‘ಇವತ್ತು ದೇವಸ್ಥಾನಕ್ಕೂ ಹೋಗಿಲ್ಲ, ಪೂಜೆನೂ ಮಾಡ್ಸಿಲ್ಲ’ ಮಗಳ ಹುಟ್ಟುಹಬ್ಬ ಆಚರಿಸಲಾಗದೆ ರೇಷ್ಮಾ ಗಲ್ರಾನಿ ಬೇಸರ
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇಂದು ಅವರ ಜನುಮದಿನವಾಗಿದ್ದು ಅಬ್ಬರದ ಪಾರ್ಟಿಗಳಿಂದ ದೂರ ಇದ್ದಾರೆ. ಈ ಬಗ್ಗೆ ಸಂಜನಾ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ. ಅಬ್ಬರದ ಪಾರ್ಟಿಗಳಿಲ್ಲ, ಕೇಕ್ ಕಟಿಂಗ್ಗಳಿಲ್ಲ.. ವಿಷ್ ಗಳಿಲ್ಲ.. ಸ್ಟಾರ್ ನಟಿ ಸಂಜನಾ ತನ್ನ ಬರ್ತ್ ಡೇಯನ್ನು ಸ್ಟಾರ್ ಹೋಟೆಲ್ಗಳಲ್ಲಿ, ನಗರದ ಹೊರವಲಯದ ರೆಸಾರ್ಟ್ನಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಪರಪ್ಪನ ಅಗ್ರಹಾರ ಜೈಲಲ್ಲಿ ಸಂಜನಾ ಗಲ್ರಾನಿ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇಂದು ಅವರ ಜನುಮದಿನವಾಗಿದ್ದು ಅಬ್ಬರದ ಪಾರ್ಟಿಗಳಿಂದ ದೂರ ಇದ್ದಾರೆ. ಈ ಬಗ್ಗೆ ಸಂಜನಾ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ.
ಅಬ್ಬರದ ಪಾರ್ಟಿಗಳಿಲ್ಲ, ಕೇಕ್ ಕಟಿಂಗ್ಗಳಿಲ್ಲ.. ವಿಷ್ ಗಳಿಲ್ಲ.. ಸ್ಟಾರ್ ನಟಿ ಸಂಜನಾ ತನ್ನ ಬರ್ತ್ ಡೇಯನ್ನು ಸ್ಟಾರ್ ಹೋಟೆಲ್ಗಳಲ್ಲಿ, ನಗರದ ಹೊರವಲಯದ ರೆಸಾರ್ಟ್ನಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಪರಪ್ಪನ ಅಗ್ರಹಾರ ಜೈಲಲ್ಲಿ ಸಂಜನಾ ಗಲ್ರಾನಿ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಾಗಿದೆ. ಜೈಲಿನಲ್ಲಿರುವ ಸಂಜನಾ ತಮ್ಮ ಬರ್ತ್ ಡೇ ದಿನವಾದ ಇಂದು ಯಾರ ಸಂಪರ್ಕಕ್ಕೂ ಸಿಗದೆ ಇರಲು ಬಯಸಿದ್ದಾರೆ. ಕೇವಲ ಅಮ್ಮ-ಅಪ್ಪ ಕೊಟ್ಟ ಬಟ್ಟೆಯನ್ನು ತೊಟ್ಟು ಬರ್ತ್ ಡೇ ಆಚರಣೆ ಮಾಡಲಿದ್ದಾರೆ. ಸಂಜನಾಳಿಗೆ ಜೈಲಿನಲ್ಲಿ ಕೊಡೋ ರಾಗಿ ಮುದ್ದೆಯೇ ಇವತ್ತು ಟ್ರೀಟ್ ಆಗಿದೆ. ಕನಸು ಮನಸಲ್ಲೂ ಊಹಿಸದ ಬರ್ತ್ ಡೇ ದಿನ ಇಂದು ಸಂಜನಾಳಿಗೆ ಸಿಕ್ಕಿದೆ.
ಪ್ರತಿ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನ ಆಚರಿಸುತ್ತಿದ್ದೆವು: ಮಗಳನ್ನ ಭೇಟಿ ಮಾಡಲು ಅನುಮತಿ ಇಲ್ಲ. ಪ್ರತಿ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನ ಆಚರಿಸಲಾಗುತ್ತಿತ್ತು. ಆದ್ರೆ ಈ ಬಾರಿ ಅವಳ ಹೆಸರಲ್ಲಿ ಪೂಜೆ ಸಹ ಮಾಡಿಸಿಲ್ಲ. ದೇವಸ್ಥಾನಕ್ಕೂ ಹೋಗಿಲ್ಲ. ಏನೂ ಮಾಡಿಲ್ಲ ಎಂದು ಸಂಜನಾ ತಾಯಿ ರೇಷ್ಮಾ ಗಲ್ರಾನಿ ಬೇಸರ ವ್ಯಕ್ತಪಡಿಸಿದ್ದಾರೆ.
Published On - 11:18 am, Sat, 10 October 20