ಸರಳ ದಸರಾ ಎಂದು ಸಂಪ್ರದಾಯವನ್ನೇ ಮರೆಯಿತಾ ಜಿಲ್ಲಾಡಳಿತ?.. ನಂದಿ ಧ್ವಜ ತಂಡಕ್ಕೆ ಸಿಗದ ಆಹ್ವಾನ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಸರಳ ದಸರಾ ಆಚರಣೆಗೆ ಮುಂದಾಗಿರುವ ಜಿಲ್ಲಾಡಳಿತವು ಸಂಪ್ರದಾಯವನ್ನೇ ಮರೆತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ, ಪ್ರತಿ ಬಾರಿ ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆಗೂ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಈ ಬಾರಿ ನಂದಿ ಧ್ವಜದ ತಂಡಕ್ಕೆ ಜಿಲ್ಲಾಡಳಿತ ಆಹ್ವಾನವನ್ನೇ ನೀಡಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಜೊತೆಗೆ, ಜಂಬೂ ಸವಾರಿಯ ಪ್ರಾರಂಭಕ್ಕೂ ಮುನ್ನ ಮುಖ್ಯಮಂತ್ರಿಗಳಿಂದ ನಂದಿಗೆ ಪ್ರಥಮ ಪೂಜೆ ಮಾಡಲಾಗುತ್ತಿತ್ತು. ಆದರೆ, ನಂದಿ […]

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಸರಳ ದಸರಾ ಆಚರಣೆಗೆ ಮುಂದಾಗಿರುವ ಜಿಲ್ಲಾಡಳಿತವು ಸಂಪ್ರದಾಯವನ್ನೇ ಮರೆತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.
ಇದಕ್ಕೆ ಸಾಕ್ಷಿಯೆಂಬಂತೆ, ಪ್ರತಿ ಬಾರಿ ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆಗೂ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಈ ಬಾರಿ ನಂದಿ ಧ್ವಜದ ತಂಡಕ್ಕೆ ಜಿಲ್ಲಾಡಳಿತ ಆಹ್ವಾನವನ್ನೇ ನೀಡಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಜೊತೆಗೆ, ಜಂಬೂ ಸವಾರಿಯ ಪ್ರಾರಂಭಕ್ಕೂ ಮುನ್ನ ಮುಖ್ಯಮಂತ್ರಿಗಳಿಂದ ನಂದಿಗೆ ಪ್ರಥಮ ಪೂಜೆ ಮಾಡಲಾಗುತ್ತಿತ್ತು. ಆದರೆ, ನಂದಿ ಧ್ವಜದ ತಂಡಕ್ಕೆ ಜಿಲ್ಲಾಡಳಿತ ಇದಕ್ಕೂ ಆಹ್ವಾನ ನೀಡಿಲ್ಲವೆಂಬ ಮಾತನ್ನು ನಂದಿ ಧ್ವಜ ಹೊರುವ ಉಡಿಗಾಲ ಮಹದೇವಪ್ಪ ಹೇಳಿದ್ದಾರೆ. ಸಾಕಷ್ಟು ವರ್ಷಗಳಿಂದ ನಂದಿ ಧ್ವಜದ ಸಂಪ್ರದಾಯವನ್ನ ನಡೆಸಿಕೊಂಡು ಬಂದಿರುವ ಮಹದೇವಪ್ಪ ಕುಟುಂಬದವರಿಗೆ ಈ ಬಾರಿ ಆಹ್ವಾನ ನೀಡದ ಜಿಲ್ಲಾಡಳಿತದ ನಡೆ ಚರ್ಚೆಗೆ ಗ್ರಾಸವಾಗಿದೆ.



