ಮಕ್ಕಳಿಗೆ ಹೊಡೆದರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ..
ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಚರ್ಚೆಗಳಿಗೆ ನಮ್ಮಲ್ಲಿ ಕೊರತೆಯೇ ಇಲ್ಲ. ಶಾಲೆಯಲ್ಲಿ, ಪಾರ್ಕ್ನಲ್ಲಿ, ಕುಟುಂಬ, ಗೆಳೆಯರು ಸೇರಿದಲ್ಲಿ.. ತಾಯಂದಿರು ಮಕ್ಕಳ ಬಗ್ಗೆ ಮಾತನಾಡಲು ಯಾವತ್ತೂ ಮುಂದಿರುತ್ತಾರೆ. ಪೆಟ್ಟು ಕೊಟ್ಟರಷ್ಟೇ ಮಕ್ಕಳಿಗೆ ಬುದ್ಧಿ ಬರುವುದು ಎಂಬ ಯೋಚನೆ ಕೆಲವರಿಗಿದ್ದರೆ ಮತ್ತೆ ಕೆಲವರು ನಾವು ನಮ್ ಮಕ್ಳಿಗೆ ಕೈ ಮಾಡೋದಿಲ್ಲ ಎಂದು ನಯವಾಗಿ ಹೇಳಿಬಿಡುತ್ತಾರೆ. ವಿಶ್ವದ ಹಲವು ರಾಷ್ಟ್ರಗಳು ಮಕ್ಕಳ ಮೇಲೆ ಕೈ ಮಾಡುವುದನ್ನು, ದೈಹಿಕ ದಂಡನೆ ನೀಡುವುದನ್ನು ನಿಷೇಧಿಸಿವೆ. ಇತ್ತೀಚೆಗಷ್ಟೇ ಬ್ರಿಟನ್ನಲ್ಲಿರುವ ಸ್ಕಾಟ್ಲ್ಯಾಂಡ್ ಪ್ರಾಂತ್ಯದ ಸರ್ಕಾರ ಹೆತ್ತವರೂ […]

ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಚರ್ಚೆಗಳಿಗೆ ನಮ್ಮಲ್ಲಿ ಕೊರತೆಯೇ ಇಲ್ಲ. ಶಾಲೆಯಲ್ಲಿ, ಪಾರ್ಕ್ನಲ್ಲಿ, ಕುಟುಂಬ, ಗೆಳೆಯರು ಸೇರಿದಲ್ಲಿ.. ತಾಯಂದಿರು ಮಕ್ಕಳ ಬಗ್ಗೆ ಮಾತನಾಡಲು ಯಾವತ್ತೂ ಮುಂದಿರುತ್ತಾರೆ. ಪೆಟ್ಟು ಕೊಟ್ಟರಷ್ಟೇ ಮಕ್ಕಳಿಗೆ ಬುದ್ಧಿ ಬರುವುದು ಎಂಬ ಯೋಚನೆ ಕೆಲವರಿಗಿದ್ದರೆ ಮತ್ತೆ ಕೆಲವರು ನಾವು ನಮ್ ಮಕ್ಳಿಗೆ ಕೈ ಮಾಡೋದಿಲ್ಲ ಎಂದು ನಯವಾಗಿ ಹೇಳಿಬಿಡುತ್ತಾರೆ.
ವಿಶ್ವದ ಹಲವು ರಾಷ್ಟ್ರಗಳು ಮಕ್ಕಳ ಮೇಲೆ ಕೈ ಮಾಡುವುದನ್ನು, ದೈಹಿಕ ದಂಡನೆ ನೀಡುವುದನ್ನು ನಿಷೇಧಿಸಿವೆ. ಇತ್ತೀಚೆಗಷ್ಟೇ ಬ್ರಿಟನ್ನಲ್ಲಿರುವ ಸ್ಕಾಟ್ಲ್ಯಾಂಡ್ ಪ್ರಾಂತ್ಯದ ಸರ್ಕಾರ ಹೆತ್ತವರೂ ಮಕ್ಕಳಿಗೆ ಹೊಡೆಯಬಾರದು ಎಂದಿದೆ. Beating Child
ಆ ದೇಶದಲ್ಲಿ ಏನೋ ರೂಲ್ಸ್ ಮಾಡಿದ್ರೆ ನಾವೇನ್ ಮಾಡೋಣ? ನಮ್ ಮಕ್ಳಿಗೆ ನಾವ್ ಹೊಡೆದ್ರೆ ಕೇಳೋಕ್ ನೀವ್ಯಾರು ಅಂತ ನೀವು ಅಂದುಕೊಳ್ಳಬಹುದು. ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
* ಇತರರ ಮೇಲೆ ಕೈ ಮಾಡಲು ಕಲಿಯಬಹುದು: ಮಕ್ಕಳು ತಮ್ಮ ಹೆತ್ತವರ ನಡವಳಿಕೆಯನ್ನು ನೋಡಿ ಹಲವು ವಿಚಾರಗಳನ್ನು ಕಲಿಯುತ್ತಾರೆ. ಅವರ ಸಣ್ಣ ತಪ್ಪಿಗೂ ನೀವು ಏಟು ಕೊಡುತ್ತಾ ಇದ್ದರೆ, ಇತರರಿಗೆ ಪೆಟ್ಟು ಕೊಡುವುದನ್ನು ಮಕ್ಕಳು ಅಭ್ಯಾಸ ಮಾಡಿಕೊಳ್ಳಬಹುದು.
* ನಿಮ್ಮ ಬೆಲೆ ಕಳೆದುಕೊಳ್ಳುವಿರಿ: ಅತಿಯಾಗಿ ಹೊಡೆಯುವ ಅಭ್ಯಾಸ ಮಕ್ಕಳಿಗೆ ನಿಮ್ಮ ಮೇಲಿನ ಪ್ರೀತಿ, ಗೌರವ ಕಡಿಮೆಯಾಗುವಂತೆ ಮಾಡಬಹುದು. ಹೆತ್ತವರ ಬಗ್ಗೆ ಭಯವೇ ಹೆಚ್ಚಾಗಿ, ಮಾತನಾಡಲೂ ಅಂಜಿಕೆ ಉಂಟಾಗಬಹುದು.
* ಆತ್ಮವಿಶ್ವಾಸಕ್ಕೆ ಧಕ್ಕೆ: ಪ್ರತೀ ಬಾರಿ ಪೆಟ್ಟು ತಿನ್ನುತ್ತಿದರೆ ಮಕ್ಕಳಿಗೆ ತಮ್ಮ ಮೇಲೆ ಕೀಳರಿಮೆ ಉಂಟಾಗಬಹುದು. ಎಲ್ಲದಕ್ಕೂ ಹೊಡೆಸಿಕೊಂಡು, ಅವರ ಆತ್ಮವಿಶ್ವಾಸ ಕುಗ್ಗಿಹೋಗಬಹುದು. ಇದರಿಂದ ಭವಿಷ್ಯದ ದಿನಗಳಿಗೆ ಸಮಸ್ಯೆ ಉಂಟಾಗಬಹುದು.
* ತಿರುಗಿ ಬೀಳಬಹುದು: ಮಕ್ಕಳು ತಪ್ಪು ಮಾಡಿದ್ದಕ್ಕೆ ಶಿಕ್ಷಿಸುವ ಭರದಲ್ಲಿ ಸಿಟ್ಟು ಅತಿಯಾದರೆ ಅವರಿಗೆ ಹಿಂಸೆಯಾಗಬಹುದು. ಏನೇ ಮಾಡಿದರೂ ಹೊಡೆಯುತ್ತಾರೆ, ಅದಕ್ಕಿಂತ ಹೆಚ್ಚೇನು ಮಾಡುತ್ತಾರೆ? ಎಂಬ ಉಡಾಫೆಯ ಪ್ರಶ್ನೆ ಅವರ ತಲೆಗೆ ಬರಬಹುದು. ಹೀಗೆ ಮಕ್ಕಳು ನಿಮಗೇ ತಿರುಗಿ ಬೀಳುವ ಸಾಧ್ಯತೆಯೂ ಇದೆ.
* ಸಿಟ್ಟು ಹೆಚ್ಚಬಹುದು: ಹೆತ್ತವರು ಸಿಟ್ಟಾಗುವುದು ಮಕ್ಕಳ ಸಿಟ್ಟನ್ನೂ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಸಿಟ್ಟಿನ ಗುಣಗಳನ್ನು ಮಕ್ಕಳು ಗಮನಿಸಿ ಅಳವಡಿಸಿಕೊಳ್ಳಬಹುದು. ಸಿಟ್ಟಾಗುವುದು ಸಹಜ ಪ್ರಕ್ರಿಯೆಯಂತೆ ಮಗುವಿನ ಜೀವನದ ಭಾಗವಾಗಬಹುದು.
* ಮಾನಸಿಕ ಯಾತನೆ: ಒಂದೇಟು ಕೊಟ್ಟರೆ ಎರಡು ನಿಮಿಷ ಅಳುತ್ತಾನೆ/ಳೆ ಅಷ್ಟೆ ಅಂತಾ ನೀವು ಭಾವಿಸಿದರೆ ಅದು ತಪ್ಪು. ಪದೇಪದೇ ಏಟು ಕೊಡುವುದು ಮಕ್ಕಳ ದೇಹದ ಮೇಲೆ ಮಾತ್ರವಲ್ಲ, ಮನಸ್ಸಿನ ಮೇಲೆಯೂ ಪರಿಣಾಮ ಬೀರುತ್ತೆ. ಮಾನಸಿಕ ನೋವು ದೀರ್ಘಕಾಲ ಅವರನ್ನು ಕಾಡಬಹುದು.
ಹೊಡೆಯುವ ಬದಲು ಹೀಗೆ ಮಾಡಿ.. ತಪ್ಪು ಮಾಡಿದಾಗ ಮಕ್ಕಳಿಗೆ ಹೊಡೆಯುವುದೊಂದೇ ಪರಿಹಾರವಲ್ಲ. ಪ್ರೀತಿ, ತಾಳ್ಮೆಯಿಂದ ಅವರಿಗೆ ಬುದ್ಧಿ ಹೇಳಿ. ಸರಿ ದಾರಿ ಅನುಸರಿಸುವಂತೆ ತಿಳಿಸಿಕೊಡಿ. ಮಕ್ಕಳು ಸಣ್ಣಪುಟ್ಟ ತಪ್ಪನ್ನು ಮಾಡುವುದು ಸಹಜ. ಅದರಿಂದ ನೀವು ಅತಿಯಾಗಿ ಕೋಪಗೊಳ್ಳಬೇಡಿ. ಸಿಟ್ಟನ್ನು ಮಕ್ಕಳ ಮೇಲೆ ತೋರಿ ಕೂಗಾಡಬೇಡಿ. ನಿಮ್ಮ ಸಿಟ್ಟನ್ನು ಅವರ ಮೇಲೆ ಹೊರಿಸಬೇಡಿ. ಮಕ್ಕಳ ಉನ್ನತಿಯನ್ನು ಗಮನದಲ್ಲಿರಿಸಿಕೊಂಡು ವರ್ತಿಸಿ.




