SSLC Exam 2020: ಹೊಸಕೋಟೆ, ಮಾಲೂರು ಡಿಪೋ ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ
ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ಬೆಂಗಳೂರು ಗ್ರಾಮಾಂತರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಹೊಸಕೋಟೆಯ ಕೊರಟಿ, ಯರಕನಹಳ್ಳಿ, ಬೈಲನರಸಾಪುರ, ತಾವರೆಕೆರೆ ಸುತ್ತಾಮುತ್ತಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಲು ಸಕಾಲಕ್ಕೆ ಬಸ್ ಸಿಗುತ್ತಿಲ್ಲ. ಹೊಸಕೋಟೆ ಹಾಗೂ ಮಾಲೂರು ಡಿಪೋದಿಂದ ಬಸ್ಸುಗಳನ್ನು ಆಪರೇಟ್ ಮಾಡಬೇಕಿತ್ತು. ಆದ್ರೆ ಬಸ್ ಆಪರೇಟ್ ಮಾಡದ ಹಿನ್ನೆಲೆ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಕೆಲ ವಿದ್ಯಾರ್ಥಿಗಳು ಬೈಕ್ ನಲ್ಲಿ ಪರೀಕ್ಷೆಗೆ […]
Follow us on
ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ಬೆಂಗಳೂರು ಗ್ರಾಮಾಂತರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ.
ಹೊಸಕೋಟೆಯ ಕೊರಟಿ, ಯರಕನಹಳ್ಳಿ, ಬೈಲನರಸಾಪುರ, ತಾವರೆಕೆರೆ ಸುತ್ತಾಮುತ್ತಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಲು ಸಕಾಲಕ್ಕೆ ಬಸ್ ಸಿಗುತ್ತಿಲ್ಲ. ಹೊಸಕೋಟೆ ಹಾಗೂ ಮಾಲೂರು ಡಿಪೋದಿಂದ ಬಸ್ಸುಗಳನ್ನು ಆಪರೇಟ್ ಮಾಡಬೇಕಿತ್ತು. ಆದ್ರೆ ಬಸ್ ಆಪರೇಟ್ ಮಾಡದ ಹಿನ್ನೆಲೆ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಕೆಲ ವಿದ್ಯಾರ್ಥಿಗಳು ಬೈಕ್ ನಲ್ಲಿ ಪರೀಕ್ಷೆಗೆ ತೆರಳಿದ್ದಾರೆ.
ಆತಂಕದ ಸಂಗತಿಯೆಂದ್ರೆ..
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಕೊರಟಿ, ಯರಕನಹಳ್ಳಿ, ಬೈಲನರಸಾಪುರ, ತಾವರೆಕೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಹೋಗಲು ಆಗದ ಹಿನ್ನೆಲೆ ಮನೆಗೆ ವಾಪಸಾಗುತ್ತಿದ್ದಾರೆ. ಇದರಿಂದ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ.