ಸಂಸದೆ ಶೋಭಾ ಕೊಟ್ಟ ದೀಪಾವಳಿ ಗಿಫ್ಟ್​ಗೆ ದಿಲ್ಲಿ ಮಹಿಳಾಮಣಿಗಳು ಫುಲ್​ ಫಿದಾ, ಏನದು?

ಉಡುಪಿ: ದೀಪಾವಳಿ ಪ್ರಯುಕ್ತ ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ಗಿಫ್ಟ್​ಗೆ ಎಲ್ಲಾ ಪಕ್ಷಗಳ ರಾಷ್ಟ್ರಮಟ್ಟದ ಮಹಿಳಾ ರಾಜಕೀಯ ನಾಯಕಿರು ಫುಲ್​ ಫಿದಾ ಆಗಿದ್ದಾರೆ. ಹೌದು, ಸಂಸದೆ ನೀಡಿರುವ ಭರ್ಜರಿ ದೀಪಾವಳಿ ಉಡುಗೊರೆ ಯಾವುದು ಗೊತ್ತಾ? ಸ್ಪೆಷಲ್​ ಉಡುಪಿ ಸೀರೆ. ಹೌದು, ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರಿಗೆ ಸ್ಪೆಷಲ್​ ಉಡುಪಿ ಸೀರೆ ಗಿಫ್ಟ್ ಮಾಡಿದ್ದಾರೆ. ದೀಪಾವಳಿ ಪ್ರಯುಕ್ತ ಅಪ್ಪಟ ಕೈಮಗ್ಗದಿಂದ ನೇಯ್ದ ಉಡುಪಿ ಸೀರೆಯನ್ನು ಗಿಫ್ಟ್ ನೀಡಿದ್ದಾರೆ. ಸಂಸದೆ ಉಡುಗೊರೆಯಾಗಿ […]

ಸಂಸದೆ ಶೋಭಾ ಕೊಟ್ಟ ದೀಪಾವಳಿ ಗಿಫ್ಟ್​ಗೆ ದಿಲ್ಲಿ ಮಹಿಳಾಮಣಿಗಳು ಫುಲ್​ ಫಿದಾ, ಏನದು?
Edited By:

Updated on: Nov 18, 2020 | 5:02 PM

ಉಡುಪಿ: ದೀಪಾವಳಿ ಪ್ರಯುಕ್ತ ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ಗಿಫ್ಟ್​ಗೆ ಎಲ್ಲಾ ಪಕ್ಷಗಳ ರಾಷ್ಟ್ರಮಟ್ಟದ ಮಹಿಳಾ ರಾಜಕೀಯ ನಾಯಕಿರು ಫುಲ್​ ಫಿದಾ ಆಗಿದ್ದಾರೆ. ಹೌದು, ಸಂಸದೆ ನೀಡಿರುವ ಭರ್ಜರಿ ದೀಪಾವಳಿ ಉಡುಗೊರೆ ಯಾವುದು ಗೊತ್ತಾ? ಸ್ಪೆಷಲ್​ ಉಡುಪಿ ಸೀರೆ.

ಹೌದು, ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರಿಗೆ ಸ್ಪೆಷಲ್​ ಉಡುಪಿ ಸೀರೆ ಗಿಫ್ಟ್ ಮಾಡಿದ್ದಾರೆ. ದೀಪಾವಳಿ ಪ್ರಯುಕ್ತ ಅಪ್ಪಟ ಕೈಮಗ್ಗದಿಂದ ನೇಯ್ದ ಉಡುಪಿ ಸೀರೆಯನ್ನು ಗಿಫ್ಟ್ ನೀಡಿದ್ದಾರೆ. ಸಂಸದೆ ಉಡುಗೊರೆಯಾಗಿ ಕೊಟ್ಟಿರುವ ಸೀರೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್​ ಆಗ್ತಿದೆ.

ಸಚಿವೆ ಸ್ಮೃತಿ ಇರಾನಿ, ಮೇನಕಾ ಗಾಂಧಿ, ಕನಿಮೋಳಿ, ಶೆಫಾಲಿ ವೈದ್ಯ, ಮೀನಾಕ್ಷಿ ಲೇಖಿ ಹಾಗೂ ದೇಬಶ್ರೀಗೆ ಈ ಸ್ಪೆಷಲ್​ ಗಿಫ್ಟ್​ ಉಡುಗೊರೆ ತಲುಪಿದ್ದು ಇದೇ ‘ಉಡುಪಿ ಸೀರೆ’ ಬಗ್ಗೆ ಈಗ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಸಂಸದೆಯ ಕಾರಣ ಇದೀಗ ಉಡುಪಿ ಕೈಮಗ್ಗದ ಸೀರೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಗಿಫ್ಟ್ ಪಡೆದ ಹಲವು ನಾಯಕಿಯರು ಈ ಬಗ್ಗೆ ತಮ್ಮ ಟ್ವೀಟ್ಟರ್​ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಸೀರೆಯನ್ನು ಉಟ್ಟು, ಫೋಟೋ ಕ್ಲಿಕ್ಕಿಸಿ ಅದನ್ನು ಸಹ ಪೋಸ್ಟ್​ ಮಾಡಿದ್ದಾರೆ. ಜೊತೆಗೆ, ಸಂಸದೆ ಶೋಭಾಗೆ ಥ್ಯಾಂಕ್ಸ್ ಸಹ ಹೇಳಿದ್ದಾರೆ. ಇವರ ಧನ್ಯವಾದಗಳಿಗೆಗೆ ಸ್ಪಂದಿಸಿರುವ ಸಂಸದೆ ಉಡುಪಿ ಶ್ರೀಕೃಷ್ಣನಿಗೂ ಇದೇ ಕೈಮಗ್ಗದ ಸೀರೆಯನ್ನು ತೊಡಿಸುತ್ತಾರೆ ಎಂದು ರೀಟ್ವೀಟ್ ಮಾಡಿದ್ದಾರೆ. ಜೊತೆಗೆ, ಎಲ್ಲರೂ ಕೈಮಗ್ಗ ಬಳಸೋಣ, ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡೋಣ ಎಂದು ಸಹ ಹೇಳಿದ್ದಾರೆ.