ಕುಟುಂಬ ಕಲಹ: ಮನನೊಂದ ತಾಯಿ-ಮಗಳು ನಾಲೆಗೆ ಜಿಗಿದು ಆತ್ಮಹತ್ಯೆ
ಅಮೃತಿ ಗ್ರಾಮದ ನಾಲೆ ಬಳಿ ಮೃತದೇಹಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಮನನೊಂದು ನಾಲೆಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.
ಮಂಡ್ಯ: ನಾಪತ್ತೆಯಾಗಿದ್ದ ತಾಯಿ, ಮಗಳು ನಾಲೆಯಲ್ಲಿ ಶವವಾಗಿ ಪತ್ತೆಯಾದ ಘಟನೆಯಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮ ಗಂಗವಾಡಿ ಬಳಿ ನಡೆದಿದೆ.
ಅಮೃತಿ ಗ್ರಾಮದ ಸಲೀಮಾ (36) ಮತ್ತು ಆಕೆಯ ಮಗಳು ಶಬಾನಾ (17) ಮೃತರು. ಡಿ.14ರಂದು ತಾಯಿ–ಮಗಳು ಕಾಣೆಯಾಗಿರುವುದಾಗಿ ಸಲೀಮಾ ಪತಿ ಖಾದರ್ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಮೃತಿ ಗ್ರಾಮದ ನಾಲೆ ಬಳಿ ಮೃತದೇಹಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಮನನೊಂದು ನಾಲೆಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಈ ಪ್ರಕರಣ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಕೌಟುಂಬಿಕ ಕಲಹ: ಇಬ್ಬರು ಹೆಣ್ಣುಮಕ್ಕಳ ಜೊತೆ ನಾಲೆಗೆ ಹಾರಿ ತಾಯಿ ಆತ್ಮಹತ್ಯೆ