AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾ! ಸ್ವೆಟರ್ ಲೋಕ ಅದೆಷ್ಟು ದೊಡ್ಡದು.. ಏನೆಲ್ಲಾ ಇವೆ ಇಲ್ಲಿ?

ಚಳಿಗಾಲ ಬಂತೆಂದರೆ ಸಾಕು ಎಲ್ಲರ ಗಮನ ಸೆಳೆಯುತ್ತಾನೆ ಈ ಕಲರ್​ಫುಲ್ ಕಲಾವಿದ. ಎಂತಹ ಚಳಿಯಲ್ಲೂ ಮೈ ಬೆಚ್ಚಗಾಗಿಸ್ತಾನೆ ಕಣ್ರಿ, ಒಂದೊಮ್ಮೆ ಇವನೊಂದಿಗೆ ಸಂಬಂಧ ಬೆಸೆದರೆ ಸಾಕು ಮತ್ತೆ ನಡುಕ ಶುರುವಾಗೋ ಮಾತೇ ಇಲ್ಲ. ಹಾಗಿದ್ರೆ ಯಾರು ಆ ನಿಪುಣ ಅಂತೀರಾ? ನಾನು ಹೇಳುತ್ತಿರುವ ಚಳಿಗಾಲದ ಜೊತೆಗಾರ ಬೇರೆ ಯಾರು ಅಲ್ಲ; ಅದು ಬೆಚ್ಚಗಿನ ಸ್ವೆಟರ್. ಚಳಿಯನ್ನು ಮೈಯಿಂದ ಓಡಿಸುವ ಸ್ವೆಟರ್​ಗೆ ಶರಣು ಎನ್ನದವರೇ ಇಲ್ಲ. ಚಳಿಗಾಲ ಬಂತೆಂದರೆ ಸಾಕು ಸ್ವೆಟರ್​ನ ಕ್ರೇಜ್ ಶುರುವಾಗುತ್ತೆ. ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ, […]

ಆಹಾ! ಸ್ವೆಟರ್ ಲೋಕ ಅದೆಷ್ಟು ದೊಡ್ಡದು.. ಏನೆಲ್ಲಾ ಇವೆ ಇಲ್ಲಿ?
ಸಾಧು ಶ್ರೀನಾಥ್​
|

Updated on: Nov 23, 2020 | 6:22 PM

Share

ಚಳಿಗಾಲ ಬಂತೆಂದರೆ ಸಾಕು ಎಲ್ಲರ ಗಮನ ಸೆಳೆಯುತ್ತಾನೆ ಈ ಕಲರ್​ಫುಲ್ ಕಲಾವಿದ. ಎಂತಹ ಚಳಿಯಲ್ಲೂ ಮೈ ಬೆಚ್ಚಗಾಗಿಸ್ತಾನೆ ಕಣ್ರಿ, ಒಂದೊಮ್ಮೆ ಇವನೊಂದಿಗೆ ಸಂಬಂಧ ಬೆಸೆದರೆ ಸಾಕು ಮತ್ತೆ ನಡುಕ ಶುರುವಾಗೋ ಮಾತೇ ಇಲ್ಲ. ಹಾಗಿದ್ರೆ ಯಾರು ಆ ನಿಪುಣ ಅಂತೀರಾ?

ನಾನು ಹೇಳುತ್ತಿರುವ ಚಳಿಗಾಲದ ಜೊತೆಗಾರ ಬೇರೆ ಯಾರು ಅಲ್ಲ; ಅದು ಬೆಚ್ಚಗಿನ ಸ್ವೆಟರ್. ಚಳಿಯನ್ನು ಮೈಯಿಂದ ಓಡಿಸುವ ಸ್ವೆಟರ್​ಗೆ ಶರಣು ಎನ್ನದವರೇ ಇಲ್ಲ. ಚಳಿಗಾಲ ಬಂತೆಂದರೆ ಸಾಕು ಸ್ವೆಟರ್​ನ ಕ್ರೇಜ್ ಶುರುವಾಗುತ್ತೆ. ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ವಯಸ್ಸಾದವರಿಗೆ ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ತರನಾದ ಕಲರ್​ಫುಲ್ ವಿನ್ಯಾಸದ ಸ್ವೆಟರ್​ಗಳಿವೆ. ‘ಈ ಬಾರಿ ಕೊರೊನಾ ಸೋಂಕು ಭಯ ಹುಟ್ಟಿಸಿದ್ದು, ಗಾಳಿ ಮತ್ತು ಶೀತದಿಂದ ದೂರವಿರಲು ಜನರು ಸ್ವೆಟರ್​ಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಗೆ ಚಳಿ ಹೊಡೆದೋಡಿಸುವ ಬೆಚ್ಚನೆಯ ಲೈಟ್​ವೇಟ್ ವುಲ್ಲನ್ ಸ್ವೇಟರ್​ಗಳು ಆಗಮಿಸಿದ್ದು, ಇವುಗಳ ಬಳಕೆಯ ಅನುಭವ ಅತ್ಯುತ್ತಮವಾಗಿದೆ’ ಎಂದು ಸ್ಟೈಲಿಷ್ ಅಮಿತ್ ಹೇಳಿದರು.

ಸ್ವೆಟರ್​ನಲ್ಲಿ ಅದೆಷ್ಟು ವಿಧಗಳು? ಸ್ವೆಟರ್​ಗಳಲ್ಲೂ ಸಾಕಷ್ಟು ವೈವಿಧ್ಯತೆಯಿದೆ. ಕಾಲರ್​ನ ಭಾಗದಲ್ಲಿ ಮಡಚಿದ ಬಟ್ಟೆಯ ಮೂಲಕ ಜನರನ್ನು ಆಕರ್ಷಿಸುವ ಕಾರ್ಡಿಜನ್ ಸ್ವೆಟರ್​ನ ವಿಶಿಷ್ಟ ವಿನ್ಯಾಸ ಗಮನ ಸೆಳೆಯುತ್ತದೆ. ಇದು ಹೆಚ್ಚು ಉಷ್ಣತೆಯನ್ನು ನೀಡುತ್ತದೆ. ಗುಂಡಿಗಳಿಲ್ಲದ ಪುಲ್ಲೋವರ್ ಸ್ವೆಟರ್ ಈ ಕಾಲದ ಟ್ರೆಂಡ್. ಇನ್ನು ಕ್ರೊನೆಕ್ ಸ್ವೆಟರ್, ವಿ-ನೆಕ್ ಸ್ವೆಟರ್, ಟ್ಯೂನಿಕ್ ಸ್ವೆಟರ್, ಟರ್ಟಲ್​ನೆಕ್ ಸ್ವೆಟರ್​ಗಳನ್ನು ಧರಿಸಿದವರೂ ಆಗಾಗ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ.

ಯಾರಿಗೆ ಎಂಥದ್ದು ಚಂದ ವುಲ್ಲನ್ ಸ್ವೆಟರ್​ಗಳು ಭಾರಿ ತೂಕವಿರುವುದಿಲ್ಲ. ಹವಾಮಾನಕ್ಕೆ ತಕ್ಕಂತೆ ಇವುಗಳನ್ನು ತಯಾರಿಸಲಾಗುತ್ತದೆ. ಟಾಪ್​ನಂತೆ, ಟ್ರೆಂಚ್ ಕೋಟ್​ನಂತೆ, ಡ್ರೆಸ್​ನಂತೆ ಕಾಣುವ ವುಲ್ಲನ್ ಸ್ವೆಟರ್​ಗಳು ಮಹಿಳೆಯರಿಗೆ ಮೆಚ್ಚು. ಪುಲ್​ಓವರ್​ ಹಾಗೂ ಟೀ ಶರ್ಟ್​ನಂತಹ ಫುಲ್ ಸ್ಲೀವ್​, ಸಾದಾ ಡಬ್ಬಲ್ ಶೇಡ್ ವುಲ್ಲನ್ ಸ್ವೆಟರ್​ಗಳನ್ನು ಪುರುಷರು ಇಷ್ಟಪಡುತ್ತಾರೆ.

ಮೃದು ಅನುಭವ ನೀಡುವ ವುಲ್ಲನ್ ಸ್ವೆಟರ್​ಗಳು ವಯಸ್ಸಾದವರಿಗೆ ಹಾಯೆನಿಸುತ್ತದೆ. ಮಕ್ಕಳಿಗಾಗಿ ಛೋಟಾ ಭೀಮ್ ಮತ್ತು ಮಿಕ್ಕಿ ಮೌಸ್​ ವಿನ್ಯಾಸ ಹೊಂದಿರುವ ಕಲರ್​ಫುಲ್ ಸ್ವೆಟರ್​ಗಳು ಮಾರುಕಟ್ಟೆಗೆ ಬಂದಿವೆ.

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು