ಮದುವೆ ಪೂರ್ವ ಶಾಸ್ತ್ರಕ್ಕೆ 32 ವರ್ಷ ಹಳೆಯ ಸೀರೆಯುಟ್ಟ ಚಿರಂಜೀವಿ ತಮ್ಮನ ಪುತ್ರಿ; ಈ ನೀಲಿ ಸೀರೆಯೇ ಯಾಕೆ?

ಪ್ರೀ ವೆಡ್ಡಿಂಗ್​ ಆಚರಣೆಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ನಿಹಾರಿಕ ಉಟ್ಟ ಸೀರೆ ಇದೀಗ ಸುದ್ದಿಯಾಗಿದೆ.

ಮದುವೆ ಪೂರ್ವ ಶಾಸ್ತ್ರಕ್ಕೆ 32 ವರ್ಷ ಹಳೆಯ ಸೀರೆಯುಟ್ಟ ಚಿರಂಜೀವಿ ತಮ್ಮನ ಪುತ್ರಿ; ಈ ನೀಲಿ ಸೀರೆಯೇ ಯಾಕೆ?
ತಾಯಿ ಪದ್ಮಜಾ ಮತ್ತು ನಿಹಾರಿಕಾ 

Updated on: Dec 07, 2020 | 1:13 PM

ಹೈದರಾಬಾದ್: ಮೆಗಾಸ್ಟಾರ್​ ಚಿರಂಜೀವಿ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಅವರ ಸಹೋದರ ನಾಗಾ ಬಾಬು ಪುತ್ರಿ, ನಟಿ ನಿಹಾರಿಕಾ ಕೊನಿಡೆಲ -ಚೈತನ್ಯ ಜೆವಿ ವಿವಾಹ ಡಿ. 9ರಂದು ಉದಯ್​ಪುರದಲ್ಲಿ ನಡೆಯಲಿದ್ದು, ಈಗಾಗಲೇ ಮದುವೆ ಪೂರ್ವ ಕಾರ್ಯಕ್ರಮ, ಶಾಸ್ತ್ರಗಳು ಹೈದರಾಬಾದ್​ನ ಮನೆಯಲ್ಲಿ ಶುರುವಾಗಿವೆ. ಪ್ರೀ ವೆಡ್ಡಿಂಗ್​ ಆಚರಣೆಗಳ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ನಿಹಾರಿಕ ಉಟ್ಟ ಸೀರೆ ಇದೀಗ ಸುದ್ದಿಯಾಗಿದೆ.

ವಿವಾಹಕ್ಕೆ ಮೊದಲು ನಡೆದ ಶಾಸ್ತ್ರವೊಂದರಲ್ಲಿ ನಿಹಾರಿಕಾ ತನ್ನ ಅಮ್ಮ ನಿಶ್ಚಿತಾರ್ಥದ ವೇಳೆ ಉಟ್ಟಿದ್ದ ಸೀರೆಯನ್ನೇ ತಾನೂ ತೊಟ್ಟರು. ಅಂದರೆ 32 ವರ್ಷಗಳ ಹಿಂದೆ ಅವರ ತಾಯಿ ಪದ್ಮಜಾ ತಮ್ಮ ನಿಶ್ಚಿತಾರ್ಥದ ದಿನ ಉಟ್ಟಿದ್ದ ನೀಲಿ ಸೀರೆಯನ್ನು ನಿಹಾರಿಕಾ ತನ್ನ ಮದುವೆ ಮುನ್ನಾ ನಡೆಯುವ ಆಚರಣೆಯಲ್ಲಿ ಉಟ್ಟುಕೊಳ್ಳುವ ಮೂಲಕ ಇಡೀ ಕಾರ್ಯಕ್ರಮವನ್ನು ಭಾವನಾತ್ಮಕವಾಗಿಸಿದರು.

ತಮ್ಮ ಇನ್ಸ್ಟಾಗ್ರಾಮನಲ್ಲಿ ಅಂದು ಅದೇ ಸೀರೆ ಉಟ್ಟಿದ್ದ ಅಮ್ಮನ ಫೋಟೋದೊಂದಿಗೆ, ತನ್ನ ಇಂದಿನ ಫೋಟೋವನ್ನು ಕೊಲ್ಯಾಜ್​ ಮಾಡಿ ಹಾಕಿದ್ದಾರೆ. ಬಂಗಾರ ಬಣ್ಣದ ದೊಡ್ಡ ಬಾರ್ಡರ್​ ಉಳ್ಳ ನೀಲಿ ಸೀರೆ ತುಂಬ ಆಕರ್ಷಣೀಯವಾಗಿದೆ ಎಂದು ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ. ಇನ್ನು ಮಗಳನ್ನು ಆ ಸೀರೆಯಲ್ಲಿ ನೋಡಿದ ನಾಗಾ ಬಾಬು ಕೂಡ ಕಾಮೆಂಟ್ ಮಾಡಿ, ನನ್ನ ಪತ್ನಿ ತುಂಬ ಮುದ್ದಾಗಿ ಕಾಣುತ್ತಿದ್ದಾಳೆ.. ಆದ್ರೆ ನನ್ನ ನಿಹಾ ತಲ್ಲಿ ಪಕ್ಕಾ ಏಂಜೆಲ್​ ಎಂದಿದ್ದಾರೆ.

ತಾಯಿ ಪದ್ಮಜಾ ಮತ್ತು ನಿಹಾರಿಕಾ

Published On - 1:09 pm, Mon, 7 December 20

Lakshmi Hegde
Loading...
Unable to load recommendations.
Follow Us