ಡಾ ಎಪಿಜೆ ಅಬ್ದುಲ್ ಕಲಾಂ ಅವರ ಚಿತ್ರ ಬಿಡಿಸಿ ಸೌಹಾರ್ದತೆ ಮತ್ತು ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ ಕಲಾವಿದ ರಾಹುಲ್
ಅಬ್ದುಲ್ ಕಲಾಂ ಅವರು ಧರ್ಮಾತೀತ ವ್ಯಕ್ತಿಯಾಗಿದ್ದರು ಎಂದು ಹೇಳುವ ರಾಹುಲ್ ಅವರು ಒಮ್ಮೆ ಅವರು ಕಾರ್ಯಕ್ರಮವೊಂದನ್ನು ದೀಪ ಬೆಳಗಿಸಿ ಉದ್ಘಾಟಿಸುವಾಗ ನಾನೊಬ್ಬ ಮುಸಲ್ಮಾನ, ಕ್ರಿಶ್ಚಿಯನ್ನರು ಬಳಸುವ ಕ್ಯಾಂಡಲ್ನಿಂದ ಹಿಂದೂ ಧರ್ಮವನ್ನು ಪ್ರತಿನಿಧಿಸುವ ಜ್ಯೋತಿಯನ್ನು ಬೆಳಗುತ್ತಿದ್ದೇನೆ ಅಂತ ಹೇಳುತ್ತಾರೆ. ಅವರು ಮಾಡಿದ್ದನ್ನೇ ನಾನು ಇಲ್ಲಿ ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ ಅಂತ ರಾಹುಲ್ ಹೇಳುತ್ತಾರೆ.
ಕೇವಲ ಕರ್ನಾಟಕ ಮಾತ್ರವಲ್ಲ ದೇಶದೆಲ್ಲೆಡೆ ಹಿಜಾಬ್ ಪರ-ವಿರೋಧ ಚರ್ಚೆಗಳು ಅಗುತ್ತಿವೆ. ರಾಜ್ಯದಲ್ಲಿ ಉದ್ಭವಿಸಿರುವ ಹಿತಕರವಲ್ಲದ ಸ್ಥಿತಿಯನ್ನು ಹೋಗಲಾಡಿಸಲು ಕೆಲ ಸೃಜನಶೀಲರು ಪ್ರಯತ್ನಿಸುತ್ತಿದ್ದಾರೆ. ಅವರಲ್ಲ ಒಬ್ಬರು ವಿಡಿಯೋನಲ್ಲಿ ಕಾಣುತ್ತಿರುವ ಕಲಾವಿದ ರಾಹುಲ್ (Rahul). ಇವರು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನವರಾಗಿದ್ದು ತಮ್ಮ ಕಲೆಯ ಮೂಲಕ ಸೌಹಾರ್ದತೆಯ (harmony) ಸಂದೇಶ ಸಾರುತ್ತಿದ್ದಾರೆ. ತಮ್ಮ ಸಂದೇಶಕ್ಕೆ ಅವರು ಆರಿಸಿಕೊಂಡಿರುವ ವ್ಯಕ್ತಿ ಯಾರು ಅಂತ ಗಮನಿಸಿ. ಭಾರತದ ರಾಷ್ಟ್ರಪತಿ ಮತ್ತು ಬಾಹ್ಯಾಕಾಶ ವಿಜ್ಞಾನಿ ಆಗಿದ್ದ ಎಪಿಜೆ ಅಬ್ದುಲ್ ಕಲಾಂ (Dr APJ Abdul Kalam). ಇವರಿಗಿಂತ ಸೂಕ್ತ ವ್ಯಕ್ತಿ ಬೇರೆ ಆಗಿರಲು ಸಾಧ್ಯ? ದೇವರಾಜ ಮೊಹಲ್ಲಾದ ಕೊತ್ವಾಲ್ ರಾಮಯ್ಯ ಗೋಡೆಯಲ್ಲಿ ಅವರು ಅಬ್ದುಲ್ ಕಲಾಂ ಚಿತ್ರ ಬರೆದು ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ. ಕಲಾವಿದ ರಾಹುಲ್ ಅವರೊಂದಿಗೆ ಟಿವಿ9 ಮೈಸೂರು ವರದಿಗಾರ ರಾಮ್ ಮಾತಾಡಿದ್ದಾರೆ.
ರಾಹುಲ್ ಬರೆದಿರುವ ಚಿತ್ರವನ್ನು ಗಮನಿಸಿ. ನಿಮಗೊಂದು ಶಾಲೆ ಕಾಣುತ್ತದೆ, ಅದರಲ್ಲಿ ಪುಸ್ತಕಗಳು, ಶಾಲೆಯ ಪಕ್ಕ ತಿರಂಗ ಹಾರಾಡುತ್ತಿದೆ, ಸಮವಸ್ತ್ರ ಧರಿಸಿ ಶಾಲಾ ಆವರಣ ಪ್ರವೇಶಿಸುತ್ತಿರುವ ಮಕ್ಕಳು, ಪ್ರತಿಭಟನೆ ಮಾಡುವುದನ್ನು ಸಾಂಕೇತಿಕವಾಗಿ ತೋರಿಸಿ ಅದರ ಮೇಲೆ ಕೆಂಪುಬಣ್ಣದಿಂದ ಎಕ್ಸ್ ಮಾರ್ಕ್ ಮಾಡಿದ್ದಾರೆ (‘ಇದು ಇಲ್ಲಿ ಸಲ್ಲದು’ ಅಂತ ಸೂಚಿಸುವ ಹಾಗೆ) ಮತ್ತು ಅದರ ಮುಂಭಾಗದಲ್ಲಿ ಕ್ಯಾಂಡಲ್ ಸಹಾಯದಿಂದ ಜ್ಯೋತಿ ಬೆಳಗುತ್ತಿರುವ ಅಬ್ದುಲ್ ಕಲಾಂ! ಅವರು ಬರೆದಿರುವ ಚಿತ್ರ ಬಹಳ ಅರ್ಥಗರ್ಭಿತವಾಗಿದೆ.
ಕಲಾವಿದನಿಗೆ ರಾಮ್ ಅದೇ ಪ್ರಶ್ನೆಯನ್ನು ಕೇಳಿದ್ದಾರೆ, ಈ ಚಿತ್ರದ ಮೂಲಕ ಏನು ಹೇಳಲು ಬಯಸುತ್ತೀರಿ? ಅಬ್ದುಲ್ ಕಲಾಂ ಅವರು ಧರ್ಮಾತೀತ ವ್ಯಕ್ತಿಯಾಗಿದ್ದರು ಎಂದು ಹೇಳುವ ರಾಹುಲ್ ಅವರು ಒಮ್ಮೆ ಅವರು ಕಾರ್ಯಕ್ರಮವೊಂದನ್ನು ದೀಪ ಬೆಳಗಿಸಿ ಉದ್ಘಾಟಿಸುವಾಗ ನಾನೊಬ್ಬ ಮುಸಲ್ಮಾನ, ಕ್ರಿಶ್ಚಿಯನ್ನರು ಬಳಸುವ ಕ್ಯಾಂಡಲ್ನಿಂದ ಹಿಂದೂ ಧರ್ಮವನ್ನು ಪ್ರತಿನಿಧಿಸುವ ಜ್ಯೋತಿಯನ್ನು ಬೆಳಗುತ್ತಿದ್ದೇನೆ ಅಂತ ಹೇಳುತ್ತಾರೆ. ಅವರು ಮಾಡಿದ್ದನ್ನೇ ನಾನು ಇಲ್ಲಿ ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ ಅಂತ ರಾಹುಲ್ ಹೇಳುತ್ತಾರೆ. ತಾನು ಚಿತ್ರಿಸಿರುವ ಜ್ಯೋತಿ ಶಿಕ್ಷಣವನ್ನು ಪ್ರತಿನಿಧಿಸುತ್ತದೆ ಅಂತ ಈ ಸೃಜನಶೀಲ ಕಲಾವಿದ ಹೇಳುತ್ತಾರೆ.
ಇದನ್ನೂ ಓದಿ: ಲತಾ ಮಂಗೇಶ್ಕರ್ಗೆ ಗೀತ ನಮನ, ಓ ಅಂಟಾವಾ ಹಾಡಿಗೆ ದಂಪತಿಯ ಸಖತ್ ಸ್ಟೆಪ್: ಇಲ್ಲಿದೆ ಈ ವಾರದ ಟಾಪ್ 5 ವೈರಲ್ ವಿಡಿಯೋ