ಬಳ್ಳಾರಿ: ಮಹಾಮಾರಿ ಕೊರೊನಾ ವಕ್ಕರಿಸಿರುವ ಸಂದರ್ಭದಲ್ಲೂ ವಿಮ್ಸ್ ಆಸ್ಪತ್ರೆ ಮಹಾ ಯಡವಟ್ಟು ಮಾಡಿಕೊಂಡಿದೆ. ಶವಾಗಾರದ ಕೋಲ್ಡ್ ಸ್ಟೋರೇಜ್ ಕೆಟ್ಟಿರುವ ಪರಿಣಾಮ ದೊಡ್ಡ ಅವಾಂತರವಾಗಿದೆ. ವಿಮ್ಸ್ ಶವಗಾರದಲ್ಲಿ ಶವಗಳನ್ನು ಹೊರಗೆ ಇಡೋ ದುಸ್ತಿತಿಗೆ ಬಂದಿದೆ. ಇದು ವಿಮ್ಸ್ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.
ಕೊರೋನಾ ಪರೀಕ್ಷೆ ಮಾಡಬೇಕಾದ ಶವಗಳನ್ನು ಕನಿಷ್ಠ ಒಂದರಿಂದ ಎರಡು ದಿನ ಕಾಯ್ದಿರಿಸಿ ಇಡಬೇಕು. ಅವುಗಳನ್ನ ಸೂಕ್ತ ಭದ್ರತೆಯಲ್ಲಿಡೋದು ನಿಯಮ. ವಿಮ್ಸ್ನಲ್ಲಿ ಎಂಟು ಶವಗಳನ್ನ ಇಡೋ ರೆಪ್ರಿಜರೇಟರ್ಗಳೂ ಕೆಟ್ಟಿವೆ. ಈಗಾಗಲೇ ಒಂದು ಕೆಟ್ಟಿದ್ದು, ಇದೀಗ ಮತ್ತೊಂದು ಕೂಡ ಕೆಟ್ಟಿದೆ. ಹಾಗಾಗಿ ಶವಗಳನ್ನು ಹೊರಗೆ ಇಡುವ ಪರಿಸ್ಥಿತಿ ಬಂದಿದೆ. ಸದ್ಯ ಶವಗಳನ್ನು ಹೊರಗೆ ಇಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.