Kannada News » Latest news » Mother and child killed after moped collides with tipper in mandya
ಮೊಪೆಡ್ಗೆ ಟಿಪ್ಪರ್ ಡಿಕ್ಕಿ: ತಾಯಿ-ಮಗು ಸ್ಥಳದಲ್ಲೇ ಸಾವು, ಪತಿಗೆ ಗಂಭೀರ ಗಾಯ
ಮಂಡ್ಯ: TVS ಮೊಪೆಡ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ಸ್ಥಳದಲ್ಲೇ ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹೊಳಲು ಗ್ರಾಮದ ಬಳಿ ನಡೆದಿದೆ. ಶಶಿಕಲಾ(35) ಹಾಗೂ ಆಕೆಯ 10 ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮೊಪೆಡ್ ಚಲಾಯಿಸುತ್ತಿದ್ದ ಶಶಿಕಲಾ ಪತಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ತಮ್ಮ ಮಗುವಿನೊಂದಿಗೆ ಪಶು ಆಹಾರ ಕೊಂಡೊಯ್ಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಮಂಡ್ಯ: TVS ಮೊಪೆಡ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ಸ್ಥಳದಲ್ಲೇ ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹೊಳಲು ಗ್ರಾಮದ ಬಳಿ ನಡೆದಿದೆ. ಶಶಿಕಲಾ(35) ಹಾಗೂ ಆಕೆಯ 10 ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಮೊಪೆಡ್ ಚಲಾಯಿಸುತ್ತಿದ್ದ ಶಶಿಕಲಾ ಪತಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ತಮ್ಮ ಮಗುವಿನೊಂದಿಗೆ ಪಶು ಆಹಾರ ಕೊಂಡೊಯ್ಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ.