ಅಂತಿಮ ಹಂತದಲ್ಲಿ ದೀಪಿಕಾ-ರಣವೀರ್ ಮನೆ: ಹೇಗಿದೆ ನೋಡಿ 100 ಕೋಟಿ ರೂ ಅಪಾರ್ಟ್ಮೆಂಟ್
Ranveer Singh-Deepika Padukone: ಬಾಲಿವುಡ್ನ ಸೆಲೆಬ್ರಿಟಿ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಕಳೆದ ವರ್ಷವಷ್ಟೆ ಪೋಷಕರಾಗಿದ್ದಾರೆ. ಅವರು ಸ್ವಂತದ ಮನೆ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅವರ ನೂರು ಕೋಟಿಯ ಮನೆ ಪೂರ್ಣಗೊಳ್ಳಲಿದೆ. ಇಲ್ಲಿದೆ ಅದರ ಕುರಿತ ಮಾಹಿತಿ...

ದೀಪಿಕಾ ಪಡುಕೋಣೆ (Deepika Padukone) ಅವರು ಸದ್ಯ ಮಾತೃತ್ವವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಳೆದ ವರ್ಷ ಅವರಿಗೆ ಮಗು ಜನಿಸಿದೆ. ಇದರಿಂದ ದೀಪಿಕಾ ಹಾಗೂ ಅವರ ಪತಿ ರಣವೀರ್ ಸಿಂಗ್ ಇಬ್ಬರೂ ಖುಷಿ ಆಗಿದ್ದಾರೆ. ಮಗಳಿಗೆ ದುವಾ ಎಂದು ಹೆಸರು ಇಡಲಾಗಿದೆ ಎಂಬುದು ಗೊತ್ತೇ ಇದೆ. ಈ ದಂಪತಿ ಶೀಘ್ರವೇ ಹೊಸ ಮನೆಗೆ ಶಿಫ್ಟ್ ಆಗಲಿದೆ. ಈ ಮನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮುಂಬೈನ ದುಬಾರಿ ಏರಿಯಾ ಎನಿಸಿಕೊಂಡಿರೋ ಬಾಂದ್ರಾ ಬ್ಯಾಂಡ್ಸ್ಟ್ಯಾಂಡ್ ಬಳಿ ಈ ಮನೆ ಇದೆ ಎಂಬುದು ವಿಶೇಷ.
ರಣವೀರ್ ಸಿಂಗ್ ಹಾಗೂ ದೀಪಿಕಾ ಅವರ ಹೊಸ ಅಪಾರ್ಟ್ಮೆಂಟ್ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಮನೆ ಸಮೀಪವೇ ಈ ಅಪಾರ್ಟ್ಮೆಂಟ್ ಇದೆ. ಶಾರುಖ್ ಖಾನ್ ಅವರು ಮನ್ನತ್ನಲ್ಲಿ, ಸಲ್ಮಾನ್ ಖಾನ್ ಅವರು ಗ್ಯಾಲಾಕ್ಸಿ ಅಪಾರ್ಟ್ಮೆಂಟ್ನಲ್ಲಿ ಇದ್ದಾರೆ. ಸದ್ಯ ಶಾರುಖ್ ಖಾನ್ ಅವರ ‘ಮನ್ನತ್’ ನಿವಾಸದ ಕೆಲಸಗಳು ನಡೆಯುತ್ತಿವೆ. ಹೀಗಾಗಿ, ಶಾರುಖ್ ಖಾನ್ ಅವರು ಬೇರೆ ಕಡೆಯಲ್ಲಿ ವಾಸವಾಗಿದ್ದಾರೆ.
ಹೊಸ ಅಪಾರ್ಟ್ಮೆಂಟ್ನಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ನಿವಾಸ 16ರಿಂದ 19ನೇ ಅಂತಸ್ತಿನವರೆಗೆ ಇದೆ. ಒಟ್ಟು ಅಳತೆ 11,222 ಚದರ ಅಡಿ ಇದೆ. 1,300 ಚದರ ಅಡಿ ಟೆರೇಸ್ ಭಾಗ ಕೂಡ ಇದೆ. ಈ ಅಪಾರ್ಟ್ಮೆಂಟ್ನಿಂದ ಅರಬ್ಬೀ ಸಮುದ್ರ ಕಾಡಣುತ್ತದೆ. 2021ರಲ್ಲಿ ದೀಪಿಕಾ ಹಾಗೂ ರಣವೀರ್ ಅವರು 22 ಕೋಟಿ ರೂಪಾಯಿ ಬೆಲೆಯ ಅಪಾರ್ಟ್ಮೆಂಟ್ನ ಅಲಿಭಾಗ್ನಲ್ಲಿ ಖರೀದಿ ಮಾಡಿದ್ದರು.
ಇದನ್ನೂ ಓದಿ:ಬೆಂಗಳೂರು ಅಥವಾ ಬಾಂಬೆ? ಆಯ್ಕೆ ಕಷ್ಟ ಎಂದ ದೀಪಿಕಾ ಪಡುಕೋಣೆ
ರಣವೀರ್ ಹಾಗೂ ದೀಪಿಕಾ ಅಪಾರ್ಟ್ಮೆಂಟ್ ವಿಡಿಯೋ ವೈರಲ್ ಆಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಶೀಘ್ರವೇ ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಮಗುವಿನ ಜೊತೆ ರಣವೀರ್ ಹಾಗೂ ದೀಪಿಕಾ ಇಲ್ಲಿಗೆ ಶಿಫ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಣವೀರ್ ಸಿಂಗ್ ಅವರು ‘ಡಾನ್ 3’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ದೀಪಿಕಾ ಪಡುಕೋಣೆ ಅವರು ಬ್ರೇಕ್ನಲ್ಲಿ ಇದ್ದು ಶೀಘ್ರವೇ ನಟನೆಗೆ ಮರಳಲಿದ್ದಾರೆ. ಅವರ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಶೂಟಿಂಗ್ನಲ್ಲಿ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ