 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಷ್ಟೆ.
ಇದನ್ನೂ ಓದಿ:ಬಾಲಿವುಡ್ ನಟರಿಗೂ ಅಲ್ಲು ಅರ್ಜುನ್ಗೂ ಏನು ವ್ಯತ್ಯಾಸ? ತಿಳಿಸಿದ ಗಣೇಶ್ ಆಚಾರ್ಯ
ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಿನಿಮಾದ ಕೆಲಸ ಪ್ರಾರಂಭ ಆಗಲಿದೆ. ಈ ಸಿನಿಮಾ ಭವಿಷ್ಯ ಮತ್ತು ವರ್ತಮಾನ ಕಾಲದ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ರಾಜಕೀಯ ಥ್ರಿಲ್ಲರ್ ಮತ್ತು ಕೌಟುಂಬಿಕ ಭಾವುಕ ಸನ್ನಿವೇಶಗಳು ಇರಲಿದೆಯಂತೆ. ‘ಪುಷ್ಪ 2’ ಸಿನಿಮಾ ಮೂಲಕ ಭಾರಿ ದೊಡ್ಡ ಹಿಟ್ ನೀಡಿರುವ ಅಲ್ಲು ಅರ್ಜುನ್ ಅದೇ ಯಶಸ್ಸನ್ನು ಕಾಯ್ದುಕೊಂಡು ಹೋಗುವ ಉಮೇದಿನಲ್ಲಿದ್ದು, ಅದಕ್ಕಾಗಿಯೇ ಕೇವಲ ದೊಡ್ಡ ಬಜೆಟ್ನ ಸಿನಿಮಾಗಳನ್ನು ಮಾತ್ರವೇ ಒಪ್ಪಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ