ಮುದ್ದಿನ ಮಗಳೇ ಪ್ರಪಂಚ ಅಂದ್ಕೊಂಡಿದ್ದ ಧೋನಿಗೆ ಆತಂಕ, ಧೋನಿ ಮಗಳಿಗೆ ಅತ್ಯಾಚಾರದ ಬೆದರಿಕೆ!
ನಮ್ಮದು ಕ್ರಿಕೆಟ್ ಧರ್ಮರಾಷ್ಟ್ರ ನಿಜ. ಆದ್ರೆ ಈ ಕ್ರಿಕೆಟ್ ಧರ್ಮರಾಷ್ಟ್ರದಲ್ಲಿ ರಾಕ್ಷಸ ಪ್ರವೃತ್ತಿಯ ಕಿರಾತಕರು ಇದ್ದಾರೆ. ಅಭಿಮಾನದ ಎಲ್ಲೆ ಮೀರೋ ಅಂದಾಭಿಮಾನದ ದುರುಳರು, ಹೇಯ ಕೃತ್ಯವೇಸಗೋದಕ್ಕೂ ಹೇಸೋದಿಲ್ಲ. ಇದೀಗ ಧೋನಿ ವಿಚಾರದಲ್ಲಿ ಅಂತಹದ್ದೊಂದು ಕೆಟ್ಟ ಮನಸ್ಥಿತಿಯ ವಿಕೃತ ಕ್ರಿಮಿಗಳು ಅಟ್ಟಹಾಸ ಮೆರೆದಿದ್ದಾರೆ. ಧೋನಿ ಮಗಳಿಗೆ ಬೆದರಿಕೆ ಹಾಕಿದ ಕಿರಾತಕರು! ಮರಳುಗಾಡಿನ ಮಹಾಯುದ್ಧದಲ್ಲಿ ಚೆನ್ನೈ ತಂಡ ಮೇಲಿಂದ ಮೇಲೆ ಸೋಲ್ತಿದೆ. ಕಳೆದ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲೂ ಚೆನ್ನೈ 10 ರನ್ಗಳ ಅಂತರದಲ್ಲಿ ಸೋತಿತ್ತು. ಚೆನ್ನೈ ಸೋಲಿಗೆ ಧೋನಿ ಮತ್ತು […]

ನಮ್ಮದು ಕ್ರಿಕೆಟ್ ಧರ್ಮರಾಷ್ಟ್ರ ನಿಜ. ಆದ್ರೆ ಈ ಕ್ರಿಕೆಟ್ ಧರ್ಮರಾಷ್ಟ್ರದಲ್ಲಿ ರಾಕ್ಷಸ ಪ್ರವೃತ್ತಿಯ ಕಿರಾತಕರು ಇದ್ದಾರೆ. ಅಭಿಮಾನದ ಎಲ್ಲೆ ಮೀರೋ ಅಂದಾಭಿಮಾನದ ದುರುಳರು, ಹೇಯ ಕೃತ್ಯವೇಸಗೋದಕ್ಕೂ ಹೇಸೋದಿಲ್ಲ. ಇದೀಗ ಧೋನಿ ವಿಚಾರದಲ್ಲಿ ಅಂತಹದ್ದೊಂದು ಕೆಟ್ಟ ಮನಸ್ಥಿತಿಯ ವಿಕೃತ ಕ್ರಿಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಧೋನಿ ಮಗಳಿಗೆ ಬೆದರಿಕೆ ಹಾಕಿದ ಕಿರಾತಕರು! ಮರಳುಗಾಡಿನ ಮಹಾಯುದ್ಧದಲ್ಲಿ ಚೆನ್ನೈ ತಂಡ ಮೇಲಿಂದ ಮೇಲೆ ಸೋಲ್ತಿದೆ. ಕಳೆದ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲೂ ಚೆನ್ನೈ 10 ರನ್ಗಳ ಅಂತರದಲ್ಲಿ ಸೋತಿತ್ತು. ಚೆನ್ನೈ ಸೋಲಿಗೆ ಧೋನಿ ಮತ್ತು ಕೇದರ್ ಜಾಧವ್ ಕಾರಣ ಅಂತಾ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಇಷ್ಟೆ ಆಗಿದ್ರೆ ಕಾಮನ್ ಅನ್ಬಹುದಿತ್ತು. ಆದ್ರೆ ವಿಕೃತ ಮನಸ್ಸಿನ ಕ್ರಿಮಿಗಳು, ಧೋನಿಯ ಐದು ವರ್ಷದ ಮುದ್ದಿನ ಮಗಳು ಜೀವಾಗೆ ಬೆದರಿಕೆ ಹಾಕಿದ್ದಾರೆ.
ಧೋನಿ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿದ ದುರುಳರು!
ಇಷ್ಟು ದಿನ ಕಳಪೆ ಪ್ರದರ್ಶನಕ್ಕೆ ಆಟಗಾರರನ್ನ ಟಾರ್ಗೆಟ್ ಮಾಡ್ತಿದ್ರು. ಆದ್ರೀಗ ಕೆಲ ದುರುಳರು ಆಟಗಾರರ ಕುಟುಂಬವನ್ನ ಟಾರ್ಗೆಟ್ ಮಾಡೋದಕ್ಕೆ ಶುರುಮಾಡಿದ್ದಾರೆ. ಧೋನಿ ಚೆನ್ನಾಗಿ ಆಡಿಲ್ಲವೆಂದು, ಧೋನಿ ಮಗಳು ಜೀವಾಳನ್ನ ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.
ಮಿಸ್ಟರ್ ವಿಜಯ್ ಎಂಬ ಈ ನೀಚ ಮನಸ್ಸಿನ ಕ್ರಿಮಿ, ಧೋನಿ ಮಗಳು ಜೀವಳನ್ನು ರೇಪ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಧೋನಿ ಮಗಳಿಗೆ ಬೆದರಿಕೆಯೊಡ್ಡಿರುವ ಸ್ಕ್ರೀನ್ ಶಾಟ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಕೇವಲ ಅತ್ಯಾಚಾರ ಮಾಡ್ತೀನಿ ಅನ್ನೋದಷ್ಟೇ ಅಲ್ಲ.. ಕೆಲ ಕ್ರಿಮಿಗಳು ಜೀವಾ ಹೆಸರನ್ನ ಬಳಸಿ ಅಶ್ಲೀಲ ಕಮೆಂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆದಿದ್ದಾರೆ. ಜೀವಾಳಿಗೆ ಬೆದರಿಕೆ ಹಾಕಿರೋ ಕಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ನಿಜವಾದ ಕ್ರಿಕೆಟ್ ಪ್ರೇಮಿಗಳು ಇದನ್ನ ನೋಡಿ ಬೆಚ್ಚಿ ಬಿದ್ದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತೀರೋ ಕ್ರಿಮಿಗಳ ನೀಚ ನಡೆಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಹಲವರು ಇದನ್ನ ವಿಕೃತ ಮನಸ್ಸಿನ ಕೀಚಕರು ಅಂತಾ ನಿಂದಿಸಿದ್ರೆ, ಇನ್ನು ಕೆಲವರು ಇದು ಅಂಧಾಭಿಮಾನದ ಅತಿರೇಕವೆಂದು ಕಿಡಿ ಕಾರುತ್ತಿದ್ದಾರೆ.
ಭಾರತೀಯನಾಗಿ ಬೇಸರವಾಗಿದೆ ‘‘ಧೋನಿ ಚೆನ್ನಾಗಿ ಆಡಿಲ್ಲವೆಂದು ಅವರ ಮಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದು ಭಾರತ. ಒಬ್ಬ ಭಾರತೀಯನಾಗಿ ನಿಜಕ್ಕೂ ನನಗೆ ಬೇಸರವಾಗಿದೆ.’’ -ಆರ್ಯನ್ ಶ್ರೀವಾತ್ಸವ್, ಕ್ರಿಕೆಟ್ ಅಭಿಮಾನಿ ಜೀವಾಳಿಂದ ಏನು ತಪ್ಪಾಗಿದೆ? ‘‘ ಚೆನ್ನೈ ತಂಡದ ಸೋಲಿಗೆ ಜೀವಾಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಅವಳಿಂದ ಏನು ತಪ್ಪಾಗಿದೆ?’’ -ಸಾಹಸ್, ಕ್ರಿಕೆಟ್ ಅಭಿಮಾನಿ ನೀಚ ಮನಸ್ಥಿತಿರ ದುರುಳರು ‘‘ ನೀವು ಕಳಪೆ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನ ಟೀಕಿಸಿ. ಆದ್ರೆ ಅದಕ್ಕೆ ಸಂಬಂಧಿಸದ ವ್ಯಕ್ತಿಗಳನ್ನ ಟೀಕಿಸುತ್ತೀರಿ ಅಂದ್ರೆ, ಅವರೆಲ್ಲ ನೀಚ ಮನಸ್ಥಿತಿಯವರು.’’ -ವರುಣ್, ಕ್ರಿಕೆಟ್ ಅಭಿಮಾನಿ
ಮಗಳೇ ಪ್ರಪಂಚ ಅಂದ್ಕೊಂಡಿರೋ ಧೋನಿಗೆ.. ಅದೆಷ್ಟು ನೋವು! ನಿಜ.. ಮಹೇಂದ್ರ ಸಿಂಗ್ ಧೋನಿಗೆ ಮುದ್ದಿನ ಮಗಳು ಜೀವಾ ಅಂದ್ರೆ ಪಂಚ ಪ್ರಾಣ. ಅವಳ ನಗುವಲ್ಲೇ ಸರ್ವ ಸುಖವನ್ನು ಅನುಭವಿಸೋ ಮಾಹಿಗೆ, ಜೀವಾಕ್ಕಿಂತ ದೊಡ್ಡ ಪ್ರಪಂಚ ಮತ್ತೊಂದಿಲ್ಲ. ಧೋನಿ ದಿಗ್ಗಜ ಕ್ರಿಕೆಟಿಗನಾದ್ರೂ, ಮಗಳಿಗೆ ಅಪ್ಪನೇ ಅಲ್ವೇ.. ಇಂತ ವಿಕೃತ ಮನಸ್ಥಿತಿಯ ಕ್ರಿಮಿಗಳ ಬೆದರಿಕೆ, ಧೋನಿ ಮನಸ್ಸಿಗೆ ಅದೆಷ್ಟು ನೋವು ನೀಡಿರಬೇಡ.
ಒಮ್ಮೊಮ್ಮೆ ಅತಿರೇಕದ ಅಭಿಮಾನ.. ಕಳಪೆ ಪ್ರದರ್ಶನ ನೀಡಿದ ಕ್ರಿಕೆಟಿಗರ ಮನೆ ಮೇಲೆ ಕಲ್ಲೆಸೆಯೋದಕ್ಕೂ ಕಾರಣವಾಗುತ್ತೆ. ಆದ್ರೆ ಇದು ಅತಿರೇಕದ ಅಭಿಮಾನವಲ್ಲ.. ಇವರೆಲ್ಲ ಸಮಾಜಘಾತುಕ ವಿಕೃತ ಕ್ರಿಮಿಗಳು. ಇಂಥಾ ಕ್ರಿಮಿಗಳ ಅಟ್ಟಹಾಸವನ್ನ ಹೆಡೆಮುರಿ ಕಟ್ಟಲೇಬೇಕು. ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಅನುಷ್ಕಾಳನ್ನು ರೇಗಿಸ್ತಾರೆ. ಧೋನಿ ಆಡಿಲ್ಲ ಅಂದ್ರೆ, ಅವರ ಮಗಳಿಗೆ ಬೆದರಿಗೆ ಹಾಕ್ತಾರೆ. ಒಬ್ಬ ದಿಗ್ಗಜನ ಮಗಳ ವಿಚಾರದಲ್ಲೇ ಇಂಥಹದ್ದೊಂದು ಹೇಯ ಕೃತ್ಯದ ಆಲೋಚನೆ ಮಾಡ್ತಾರೆ ಅಂದ್ರೆ, ಈ ದೇಶದ ಸಾಮಾನ್ಯ ಪ್ರಜೆಯ ಮಗಳ ಗತಿ ಏನು?





